Asianet Suvarna News Asianet Suvarna News

Dolly Dhananjay : ಹೊರ ನಡೆದ ಡಾರ್ಲಿಂಗ್ ಕೃಷ್ಣ! ಐತಿಹಾಸಿಕ 'ಹಲಗಲಿ' ಸಿನಿಮಾದಲ್ಲಿ ಡಾಲಿ!

ನಟ ಡಾಲಿಗೆ ಅಲ್ಲಮಪ್ರಭುದಂತಹ ಐತಿಹಾಸಿಕ ಸಿನಿಮಾ ಮಾಡಿದ ಅನುಭವವಿದೆ. ಸದ್ಯ ಕೋಟಿ ಎನ್ನುವ ಮಾಸ್ ಥ್ರಿಲರ್ ಚಿತ್ರದಲ್ಲಿ ನಟಿಸುತ್ತಿರುವ ಇವರು ಹಲಗಲಿಯಲ್ಲಿ ಬಣ್ಣ ಹಚ್ಚಲಿದ್ದಾರೆ ಎಂದು ತಿಳಿದುಬಂದಿದೆ. 

ಕನ್ನಡದ ಬಹು ಕೋಟಿ ವೆಚ್ಚದ ಸಿನಿಮಾ ಹಲಗಲಿಗೆ (Halagali) ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಡಾರ್ಲಿಂಗ್ ಕೃಷ್ಣ (Darling Krishna)  ಈ ಚಿತ್ರದಿಂದ ಹೊರನಡೆದಿದ್ದರು. ಈ ಬೆನ್ನಲ್ಲೇ ಚಿತ್ರದ ಲೀಡ್ ಪಾತ್ರಕ್ಕೆ ನಟರಾಕ್ಷಸ ಡಾಲಿ ಎಂಟ್ರಿ ಕೊಡುವ ಬಗ್ಗೆ ಸುದ್ದಿ ಗಾಂಧಿನಗರದಲ್ಲಿ ದಟ್ಟವಾಗಿ ಹಬ್ಬಿದೆ. ಇನ್ನು ಹಲಗಲಿ ಸಿನಿಮಾ ಅತೀ ದೊಡ್ಡ ಪ್ರಾಜೆಕ್ಟ್ ಆಗಿದ್ದು, ಸಿನಿಮಾ ಕಥೆ ಮತ್ತು ಪಾತ್ರದ ಬಗ್ಗೆ ಡಾಲಿ ಧನಂಜಯ್‌ (Dolly Dhananjay) ಜೊತೆ ಚಿತ್ರತಂಡ ಮಾತುಕತೆ ನಡೆಸಿದೆ ಎನ್ನಲಾಗಿದೆ. ಈ ಚಿತ್ರದ ಶೂಟಿಂಗ್‌ ಶೀಘ್ರದಲ್ಲೇ ಜರುಗಲಿದೆ ಎನ್ನಲಾಗಿದೆ. 

ಇನ್ನು ನಟ ಡಾಲಿಗೆ ಅಲ್ಲಮಪ್ರಭುದಂತಹ ಐತಿಹಾಸಿಕ ಸಿನಿಮಾ ಮಾಡಿದ ಅನುಭವವಿದೆ. ಸದ್ಯ ಕೋಟಿ ಎನ್ನುವ ಮಾಸ್ ಥ್ರಿಲರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಟ ಕಮ್ ನಿರ್ಮಾಪಕ ಡಾಲಿ ಧನಂಜಯ್ ಕನ್ನಡದ ಜೊತೆ ಪರಭಾಷಾ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಪುಷ್ಪ 2 ನಲ್ಲೂ ನಟಿಸಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆ ಮೂಲಕ ಹೊಸ ಪ್ರತಿಭೆಗಳಿಗೆ ಡಾಲಿ ಅವಕಾಶ ನೀಡುತ್ತಿದ್ದಾರೆ.  

ಹಲಗಲಿ ಸಿನಿಮಾ ವಿಚಾರಕ್ಕೆ ಬಂದರೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗೆರಿಲ್ಲಾ ವಾರ್ ಮಾಡುವ ಮೂಲಕ ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದ ಹಲಗಲಿ ಬೇಡರ ಕಥೆಯನ್ನು ಸಿನಿಮಾ ನಿರ್ದೇಶಕ ಸುಕೇಶ್ ಡಿ.ಕೆ. ಮಾಡುತ್ತಿದ್ದಾರೆ. ಇದೊಂದು ಐತಿಹಾಸಿಕ ಸಿನಿಮಾವಾಗಿದ್ದರಿಂದ ಮತ್ತು ಆ ಕಾಲ ಘಟ್ಟವನ್ನು ಕಟ್ಟಿ ಕೊಡಬೇಕಾಗಿದ್ದರಿಂದ ಬರೋಬ್ಬರಿ 80 ಕೋಟಿ ರೂಪಾಯಿಯನ್ನು ಈ ಸಿನಿಮಾಗಾಗಿ ಖರ್ಚು ಮಾಡುತ್ತಿದ್ದಾರೆ ನಿರ್ಮಾಪಕ ಕಲ್ಯಾಣ್ ಚಕ್ರವರ್ತಿ ಧೂಳಿಪಳ್ಯ.

ಇದನ್ನೂ ವೀಕ್ಷಿಸಿ: Mohanlal: ಅಣ್ಣಾವ್ರ ಹಾಡನ್ನು ಹಾಡಿದ ಮಲಯಾಳಂ ನಟ! ಕನ್ನಡ ಕೇಳಿ ನೆಟ್ಟಿಗರು ಖುಷ್ !