Asianet Suvarna News Asianet Suvarna News

Mohanlal: ಅಣ್ಣಾವ್ರ ಹಾಡನ್ನು ಹಾಡಿದ ಮಲಯಾಳಂ ನಟ! ಕನ್ನಡ ಕೇಳಿ ನೆಟ್ಟಿಗರು ಖುಷ್ !

ಎಂದೆಂದೂ ನಿನ್ನನ್ನು ಮರೆತು ಬದುಕಿರಲಾರೆ ಎಂದು ಹಾಡಿದ ಮೋಹನ್ ಲಾಲ್. ಕನ್ನಡ ಕೇಳಿ ಖುಷ್ ಆದ ನೆಟ್ಟಿಗರು. 

ರಾಜ್‌ಕುಮಾರ್ ನಟನೆಯ ‘ಎರಡು ಕನಸು’ ಸಿನಿಮಾದ ‘ಎಂದೆಂದೂ ನಿನ್ನನು ಮರೆತು..’ ಹಾಡನ್ನು(Endendu ninnanu maretu) ಹಾಡಲು ಪ್ರಯತ್ನಿಸಿದ್ದಾರೆ ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ ಲಾಲ್‌(Mohanlal). ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಲಯಾಳಂನ ಸೂಪರ್ ಸ್ಟಾರ್. ಅವರಿಗೆ ವರನಟ ಡಾ. ರಾಜ್‌ಕುಮಾರ್(DR.Rajkumar) ಜೊತೆ ಒಳ್ಳೆಯ ಬಾಂಧವ್ಯ ಇತ್ತು. ಇದಕ್ಕೆ ಸಾಕ್ಷಿ ಎಂಬಂತೆ ಹೊಸ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮೋಹನ್‌ ಲಾಲ್ ಅವರು ರಾಜ್‌ಕುಮಾರ್ ನಟನೆಯ ‘ಎರಡು ಕನಸು’ ಸಿನಿಮಾದ(yaradu kanasu) ‘ಎಂದೆಂದೂ ನಿನ್ನನು ಮರೆತು..’ ಹಾಡನ್ನು ಹಾಡಲು ಪ್ರಯತ್ನಿಸಿದ್ದಾರೆ. ಮೋಹನ್‌ ಲಾಲ್ ಅವರು ಮಲಯಾಳಂನಲ್ಲಿ(Malayalam) ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರಿಗೆ ಕನ್ನಡದಲ್ಲೂ ಅಭಿಮಾನಿಗಳು ಇದ್ದಾರೆ. ಮೇ 21ರಂದು ಮೋಹನ್‌ ಲಾಲ್ ಜನ್ಮದಿನ. ಅವರಿಗೆ ಎಲ್ಲರೂ ಅಡ್ವಾನ್ಸ್ ಆಗಿ ಶುಭಾಶಯ ತಿಳಿಸುತ್ತಿದ್ದಾರೆ. ಅಪ್ಪು ಜೊತೆ  ಪೃಥ್ವಿಯಲ್ಲಿ ಮೋಹನ್ ಲಾಲ್ ಕನ್ನಡದಲ್ಲಿ ನಟಿಸಿದ್ದರು.

ಇದನ್ನೂ ವೀಕ್ಷಿಸಿ:  ಜೂ.ಎನ್‌ಟಿಆರ್‌ ಭಾಷಾ ಪ್ರೇಮಕ್ಕೆ ಕನ್ನಡಿಗರು ಫಿದಾ! ಯಂಗ್ ಟೈಗರ್ ಕನ್ನಡ ಪ್ರೀತಿಗೆ ಸಾಕ್ಷಿ ಈ ಘಟನೆಗಳು!