Hombale Films: ಮತ್ತೊಂದು ಬಿಗ್ ಬಜೆಟ್ ಸಿನಿಮಾಗೆ ಹೊಂಬಾಳೆ ಪ್ಲ್ಯಾನ್..! ಈ ಭಾರಿ ಸಿಕ್ಕ ಆ ಸ್ಟಾರ್ ಹೀರೋ ಯಾರು..?

ಹೊಂಬಾಳೆ ಫಿಲ್ಮ್ಸ್‌ ಇದು ಸ್ಯಾಂಡಲ್‌ವುಡ್ ಪ್ರೈಡ್. ಭಾರತೀಯ ಚಿತ್ರರಂಗಲ್ಲಿ ಬಿಗ್ ಬಜೆಟ್ ಸಿನಿಮಾಗಳನ್ನ ಕೊಡುತ್ತಿರೋ ಹೊಂಬಾಳೆ ಇಂದು ಹೆಮ್ಮರವಾಗಿ ಬೆಳೆದಿದೆ. ಹೊಂಬಾಳೆ ಸಾರಥಿ ವಿಜಯ್ ಕಿರಗಂಧೂರು, ಚಿತ್ರ ಪ್ರೇಮಿಗಳನ್ನ ರಂಜಿಸೋಕೆ ಐದು ವರ್ಷದಲ್ಲಿ 3 ಸಾವಿರ ಕೋಟಿಯನ್ನ ಸಿನಿ ರಂಗದ ಮೇಲೆ ಹೂಡುತ್ತಿದ್ದೇವೆ ಅಂತ ಹೇಳಿದ್ರು.

First Published Jan 8, 2024, 10:38 AM IST | Last Updated Jan 8, 2024, 10:39 AM IST

ಹೊಂಬಾಳೆ ಫಿಲ್ಮ್ಸ್‌ ಮಾಡಿದ್ದೆಲ್ಲಾ ಸ್ಟಾರ್ ಸಿನಿಮಾಗಳನ್ನೇ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ರಿಂದ ಶುರುವಾದ ಹೊಂಬಾಳೆ ಜರ್ನಿ, ಯಶ್, ಪ್ರಭಾಸ್, ರಿಷಬ್ ಶೆಟ್ಟಿ, ಫಹಾದ್ ಫಾಸಿಲ್‌ನಂತಹ ಬಿಗ್ ಸ್ಟಾರ್‌ಗಳನ್ನ ನಂಬಿ ದುಡ್ಡು ಸುರಿದು ದುಡ್ಡೂ ಬಾಚಿದೆ. ಈಗ ಮತ್ತೊಂದು ಬಿಗ್ ಬಜೆಟ್ ಸಿನಿಮಾಗೆ ಹೊಂಬಾಳೆ ಬ್ಯಾನರ್(Homble Banner) ಸಿದ್ಧವಾಗ್ತಿದೆ. ಈ ಭಾರಿ ಹೊಂಬಾಳೆ ತೆಕ್ಕೆಗೆ ಬಿದ್ದಿರೋ ಆ ಸ್ಟಾರ್ ಕನ್ನಡದವರೇ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ(Sandalwood) ಟ್ರೆಂಡಿಂಗ್‌ನಲ್ಲಿರೋ ಕನ್ನಡದ ಮಾಸ್ ಹೀರೋ. ಧ್ರುವ ಕನ್ನಡದಲ್ಲಿ ಹ್ಯಾಟ್ರಿಕ್ ಸಕ್ಸಸ್ ಕೊಟ್ಟಿರೋ ಸ್ಟಾರ್. ಆ ಕಡೆ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್‌ ಕೂಡ ಕೆಜಿಎಫ್, ಕಾಂತಾರ, ಸಲಾರ್‌ನಂತಹ ಪ್ಯಾನ್ ಇಂಡಿಯಾ ಹ್ಯಾಟ್ರಿಕ್ ಸಿನಿಮಾ ಕೊಟ್ಟಿರೋ ನಿರ್ಮಾಣ ಸಂಸ್ಥೆ. ಈಗ ಧ್ರುವ ಸರ್ಜಾಗೆ(Dhruva Sarja) ಗಾಳ ಹಾಕಿರೋ ಹೊಂಬಾಳೆ ಬಂಡವಾಳ ಹೂಡೋಕೆ ರೆಡಿಯಾಗಿದೆಯಂತೆ. ಧ್ರುವ ಸರ್ಜಾ ಎಂಥದ್ದೇ ರೋಲ್ ಆದ್ರು ಸಖತ್ತಾಗಿ ಮೋಲ್ಡ್ ಆಗ್ತಾರೆ. ಹೀಗಾಗೆ ಧ್ರುವ ಮಾಸ್ ಆಡಿಯೆನ್ಸ್‌ಗೆ ಬೇಗ ಕನೆಕ್ಟ್ ಆಗ್ತಾರೆ. ಇಂತಹ ಬಿಗ್ ಸ್ಟಾರ್‌ಗೆ ಅದ್ಭುತವಾಗಿರೋ ಮಾಸ್ ಸ್ಟೋರಿಯನ್ನೇ ಹೆಣೆಯೋ ಡೈರೆಕ್ಟರ್ ಆಗಿರಬೇಕು. ಆ ಮಾತುಕತೆ ನಡೆದಿದೆ. ವೇರಿ ಟ್ಯಾಲೆಂಟೆಡ್ ಡೈರೆಕ್ಟರ್ ಎನಿಸಿಕೊಂಡಿರೋ ಮಫ್ತಿ ಸಿನಿಮಾ ಖ್ಯಾತಿಯ ನರ್ಥನ್ ಧ್ರುವ ಸರ್ಜಾಗೆ ಆಕ್ಷನ್ ಕಟ್ ಹೇಳ್ತಾರಂತೆ.

ಇದನ್ನೂ ವೀಕ್ಷಿಸಿ:  Gautam Adani: ಹೆಚ್ಚುತ್ತಲೇ ಇದೆ ಒಟ್ಟು ಆಸ್ತಿ ಮೌಲ್ಯ..! ಅಂಬಾನಿಯನ್ನೇ ಓವರ್ಟೆಕ್ ಮಾಡಿದ ಅದಾನಿ..!

Video Top Stories