
ನಟ ಯೋಗಿಬಾಬು ಕಿಚಾಯಿಸಿದ ಕ್ರಿಕೆಟಿಗ ಧೋನಿ: ವಿಡಿಯೋ ವೈರಲ್
ಎಲ್‌ಜಿಎಂ ಸಿನಿಮಾ ಟ್ರೇಲರ್ ಲಾಂಚ್ ಕಾರ್ಯಕ್ರಮದ ವೇಳೆ ಧೋನಿ ನಟ ಯೋಗಿಬಾಬುಗೆ ಚಮಕ್ ಕೊಟ್ಟಿದ್ದಾರೆ.
ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿ(Dhoni) ನಟ ಯೋಗಿಬಾಬುಗೆ (Yogi Babu) ಚಮಕ್ ಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಧೋನಿ ನಿರ್ಮಾಣದಲ್ಲಿ ಎಲ್‌ಜಿಎಂ ಸಿನಿಮಾ ನಿರ್ಮಾಣವಾಗಿದೆ. ಇದರ ಟ್ರೇಲರ್(Trailer) ಲಾಂಚ್ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು. ಈ ವೇಳೆ ಕೇಕ್ ಎತ್ತಿಕೊಂಡ ಧೋನಿ ತಮಿಳು ಹಾಸ್ಯ ನಟ ಯೋಗಿಬಾಬುಗೆ ತಿನ್ನಿಸದೇ, ಅವರೇ ತಿಂದಿದ್ದಾರೆ. ಆದ್ರೆ ಯೋಗಿಬಾಬು ನನಗೆ ತಿನ್ನಿಸುತ್ತಾರೆ ಎಂದು ಕಾಯುತ್ತಿದ್ದರು. ಇದರಿಂದ ಅವರು ಒಂದು ಕ್ಷಣ ನಿರಾಸೆಗೊಂಡರು. ಕೇಕ್ ಕತ್ತರಿಸುವ ವೇಳೆ ನಟ ಯೋಗಿ ಬಾಬು ಹಾಗೂ ಧೋನಿ ನಡುವೆ ನಡೆದ ತಮಾಷೆಯ ಸನ್ನಿವೇಶದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ವೀಕ್ಷಿಸಿ: ‘ಜೈಲರ್’ 2ನೇ ಹಾಡು ರಿಲೀಸ್‌ಗೆ ಮುಹೂರ್ತ ಫಿಕ್ಸ್: ಹೇಗಿರುತ್ತೆ ಹುಕುಂ ಹಾಡು?