‘ಜೈಲರ್’ 2ನೇ ಹಾಡು ರಿಲೀಸ್‌ಗೆ ಮುಹೂರ್ತ ಫಿಕ್ಸ್: ಹೇಗಿರುತ್ತೆ ಹುಕುಂ ಹಾಡು?

ರಜಿನಿಕಾಂತ್ ಇಂಟ್ರಡಕ್ಷನ್ ಸಾಂಗ್‌ಗೆ ಕ್ಷಣಗಣನೆ
ಬಿಗ್ ಹಿಟ್ ಆದ ತಮನ್ನಾ ಕಾವಾಲಿರಾ ಹಾಡು
ಬರ್ತಿದೆ ಜೈಲರ್ ಸಿನಿಮಾದ ಮತ್ತೊಂದು ಹಾಡು

Share this Video
  • FB
  • Linkdin
  • Whatsapp

ಕಾವಾಲ (Kaavaalaa) ಎಂಬ ಮೊದಲ ಹಾಡನ್ನು ಬಿಡುಗಡೆ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿರುವ ಜೈಲರ್ (Jailer) ಇದೀಗ ಹುಕುಮ್ (Hukum song) ಎಂಬ ಹಾಡಿನ ಮೂಲಕ ಮತ್ತೊಮ್ಮೆ ಸದ್ದು ಮಾಡಲು ತಯಾರಾಗಿದೆ. ಕಾವಾಲ ಹಾಡು ಹಾಗೂ ಅದರಲ್ಲಿನ ತಮನ್ನಾ ಡಾನ್ಸ್ಗೆ ಫಿದಾ ಆದ ಸಿನಿ ರಸಿಕರು ಹಾಡನ್ನು ದೊಡ್ಡ ಹಿಟ್ ಆಗುವಂತೆ ಮಾಡಿದ್ದು, ಈಗ ಎರಡನೇ ಹಾಡು ಯಾವ ರೀತಿ ಇರಲಿದೆ ಎಂದು ಕಾತರರಾಗಿ ಎದುರು ನೋಡುತ್ತಿದ್ದಾರೆ. ಹುಕುಮ್ ಚಿತ್ರದ ಪ್ರಿವ್ಯೂವನ್ನು ಇಂದು ( ಜುಲೈ 15) ಜೈಲರ್ ಚಿತ್ರತಂಡ ಬಿಡುಗಡೆಗೊಳಿಸಿದೆ. ಈ ಪ್ರೊಮೊದಲ್ಲಿ ಹುಕುಮ್ ಹಾಡಿಗೂ ಮೊದಲೇ ಬರುವ ಕೆಲ ಡೈಲಾಗ್ಗಳನ್ನು ಬಳಸಲಾಗಿದೆ. "ಏಯ್ ಇಲ್ಲಿ ನಾನೇ ಕಿಂಗು. ನಾನು ಮಾಡಿದ್ದೇ ರೂಲ್ಸು. ಆ ರೂಲ್ಸ್ನ ನನಗೆ ಇಷ್ಟ ಬಂದಾಗ ಆಗಾಗ ಬದಲಾಯಿಸುತ್ತಲೇ ಇರುತ್ತೇನೆ. ಗಪ್ಚುಪ್ ಎಂದು ಅದನ್ನು ಫಾಲೋ ಮಾಡುತ್ತಲೇ ಇರಬೇಕು. ಅದನ್ನು ಬಿಟ್ಟು ಕಿತಾಪತಿ ಮಾಡಿದ್ರೆ ನಿನ್ನ ಖಂಡ ಕತ್ತರಿಸಿ ಹೊಸಕಿಹಾಕಿಬಿಡುವೆ. ಹುಕುಮ್.. ಟೈಗರ್ ಕಾ ಹುಕುಮ್.." ಎಂದು ರಜನಿಕಾಂತ್(Rajinikanth) ಹೇಳುವ ಡೈಲಾಗ್ ಪ್ರೋಮೊ ನೋಡುಗರ ಗಮನ ಸೆಳೆದಿದೆ. ಜೈಲರ್ ಚಿತ್ರತಂಡ ಜುಲೈ 17ರ ಸೋಮವಾರದಂದು ತನ್ನ ಎರಡನೇ ಹಾಡನ್ನು ಬಿಡುಗಡೆ ಮಾಡಲು ಮುಂದಾಗಿದೆ. ಡಾಕ್ಟರ್ ಹಾಗೂ ಬೀಸ್ಟ್ ಚಿತ್ರಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ನೆಲ್ಸನ್ ಕುಮಾರ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ.

ಇದನ್ನೂ ವೀಕ್ಷಿಸಿ: ಮೊದಲ ಇನ್‌ಸ್ಟಾಗ್ರಾಂ ವಿಡಿಯೋ ಹಂಚಿಕೊಂಡ ಪವನ್ ಕಲ್ಯಾಣ್: ಇದರಲ್ಲಿರುವ ಕನ್ನಡದ 4 ನಟರು ಯಾರು ?

Related Video