Asianet Suvarna News Asianet Suvarna News

Baana Dariyalli; ಗಣೇಶ್‌ ಮಗು ಥರ, ಆದ್ರೆ ಎಲ್ಲಾ ವಿಷ್ಯದಲ್ಲೂ ಅಲ್ಲಾ; ಡಾರ್ಲಿಂಗ್ ಕೃಷ್ಣ

ಗಣೇಶ್‌ ಮಗು ಥರ, ಆದ್ರೆ ಎಲ್ಲಾ ವಿಷ್ಯದಲ್ಲೂ ಅಲ್ಲಾ ಎಂದು ಡಾರ್ಲಿಂಗ್ ಕೃಷ್ಣ ಮಾತನಾಡಿದ ಗೋಲ್ಡನ್ ಸ್ಟಾರ್ ಕಾಲೆಳೆದಿದ್ದಾರೆ. 

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಬಾನ ದಾರಿಯಲ್ಲಿ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಈಗಾಗಲೇ ಹಾಡಿನ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಬಾನದಾರಿಯಲ್ಲಿ ಇದೀಗ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದೆ. ಇತ್ತೀಚಿಗಷ್ಟೆ ಸಿನಿಮಾತಂಡ ಪ್ರೆಸ್ ಮೀಟ್ ಮಾಡಿದ್ದು ಒಂದಿಷ್ಟು ವಿಚಾರಗಳನ್ನು ಶೇರ್ ಮಾಡಿದೆ. ಪತ್ರಿಕಾಗೋಷ್ಠಿಯಲ್ಲಿ ವಿಶೇಷ ಅತಿಥಿಯಾಗಿ ಬಂದಿದ್ದ ನಟ ಡಾರ್ಲಿಂಗ್ ಕೃಷ್ಣ ಮಾತನಾಡಿ ಗಣೇಶ್ ಸರ್ ಜೊತೆ ಉತ್ತಮ ಬಾಂಧವ್ಯವಿದೆ ಎಂದು ಹೇಳಿದರು. ಗಣೇಶ್‌ ಮಗು ಥರ, ಆದ್ರೆ ಎಲ್ಲಾ ವಿಷ್ಯದಲ್ಲೂ ಅಲ್ಲಾ ಎಂದು ಗೋಲ್ಡನ್ ಸ್ಟಾರ್ ಕಾಲೆಳೆದರು. ಬಾನ ದಾರಿಯಲ್ಲಿ ಆಯೋಜಿಸಿದ್ದ ಕ್ರಿಕೆಟ್ ಮ್ಯಾಚ್ ನಲ್ಲಿ ಡಾರ್ಲಿಂಗ್ ಕೃಷ್ಣ ಭಾಗಿಯಾಗಿದ್ದರು.  

Video Top Stories