Movies Ready To Release: ಈ ವಾರ ಬೆಳ್ಳಿತೆರೆ ಮೇಲೆ ಬಡವ ರಾಸ್ಕಲ್-ರೈಡರ್ ಜರ್ನಿ.!

ಹೊಸ ವರ್ಷದ ಹೊಸ್ತಿಲಲ್ಲಿರೋ ನೀವೆಲ್ಲಾ 2022 ಶುರುವಾಗೋ ಒಂದು ವಾರ ಮೊದಲೇ ಬಡವ ರಾಸ್ಕಲ್ ಹಾಗು ರೈಡರ್ ಸಿನಿಮಾದ ಹಬ್ಬ ಮಾಡಬಹುದು. ಬಡವ ರಾಸ್ಕಲ್ ಹಾಗು ರೈಡರ್ ಈ ಎರಡೂ ಸಿನಿಮಾ ಮೇಲೂ ಕನ್ನಡಿಗರಿಗೆ ಎಕ್ಸ್ಪಟೇಷನ್ ಹೆಚ್ಚಿದೆ. ಡಾಲಿ ಧನಂಜಯ್ ಗೆ ಇರೋ ಕ್ರೇಜ್ ಎಂತಾದ್ದು ಅನ್ನೋದು ನಿಮ್ಗೆ ಮತ್ತೊಮ್ಮೆ ನಾವ್ ಹೇಳ್ಬೇಕಿಲ್ಲ. ವಿಲನ್ ಆಗಿ ಫೇಮಸ್ ಆಗಿರೋ ಡಾಲಿ ಬಡವ ರಾಸ್ಕಲ್ ನಲ್ಲಿ ಹೀರೋ ಆಗಿ ನಿಮ್ಮನ್ನ ರಂಜಿಸಲಿದ್ದಾರೆ. ಮತ್ತೊಂದ್ ಕಡೆ ನಿಖಿಲ್ ಕುಮಾರ್ ರೈಡರ್ ಅವತಾರ ನಿಮ್ಗೆ ಮನೊರಂಜನೆ ಕೊಡೋದ್ರಲ್ಲಿ ನೋ ಡೌಟ್.

Share this Video
  • FB
  • Linkdin
  • Whatsapp

Add Asianetnews Kannada as a Preferred SourcegooglePreferred

ಧನಂಜಯ್ ಸಿನಿಮಾಗಳಿಗೆ ಈಗ ಸಿಕ್ಕಾಪಟ್ಟೆ ಬೇಡಿಕೆ ಇದೆ. ಡಾಲಿ ಯಾವ್ ಸಿನಿಮಾದಲ್ಲಿ ನಟಿಸುತ್ತಾರೋ ಆ ಚಿತ್ರ ಸೂಪರ್ ಹಿಟ್ ಅಂತ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದ್ರು. ಅದ್ರಂತೆ ಟಗರು ಹಿಟ್, ಸಲಗ ಸಿನಿಮಾ ಸಕ್ಸಸ್ ಕಾಣ್ತು. ಪುಷ್ಪ ಸಿನಿಮಾದಲ್ಲೂ ಡಾಲಿಯನ್ನ ಕೊಂಡಾಡುತ್ತಿದ್ದಾರೆ. ಈಗ ಬಡವ ರಾಸ್ಕಲ್ ಸಿನಿಮಾದ ಸರಧಿ. ಇದೇ ನಂಬಿಕೆ ಮೇಲೆ ಡಾಲಿ ಪಿಚ್ಚರ್ಸ್ನಲ್ಲೇ ನಿರ್ಮಾಣ ಆಗಿರೋ ಬಡವ ರಾಸ್ಕಲ್ ಸಿನಿಮಾ 200 ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ. ಶಂಕರ್ ಗುರು ಆ್ಯಕ್ಷನ್ ಕಟ್ ಹೇಳಿರೋ ಚಿತ್ರದಲ್ಲಿ ಅಮೃತ ಅಯ್ಯಂಗಾರ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. 

ದೊಡ್ಡ ಸಕ್ಸಸ್ ಬಳಿಕ ಪ್ರೇಮಂ ಪೂಜ್ಯಂ ಸೀಕ್ವೆಲ್‌ಗೆ ಪ್ರೇಮ್ ಸಜ್ಜು.

ಇನ್ನು ಜಾಗ್ವಾರ್ ಸ್ಟಾರ್ ನಿಖಿಲ್ ಕುಮಾರ್ ಹೀರೋ ಆಗಿ ನಟಿಸುತ್ತಿರೋ ಮೂರನೇ ಸಿನಿಮಾ ರೈಡರ್.. ಸೀತಾರಾಮ ಕಲ್ಯಾಣದಲ್ಲಿ ಒಂದೊಳ್ಳೆ ಫ್ಯಾಮಿಲಿ ಲವ್ ಸ್ಟೋರಿಯನ್ನ ಹೇಳಿದ್ದ ನಿಖಿಲ್ ರೈಡರ್ ಮೂವಿಯಲ್ಲಿ ಒಬ್ಬ ಸ್ಪೋರ್ಟ್ಸ್ ಮ್ಯಾನ್ ಆಗಿ ಲವ್ ಸ್ಟೋರಿಯನ್ನ ಕಟ್ಟಿಕೊಡುತ್ತಿದ್ದಾರೆ. ವಿಜಯ್ ಕುಮಾರ್ ಕೊಂಡ ಡೈರೆಕ್ಷನ್ ನಲ್ಲಿ ಮೂಡಿ ಬಂದಿರೋ ರೈಡರ್ನಲ್ಲಿ ಕಾಶ್ಮೀರಿ ಪರ್ದೇಸಿ ನಟಿಸಿದ್ದಾರೆ. ಡಿಸೆಂಬರ್ 24ರಂದು ತೆರೆ ಮೇಲೆ ಬರೋ ರೈಡರ್ ಸಿನಿಮಾ ರಾಜ್ಯದ 250 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಒಟ್ನಲ್ಲಿ ಈ ವಾರ ಡಾಲಿಯ ಬಡವ ರಾಸ್ಕಲ್ ಹಾಗು ನಿಖಿಲ್ ನಟಿಸಿರೋ ರೈಡರ್ ಸಿನಿಮಾಗಳ ಅಬ್ಬರ ಜೋರಾಗಿರುತ್ತೆ ಅನ್ನೋದಂತು ಕನ್ಫರ್ಮ್.

Related Video