Premam Poojyam 2: ದೊಡ್ಡ ಸಕ್ಸಸ್ ಬಳಿಕ ಪ್ರೇಮಂ ಪೂಜ್ಯಂ ಸೀಕ್ವೆಲ್‌ಗೆ ಪ್ರೇಮ್ ಸಜ್ಜು.!

ಲವ್ಲಿ ಸ್ಟಾರ್ ಪ್ರೇಮ್ ನಾಯಕನಾಗಿ ಅಭಿನಯಿಸಿರೋ 25ನೇ ಚಿತ್ರ ‘ಪ್ರೇಮಂ ಪೂಜ್ಯಂ’.. ಈ ಸಿನಿಮಾ ಈಗ 50 ದಿನದ ಸಕ್ಸಸ್ ಸಂಭ್ರಮದಲ್ಲಿದೆ. ಈ ಟೈಂನಲ್ಲಿ ಒಂದ್ ಸಿನಿಮಾ 50 ದಿನ ಪೈರೈಸುತ್ತಿದೆ ಅಂದ್ರೆ ಅದು ಕಂಡಿತವಾಗಿಯೂ ದೊಡ್ಡ ಗೆಲುವು. ಡಾ. ಬಿ.ಎಸ್. ರಾಘವೇಂದ್ರ ಕಲ್ಪನೆಯ ಪ್ರೇಮಂ ಪೂಜ್ಯಂ ಸಿನಿಮಾ ಈಗ ಸೀಕ್ವೆಲ್ಗೆ ಸಿದ್ಧತೆ ನಡೆದಿದೆ.

First Published Dec 23, 2021, 2:05 PM IST | Last Updated Dec 23, 2021, 2:05 PM IST

ಲವ್ಲಿ ಸ್ಟಾರ್ ಪ್ರೇಮ್ ನಾಯಕನಾಗಿ ಅಭಿನಯಿಸಿರೋ 25ನೇ ಚಿತ್ರ ‘ಪ್ರೇಮಂ ಪೂಜ್ಯಂ’..(Premam Poojyam) ಈ ಸಿನಿಮಾ ಈಗ 50 ದಿನದ ಸಕ್ಸಸ್ ಸಂಭ್ರಮದಲ್ಲಿದೆ. ಈ ಟೈಂನಲ್ಲಿ ಒಂದ್ ಸಿನಿಮಾ 50 ದಿನ ಪೈರೈಸುತ್ತಿದೆ ಅಂದ್ರೆ ಅದು ಕಂಡಿತವಾಗಿಯೂ ದೊಡ್ಡ ಗೆಲುವು. ಡಾ. ಬಿ.ಎಸ್. ರಾಘವೇಂದ್ರ ಕಲ್ಪನೆಯ ಪ್ರೇಮಂ ಪೂಜ್ಯಂ ಸಿನಿಮಾ ಈಗ ಸೀಕ್ವೆಲ್ಗೆ ಸಿದ್ಧತೆ ನಡೆದಿದೆ.

ಪ್ರೇಮಿಗಳ ದಿನದಂದು ಲವ್ಲಿ ಸ್ಟಾರ್ ಪ್ರೇಮ್ ನಟನೆಯ ಚಿತ್ರಕ್ಕೆ ಚಾಲನೆ

ನವಿರಾದ ಲವ್ ಸ್ಟೋರಿಯ(Love Story) ಪ್ರೇಮಂ ಪೂಜ್ಯಂ ಮುಂದುವರೆದ ಭಾಗವಾಗಿ ಪ್ರೇಮಂ ಪೂಜ್ಯಂ ಪಾರ್ಟ್-2 ಮಾಡೋದಕ್ಕೆ ಸಿದ್ಧತೆ ನಡೆದಿದೆ. ಈಗಾಗಲೇ ಪಾರ್ಟ್-2 ಸ್ಟೋರಿ ಕೂಡ ರೆಡಿಯಾಗಿದ್ದು, ಪ್ರೇಮಿಗಳ ದಿನವಾದ ಫೆಬ್ರವರಿ 14ರಂದು ‘ಪ್ರೇಮಂ ಪೂಜ್ಯಂ’ ಸೀಕ್ವೆಲ್ಗೆ ಚಾಲನೆ ನೀಡಲು ಚಿತ್ರತಂಡ ನಿರ್ಧರಿಸಿದೆ. ಇನ್ನು ಚಿತ್ರದ ಮೊದಲ ಭಾಗದಲ್ಲಿ ಕೆಲಸ ಮಾಡಿದ್ದ ಬಹುತೇಕ ಕಲಾವಿದರು, ತಂತ್ರಜ್ಞರು ಈ ಚಿತ್ರದಲ್ಲೂ ಮುಂದುವರಿಯಲಿದ್ದಾರೆ. ಪ್ರೇಮಂ ಪೂಜ್ಯಂ ಕ್ಲೈಮ್ಯಾಕ್ಸ್ನಲ್ಲಿ ಪ್ರಾಣ ಬಿಡೋ ಚಿತ್ರದ ಹೀರೋ ಪ್ರೇಮ್, ಈಗ ಪಾರ್ಟ್-2ನಲ್ಲಿ ಹೇಗೆ ಕಂಟೀನ್ಯೂ ಆಗ್ತಾರೆ ಅನ್ನೋದೆ ದೊಡ್ಡ ಪ್ರಶ್ನೆಯಾಗಿದೆ..

Video Top Stories