ರೇಣುಕಾಸ್ವಾಮಿ ಕೊಲೆ ಪ್ರಕರಣ.. ಚಿಕ್ಕಣ್ಣ ಜಸ್ಟ್ ಮಿಸ್: ದರ್ಶನ್ ಸ್ನೇಹದಲ್ಲಿದ್ದ ನಟನಿಗೆ ಅದೃಷ್ಟ ಕೈ ಹಿಡಿದಿದ್ದು ಹೇಗೆ?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಿಲ್ಲಿಂಗ್ ಸ್ಟಾರ್ ಅನ್ನೋ ಪಟ್ಟ ಕಟ್ಟಿಕೊಂಡು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ ನಟ ದರ್ಶನ್. ಈ ಕೊಲೆ ಪ್ರಕರಣದಲ್ಲಿ 17 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಆದ್ರೆ ಇನ್ನು ಕೆಲವರನ್ನ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿದೆ. 

Share this Video
  • FB
  • Linkdin
  • Whatsapp

ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಿದವರಲ್ಲಿ ನಟ ಚಿಕ್ಕಣ್ಣ(Chikkanna) ಸಹ ಒಬ್ಬರು. ಅಸಲಿಗೆ ದರ್ಶನ್ (Darshan)ಸ್ನೇಹದಲ್ಲಿದ್ದ ಚಿಕ್ಕಣ್ಣ ಸಹ ಆರೋಪಿಗಳಲ್ಲಿ ಒಬ್ಬರಾಗಿ ಜೈಲಿನಲ್ಲಿರಬೇಕಿತ್ತು. ಆದ್ರೆ ಚಿಕ್ಕಣ್ಣನ ಅದೃಷ್ಟ ಚೆನ್ನಾಗಿತ್ತು. ಕೂದಲೆಳೆ ಅಂತರದಲ್ಲಿ ಈ ಪ್ರಕರಣದಿಂದ ಚಿಕ್ಕಣ್ಣ ಬಚಾವ್ ಆಗಿದ್ದಾರೆ. ರೇಣುಕಾ ಸ್ವಾಮಿ ಕೊಲೆ (Renukaswamy murder case) ನಡೆಯುವ ಮುಂಚೆ ನಟ ದರ್ಶನ್ ಹಾಗೂ ಇನ್ನೂ ಕೆಲವರು, ಪ್ರಕರಣದ ಮತ್ತೊಬ್ಬ ಆರೋಪಿ ವಿನಯ್ ಒಡೆತನದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ಕುಡಿದು ಪಾರ್ಟಿ ಮಾಡಿದ್ರು. ಆ ಪಾರ್ಟಿಯಲ್ಲಿ ನಟ ಚಿಕ್ಕಣ್ಣ ಸಹ ಇದ್ರು. ನಟ ದರ್ಶನ್ ಪಟ್ಟಣಗೆರೆ ಶೆಡ್‌ಗೆ ಹೋಗುವಾಗ ಚಿಕ್ಕಣ್ಣರನ್ನು ಸಹ ಕರೆದರಂತೆ. ಆದ್ರೆ ಚಿಕ್ಕಣ್ಣ ದರ್ಶನ್ ಜೊತೆ ಹೋಗಲು ಒಪ್ಪದೆ ತಡವಾಗಿದೆ ಮನೆಗೆ ಹೋಗುತ್ತೇನೆ ಅಂತ ಮನೆಯ ಕಡೆ ಹೊರಟಿದ್ದಾರೆ. ಆ ದಿನ ಚಿಕ್ಕಣ್ಣ ದರ್ಶನ್ ಜೊತೆ ಹೋಗಿದ್ದಿದ್ದರೆ ಚಿಕ್ಕಣ್ಣನ ಸ್ಥಿತಿ ಏನಾಗುತ್ತಿತ್ತು ನೀವೇ ಯೋಚ್ನೆ ಮಾಡಿ. ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ನಲ್ಲಿ ಪಾರ್ಟಿ ಮಾಡುವಾಗ ಅದೇ ಪಾರ್ಟಿಯಲ್ಲಿದ್ದ ಪ್ರದೋಶ್, ಬೇಡವೆಂದರೂ ನಾನೂ ಬರ್ತೀನಿ ಬಾಸ್ ಎಂದು ದರ್ಶನ್ ಜೊತೆಗೆ ಹೋಗಿದ್ದರಂತೆ. ಪಾರ್ಟಿ ನಡೆಯುವಾಗ ನನಗೆ ಕೆಲಸ ಇದೆ ಎಂದು ದರ್ಶನ್ ಪಾರ್ಟಿಯಿಂದ ಹೊರಬಂದರಂತೆ. ಆಗ ಪ್ರದೋಶ್ ಸಹ ಬಾಸ್ ನಾನೂ ಬರ್ತೀನಿ ಅಂತ ದರ್ಶನ್ ಜೊತೆ ಹೋದನಂತೆ. ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಕರೆತಂದಿರುವ ವಿಚಾರ ಪಾರ್ಟಿಯಲ್ಲಿದ್ದ ಯಾರಿಗೂ ಗೊತ್ತಿರಲಿಲ್ಲವಂತೆ. ಆದರೆ ಪ್ರದೋಶ್ ಪಾರ್ಟಿ ಬಳಿಕ ದರ್ಶನ್ ಅನ್ನು ಬಲವಂತ ಮಾಡಿ ಅವರ ಜೊತೆಗೆ ಪಟ್ಟಣಗೆರೆ ಶೆಡ್ಗೆ ಹೋಗಿದ್ದಾನೆ.

ಇದನ್ನೂ ವೀಕ್ಷಿಸಿ: ಸಾಂಗ್, ಟೀಸರ್, ಟ್ರೈಲರ್‌ಗಾಗಿ ಭರ್ಜರಿ ಓಟಿಂಗ್..! ಪ್ಯಾನ್ ಇಂಡಿಯಾದಲ್ಲಿ 'ಮಾರ್ಟಿನ್' ಮಿಂಚಿಂಗ್..!

Related Video