Upadhyaksha Movie: ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗಿಳಿದ ಕಾಮಿಡಿ ಕಿಲಾಡಿ ಚಿಕ್ಕಣ್ಣ..!

ಅಧ್ಯಕ್ಷ ಮ್ಯಾಜಿಕ್‌ ಉಪಾಧ್ಯಕ್ಷನಿಗೂ ಒಲಿಯುತ್ತಾ..?
'ಉಪಾಧ್ಯಕ್ಷ' ಬರುತ್ತಿದ್ದಾನೆ ನೋಡಲು ರೆಡಿಯಾಗಿ..!
ಮೊದಲ ಬಾರಿ ಹೀರೋ ಆದ ಕಾಮಿಡಿ ಕಿಂಗ್ ಚಿಕ್ಕಣ್ಣ!

First Published Jan 21, 2024, 9:50 AM IST | Last Updated Jan 21, 2024, 9:52 AM IST

ನಟ ಚಿಕ್ಕಣ್ಣ ಕಾಮಿಡಿ ಪಾತ್ರಗಳ ಮೂಲಕ ಸ್ಯಾಂಡಲ್‌ವುಡ್‌ಗೆ(Sandalwood) ಕಾಲಿಟ್ಟವರು . ಚಿಕ್ಕಣ್ಣ(Chikkanna) ಸಿನಿಮಾದಲ್ಲಿದ್ರೆ ಹ್ಯೂಮರಸ್ ಕಾಮಿಡಿ ಕಿಕ್ ಹೈ ಆಗಿರುತ್ತೆ. ಹೀಗಾಗೆ ಚಿಕ್ಕಣ್ಣ ಕಳೆದ ಐದಾರು ವರ್ಷದ ಹಿಂದೆ ಒಂದೇ ವರ್ಷದಲ್ಲಿ 10 ರಿಂದ 15 ಸಿನಿಮಾಗಳಲ್ಲಿ ನಟಿಸುತ್ತಿದ್ರು. ಇಂತಹ ಅದ್ಭುತ  ನಟ ಬೇಡಿಕೆಯ ಕಾಮಿಡಿ ನಟ ಚಿಕ್ಕಣ್ಣ ಬೆಳ್ಳಿತೆರೆ ಮೇಲೆ ಹೀರೋ ಆಗಿ ಹೊಸ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಚಿಕ್ಕಣ್ಣ ಹೀರೋ ಆಗಿ ಚಿತ್ರರಂಗಕ್ಕೆ ಡೆಬ್ಯೂ ಆಗ್ತಿರೋ ಉಪಾಧ್ಯಕ್ಷ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಚಿಕ್ಕಣ ಸ್ಯಾಂಡಲ್‌ವುಡ್‌ನಲ್ಲಿ ಫೇಮಸ್ ಆಗಿರೋದೇ ಉಪಾಧ್ಯಕ್ಷ(Upadhyaksha movie) ಅಂತ. ಯಾಕಂದ್ರೆ ನಟ ಶರಣ್(Sharan) ಜೊತೆ ಅಧ್ಯಕ್ಷ ಸಿನಿಮಾದಲ್ಲಿ ನಟಿಸಿದ್ದ ಚಿಕ್ಕಣ್ಣ ಅಲ್ಲಿ ಚಿ.ತು ಸಂಘದ ಉಪಾಧ್ಯಕ್ಷರಾಗಿದ್ರು. ನಟ ಶರಣ್‌ ಅಧ್ಯಕ್ಷರಾಗಿದ್ರು. ಈಗ ಇದೇ ಅಧ್ಯಕ್ಷ ಸಿನಿಮಾದ ಉಪಾಧ್ಯಕ್ಷ ಚಿಕ್ಕಣ್ಣ ಹೀರೋ ಆಗಿ ಉಪಾಧ್ಯಕ್ಷ ಸಿನಿಮಾದಿಂದಲೇ ಲಾಂಚ್ ಆಗುತ್ತಿದ್ದಾರೆ. ವಿಶೇಷ ಅಂದ್ರೆ ಈ ಉಪಾಧ್ಯಕ್ಷ ಸಿನಿಮಾ ಅಧ್ಯಕ್ಷ ಸಿನಿಮಾ ಸೀಕ್ಚೆಲ್ ಕೂಡ ಹೌದು.

ಅಧ್ಯಕ್ಷ ಸಿನಿಮಾದ ಮುಂದುವರೆದ ಭಾಗ ಉಪಾಧ್ಯಕ್ಷ ಸಿನಿಮಾ. ಅಧ್ಯಕ್ಷ ಚಿತ್ರದ ಕಥೆ ಎಲ್ಲಿಗೆ ನಿಂತಿತ್ತೊ ಉಪಾಧ್ಯಕ್ಷ ಚಿತ್ರದ ಕಥೆ ಅಲ್ಲಿಂದ ಆರಂಭವಾಗುತ್ತದೆ. ಹೀಗಾಗಿ ಅಧ್ಯಕ್ಷ ಸಿನಿಮಾದಲ್ಲಿ ಯಾರೆಲ್ಲಾ ನಟಿಸಿದ್ರೋ ಅವರೆಲ್ಲಾ ಈ ಸಿನಿಮಾದಲ್ಲಿದ್ದಾರೆ. ನಟ ಶರಣ್ ಗೆಸ್ಟ್ ಅಪೀರಿಯನ್ಸ್ ಇದೆ. ಇನ್ನು ರವಿಶಂಕರ್ ಶಿವರುದ್ರೇ ಗೌಡನ ರೋಲ್ ಕಂಟಿನ್ಯೂ ಆಗಿದೆ. ಸಾಧುಕೋಕಿಲಾ ಧರ್ಮಣ್ಣರಂತಹ ಕಾಮಿಡಿ ಕಿಲಾಡಿಗಳೆಲ್ಲಾ ಈ ಸಿನಿಮಾದಲ್ಲಿ ನಟಿಸಿದ್ದಾರೆ. ನಟ ಚಿಕ್ಕಣ್ಣನಿಗೆ ನಾಯಕಿಯಾಗಿ ಮಲೈಕಾ ಅಭಿನಯಿಸಿದ್ದಾರೆ.

ಇದನ್ನೂ ವೀಕ್ಷಿಸಿ:  Duniya Vijay: ಸ್ಯಾಂಡಲ್‌ವುಡ್ ಸಲಗ ವಿಜಯ್‌ 50ನೇ ಹುಟ್ಟುಹಬ್ಬ! ಬರ್ತಡೇ ದಿನ ‘ಭೀಮ’ ಟೀಸರ್ ರಿಲೀಸ್!

Video Top Stories