Duniya Vijay: ಸ್ಯಾಂಡಲ್‌ವುಡ್ ಸಲಗ ವಿಜಯ್‌ 50ನೇ ಹುಟ್ಟುಹಬ್ಬ! ಬರ್ತಡೇ ದಿನ ‘ಭೀಮ’ ಟೀಸರ್ ರಿಲೀಸ್!

ಸ್ಯಾಂಡಲ್‌ವುಡ್‌ ಫೈಟರ್ , ಸಿಕ್ಸ್‌ಪ್ಯಾಕ್ ಹೀರೋ  ಸಲಗ ಸಿನಿಮಾದಿಂದ ನಿರ್ದೇಶಕನಾಗಿಯೂ ಗೆದ್ದ  ದುನಿಯಾ ವಿಜಯ್‌ಗೆ  50ನೇ ಹುಟ್ಟುಹಬ್ಬ. ಕನ್ನಡ ಚಿತ್ರರಂಗದಲ್ಲಿ ಯಾವುದೇ ಗಾಡ್‌ಫಾದರ್ ಬೆಂಬಲ ಇಲ್ಲದೇ ಸ್ವಂತ ಬಲದಿಂದ ಚಿಕ್ಕ ಪುಟ್ಟ ಪಾತ್ರಗಳನ್ನು ಮಾಡುತ್ತಾ ಇಂದು ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ನಟ ಎನಿಸಿಕೊಂಡಿದ್ದಾರೆ ದುನಿಯಾ ವಿಜಯ್.

Share this Video
  • FB
  • Linkdin
  • Whatsapp

ಖಳನಾಯಕ, ಫೈಟರ್, ಪೋಷಕ ಪಾತ್ರಗಳನ್ನು ಮಾಡುತ್ತ ಇಂದು ಸ್ಟಾರ್ ನಾಟನಾಗಿ ಬೆಳೆದಿದ್ದಾರೆ ನಟ ದುನಿಯಾ ವಿಜಯ್‌(Duniya Vijay). ವಿಜಯ್‌ಗೆ ತಂದೆ, ತಾಯಿ ಮೇಲೆ ವಿಶೇಷ ಪ್ರೀತಿ. ಹೀಗಾಗಿ ಅವರ ಸಮಾಧಿ ಬಳಿ ದುನಿಯಾ ವಿಜಯ್ ಬರ್ತ್‌ಡೇ(Birthday) ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳು ಅವರಿಗೆ ಸಾಥ್ ನೀಡಿದ್ದಾರೆ. ಹುಟ್ಟುಹಬ್ಬದ ಸಂದರ್ಭದಲ್ಲಿ ವಿಜಯ್ ನಟಿಸಿ ನಿರ್ದೇಶಿಸುತ್ತಿರುವ ‘ಭೀಮ’ ಸಿನಿಮಾದ(Bheema movie) ಟೀಸರ್ ಆನಂದ್ ಆಡಿಯೋ(Anand Audio) ಮೂಲಕ ರಿಲೀಸ್ ಆಗಿದೆ. ಭೀಮ ಚಿತ್ರದ “ಸೈಕ್‌’ ಹಾಡು ಬಿಡುಗಡೆಯಾಗಿ ಹಿಟ್‌ಲಿಸ್ಟ್‌ ಸೇರಿತ್ತು. ಇತ್ತೀಚೆಗೆ ಚಿತ್ರದ ಡ್ಯುಯೆಟ್‌ ಸಾಂಗ್‌ವೊಂದು ಬಿಡುಗಡೆಯಾಗಿದ್ದು, ಅದು ಕೂಡ ಹಿಟ್‌ಲಿಸ್ಟ್‌ ಸೇರಿದೆ. ಐ ಲವ್‌ ಯೂ ಕಣೇ..’ ಎಂಬ ಡ್ಯುಯೆಟ್‌ ಹಾಡು ಬಿಗ್ ಹಿಟ್ಟಾಗಿದೆ. ಈಗ ಭೀಮ ಟೀಸರ್(Teaser) ನೋಡಿದವರು. ಫುಲ್ ಮಾಸ್, ಸೈಕ್ ಆಗಿದೆ ಅಂತ ಕಾಮೆಂಟ್ ಮಾಡುತ್ತಿದ್ದಾರೆ. ಬೆಂಗಳೂರು ಸಮೀಪ ಇರುವ ಆನೇಕಲ್ ತಾಲೂಕಿನ ಕುಂಬಾರಹಳ್ಳಿಯಲ್ಲಿ ವಿಜಯ್ ತಂದೆ, ತಾಯಿ ಸಮಾಧಿ ಇದೆ. 5,000 ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿಯೇ ವಿಜಯ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಇದನ್ನೂ ವೀಕ್ಷಿಸಿ: Kaatera: ಬಾಕ್ಸಾಫೀಸ್‌ನಲ್ಲಿ 'ಕಾಟೇರ' ಬಿಗ್ ಸಕ್ಸಸ್..! 100 ಕೋಟಿ ಕ್ಲಬ್ ಸೇರಿದ್ದು ಯಾರೆಲ್ಲಾ ಗೊತ್ತಾ..?

Related Video