Asianet Suvarna News Asianet Suvarna News

ಮತ್ತೆ ಒಂದಾದ ಚಂದನ್ ಶೆಟ್ಟಿ-ನಿವೇದಿತಾ ಗೌಡ: ಅರೆ ಡಿವೋರ್ಸ್ ಆದ್ಮೇಲೆ ಇವರಿಬ್ಬರ ಹೊಸ ಕತೆ ಏನ್ ಅಂತೀರಾ?

ಒಂದ್​ ಕಾಲದಲ್ಲಿ ಸ್ಯಾಂಡಲ್​ವುಡ್​​ನ ಬ್ಯೂಟಿಫುಲ್ ಕಪಲ್ ಅಂತ ಕರೆಸಿಕೊಂಡವರು ಚಂದನ್ ಶೆಟ್ಟಿ ಹಾಗು ನಿವೇದಿತಾ ಗೌಡ. ಆದ್ರೆ ಈ ಮೈಸೂರ್ ಹುಡುಗಿ, ಕರಾವಳಿ ಹುಡುಗ ತಮ್ಮ ದಾಂಪತ್ಯಕ್ಕೆ ಬ್ರೇಕ್​ ಹಾಕಿ ಡಿವೋರ್ಸ್ ಪಡೆದು ನಾನೊಂದು ತೀರಾ.?

First Published Sep 1, 2024, 12:20 PM IST | Last Updated Sep 1, 2024, 12:21 PM IST

ಒಂದ್​ ಕಾಲದಲ್ಲಿ ಸ್ಯಾಂಡಲ್​ವುಡ್​​ನ ಬ್ಯೂಟಿಫುಲ್ ಕಪಲ್ ಅಂತ ಕರೆಸಿಕೊಂಡವರು ಚಂದನ್ ಶೆಟ್ಟಿ ಹಾಗು ನಿವೇದಿತಾ ಗೌಡ. ಆದ್ರೆ ಈ ಮೈಸೂರ್ ಹುಡುಗಿ, ಕರಾವಳಿ ಹುಡುಗ ತಮ್ಮ ದಾಂಪತ್ಯಕ್ಕೆ ಬ್ರೇಕ್​ ಹಾಕಿ ಡಿವೋರ್ಸ್ ಪಡೆದು ನಾನೊಂದು ತೀರಾ.? ನೀನೊಂದು ತೀರಾ.. ಮನಸು ಮನಸು ಭಾರ ಅಂತ  ದೂರಾಗಿದ್ರು. ಇದೀಗ ಚಂದನ್ ಮತ್ತು ನಿವೇದಿತಾ ಮತ್ತೆ ಒಂದಾಗಿದ್ದಾರೆ. ಅರೆ ಡಿವೋರ್ಸ್ ಕೊಟ್ ಮೇಲೆ ಏನ್ ಇದು ಇವರಿಬ್ಬರ ಹೊಸ ಕತೆ ಅಂತೀರಾ..? ಈ ಇಂಟ್ರೆಸ್ಟಿಂಗ್ ಸ್ಟೋರಿಯನ್ನ ಒಮ್ಮೆ ನೋಡಿ. ಸ್ಯಾಂಡಲ್​ವುಡ್​​​ನ ಬೆಸ್ಟ್ ಕಪಲ್ ಅಂದ್ರೆ ನಿವೇದಿತಾ ಗೌಡ ಚಂದನ್ ಶೆಟ್ಟಿ ಅಂತ ಕರೆಸಿಕೊಳ್ತಿದ್ರು. ಈ ಜೋಡಿಯನ್ನ ನೋಡಿ ನಾವು ಹೀಗೇ ಇರಬೇಕಪ್ಪಾ ಅಂತ ಅಂದುಕೊಂಡವರು ಎಷ್ಟೋ ಜನ. ಪ್ರೀತ್ಸಿ ಮದುವೆ ಆಗಿದ್ದ ಈ ಜೋಡಿ ತನ್ನ ದಾಂಪತ್ಯಕ್ಕೆ ಬ್ರೇಕ್ ಹಾಕ್ತಾ ಇದ್ದೀವಿ ಅಂತ ಹೇಳಿದ್ದೇ ತಡ. 

ಇಬ್ಬರ ಫಾಲೋರ್ಸ್​​​ ಟೆನ್ಷನ್ ಆಗಿದ್ರು. ಇಬ್ಬರು ಬೇರಾದ್ಮೇಲೆ ಸಂಕಟ ಪಟ್ಟಿದ್ರು. ಛೇ ಈ ಕ್ಯೂಟ್ ಪೇರ್​ ಮೇಲೆ ಯಾರ್ ಕಣ್ಣಾಕಿದ್ರಪ್ಪಾ ಅಂತ ಹಿಡಿ ಶಾಪ ಹಾಕಿದ್ರು. ಪ್ಲೀಸ್​ ನೀವಿಬ್ರು ಬೇರಾಗ್ಬೇಡಿ ಅಂತ ಅವರ ಅಭಿಮಾನಿಗಳು ಮನವಿ ಮಾಡಿದ್ರು. ಆದ್ರೆ ಇದ್ಯಾವುದನ್ನೂ ಲೆಕ್ಕಿಸದ ನಿವಿ ಚಂದು ಡಿವೋರ್ಸ್​ ಪಡೆದಿದ್ರು. ಇಬ್ಬರು ಸಂಸಾರ ಕಿತ್ತುಕೊಂಡ ಮೇಲೆ ಚಂದನ್ ಹಾಗು ನಿವೇದಿತಾ ತಮ್ಮದೇ ಲೈಫ್​​ನಲ್ಲಿ ಅಪ್​​ ಆಗಿದ್ದಾರೆ. ಹೀಗಿರುವಾಗ್ಲೆ ಈ ಪೇರ್​​​ನ ಮುದ್ದಾದ ಫೋಟೋ ಒಂದು ವೈರಲ್ ಆಗುತ್ತಿದ್ದು, ಫುಲ್ ಶಾಕ್ ಅಗುವಂತಿದೆ. ಕೈಯಲ್ಲಿ ರೋಸ್​ ಹಿಡಿದು ನೀನೇ ನನ್ನ ಮುದ್ದು ರಾಕ್ಷಸಿ ಅಂತ ಚಂದನ್ ಶೆಟ್ಟಿ ನಿವೇದಿತಾಗೆ ಪ್ರಪೋಸ್ ಮಾಡಿದ್ದಾರೆ.

ಈ ಪೋಟೋ ನೋಡಿದವರು. ಅರೆ ಮತ್ತೆ ಚಂದನ್ ನಿವೇದಿತಾ ಒಂದಾದ್ರಾ..? ಕಿತ್ತು ಹೋಗಿದ್ದ ಇವರ ದಾಂಪತ್ಯ ಜೀವನ ಮತ್ತೆ ಸರಿ ಹೋಯ್ತಾ ಅಂತ ಮಾತಾಡ್ತಿದ್ದಾರೆ. ಆದ್ರೆ ಇದು ರೀಯಲ್​ ಅಲ್ಲ ರೀಲ್​ ಅನ್ನೋದು ಅಸಲಿ ಮ್ಯಾಟರ್. ಮುದ್ದು ರಾಕ್ಷಸಿ. ಹೀಗಂತ ಚಂದನ್ ಶೆಟ್ಟಿ ನಿವೇದಿತಾರನ್ನ ಪ್ರೀತಿಸುವ ಟೈಂನಲ್ಲೇ ಹೇಳಿದ್ರೇನೋ. ಈಗ ಇದೇ ಮುದ್ದು ರಾಕ್ಷಸಿ ಹೆಸರಲ್ಲಿ ಸಿನಿಮಾ ಬರುತ್ತಿದೆ. ಈ ಸಿನಿಮಾದಲ್ಲಿ ಚಂದನ್ ನಿವೇದಿತಾ ಒಟ್ಟಿಗೆ ನಟಿಸುತ್ತಿದ್ದಾರೆ. ಆದ್ರೆ ಈ ಸಿನಿಮಾ ನಿವೇದಿತಾ ಚಂದನ್ ಬೇರಾಗೋ ಮುಂಚೆಯೇ ಸೆಟ್ಟೇರಿತ್ತು. ಶೂಟಿಂಗ್ ಕೂಡ ನಡೆದಿತ್ತು. ಕಳೆದ ವರ್ಷ ಇಬ್ಬರ ವೆಡ್ಡಿಂಗ್ ಆನಿವರ್ಸರಿ ದಿನ ಹಾಡಿನ ಚಿತ್ರೀಕರಣ ಮಾಡೋ ಜತೆಗೆ ಈ ವಿಚಾರವನ್ನ ಹಂಚಿಕೊಂಡಿತ್ತು. ಈಗ ಮುದ್ದು ರಾಕ್ಷಸಿ ಅಂತ ಚಂದನ್ ನಿವೇದಿತಾ ಹಿಂದೆ ರೋಸ್​ ಹಿಡಿದು ಕೂತಿದ್ದಾರೆ. ಈ ಮೂಲಕ ಮತ್ತೆ ನಿವಿ ಚಂದನ್​ ಟ್ರೆಂಡ್ ಆಗುತ್ತಿದ್ದಾರೆ.

Video Top Stories