Asianet Suvarna News Asianet Suvarna News

ಪ್ಯಾಂಟ್ ಇಲ್ಲದೆ ಫೋಟೋಶೂಟ್ ಮಾಡಿದ ಚೈತ್ರಾ: ಇದೇನಿದು ನಟಿ ಅವತಾರ..?

ರಕ್ಷಿತ್ ಹೀರೋಯಿನ್ ಚೈತ್ರಾ ಆಚಾರ್ 
ಪ್ಯಾಂಟ್ ಇಲ್ಲದೆ ಫೋಟೋಶೂಟ್ 
ಸಪ್ತ ಸಾಗರದಾಚೆ ನಟಿ ಚೈತ್ರಾ ಆಚಾರ್

ರಕ್ಷಿತ್ ಶೆಟ್ಟಿ ನಟನೆಯ ಈ ಚಿತ್ರದಲ್ಲಿ ಚೈತ್ರಾ ಆಚಾರ್ ಎರಡನೇ ನಾಯಕಿ. ಈಗಾಗಲೇ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಪುಟ್ಟ ಟೀಸರ್ ರಿಲೀಸ್ ಆಗಿದ್ದು ಚೈತ್ರಾ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ವಿಭಿನ್ನ ಪಾತ್ರಗಳ ಮೂಲಕವೇ ಗಮನ ಸೆಳೆಯುತ್ತಿರುವ ಚೈತ್ರಾ 2019ರಲ್ಲಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಮಹಿರಾ ಸಿನಿಮಾ ಮೂಲಕ ಸಿನಿಮಾದಲ್ಲಿ ಮಿಂಚಿದರು. ಗಿಲ್ಕಿ, ತಲೆತಂಡ ಸಿನಿಮಾಗಳಲ್ಲಿ ನಟಿಸಿರುವ ಚೈತ್ರಾ ಇದೀಗ ರಕ್ಷಿತ್ ಶೆಟ್ಟಿ ಜೊತೆ ಸಪ್ತ ಸಾಗರದಾಚೆ ಎಲ್ಲೋ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈಗ ಈ ನಟಿ ಚೈತ್ರಾ ಆಚಾರ್ ಪ್ಯಾಂಟ್ ಲೆಸ್ ಆಗಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ. 

ಇದನ್ನೂ ವೀಕ್ಷಿಸಿ: ಅಲ್ಲು ಅರ್ಜುನ್ ಮೊದಲ ಗರ್ಲ್ ಫ್ರೆಂಡ್ ಇವರೇ: ತೆಲುಗು ಸೂಪರ್ ಸ್ಟಾರ್ ಬಿಚ್ಚಿಟ್ಟ ಸತ್ಯ ವೈರಲ್!