Asianet Suvarna News Asianet Suvarna News

ಅಲ್ಲು ಅರ್ಜುನ್ ಮೊದಲ ಗರ್ಲ್ ಫ್ರೆಂಡ್ ಇವರೇ: ತೆಲುಗು ಸೂಪರ್ ಸ್ಟಾರ್ ಬಿಚ್ಚಿಟ್ಟ ಸತ್ಯ ವೈರಲ್!

ನಟ ಅಲ್ಲು ಅರ್ಜುನ್‌ ಇಂಡಿಯನ್ ಐಡಲ್ ಸೀಜನ್ 2 ಕಾರ್ಯಕ್ರಮದಲ್ಲಿ ತಮ್ಮ ಮೊದಲ ಗಲ್‌ ಫ್ರೆಂಡ್‌ ಬಗ್ಗೆ ಮಾತನಾಡಿದ್ದಾರೆ.
 

ಅಲ್ಲು ಅರ್ಜುನ್ ದೇಶಾದ್ಯಂತ ಕೋಟ್ಯಾಂತರ ಜನ ಅಭಿಮಾನಿಗಳಿದ್ದಾರೆ. ಇಂಡಿಯನ್ ಐಡಲ್ ತೆಲುಗು ಸೀಸನ್ 2 ಅಂತಿಮ ಸಂಚಿಕೆಯಲ್ಲಿ ಅಲ್ಲು ಅರ್ಜುನ್‌ ಭಾಗಿಯಾಗಿದ್ದರು. ಈ ವೇಳೆ ಅವರು ತಮ್ಮ ಮೊದಲ ಗರ್ಲ್‌ ಫ್ರೆಂಡ್‌ ಬಗ್ಗೆ ಮಾತನಾಡಿದ್ದಾರೆ.  ಇಂಡಿಯನ್ ಐಡಲ್ ಸೀಜನ್ 2 ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋದ ಅಲ್ಲು ಅರ್ಜುನ್ ಕೆಲವೊಂದು ಇಂಟ್ರಸ್ಟಿಂಗ್ ಅಂಡ್ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ನನ್ನ ಮೊದಲ ಪ್ರೇಯಸಿ ಸ್ನೇಹಾರೆಡ್ಡಿಯಲ್ಲ ಎಂದು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಬನ್ನಿ ಅಭಿನಯದ ಹಾಡೊಂದನ್ನು ಶೃತಿ ಎಂಬ ಗಾಯಕಿ ತುಂಬಾ ಅದ್ಬುತವಾಗಿ ಹಾಡಿದ್ದರು. ಈ ಹಾಡನ್ನು ಕೇಳಿ ಅಲ್ಲು ಅರ್ಜುನ್ ಸಹ ಇಂಪ್ರೆಸ್ ಆಗಿದ್ದಾರೆ. ಆಕೆಯನ್ನು ಪ್ರಶಂಸೆ ಮಾಡಿ ಬಳಿಕ ಮಾತನಾಡಿದ ಅಲ್ಲು ಅರ್ಜುನ್, ಈ ಶೃತಿ ಎಂಬ ಹೆಸರು ನನಗೆ ತುಂಬಾ ಇಷ್ಟ. ಏಕೆಂದರೇ ನನ್ನ ಫಸ್ಟ್ ಲವರ್‍ ಹೆಸರು ಶೃತಿ ಎಂದು ಜೋರಾಗಿ ನಕ್ಕಿದ್ದಾರೆ. 

ಇದನ್ನೂ ವೀಕ್ಷಿಸಿ: ಶಿವಣ್ಣ –ರಜಿನಿ ಜೈಲರ್ ಶೂಟಿಂಗ್ ಕಂಪ್ಲೀಟ್! : 'ಥಿಯೇಟರ್‌ನಲ್ಲಿ ಸಿಗೋಣ..' ಎಂದ 'ತಲೈವಾ'