ಯಶ್ 'ಟಾಕ್ಸಿಕ್'ಗೆ ಶುರುವಾಯ್ತು ಬೇಡಿಕೆ! ಚಿತ್ರರಂಗದ ಮಂದಿ ಕಣ್ಣು ಕೆಂಪಗಾಯ್ತು..!
ಯಶ್ ಟಾಕ್ಸಿಕ್ ಸಿನಿಮಾದ ಟೈಟಲ್ ನೋಡಿದ ಬಾಲಿವುಡ್ ಮಂದಿ, ನೋಡಿ ಕನ್ನಡದವರು ಹೇಗೆ ಸೂಪರ್ ಹಿಟ್ ಸಿನಿಮಾ ಮಾಡ್ತಿದ್ದಾರೆ ಎಂದು ಮಾತನಾಡುತ್ತಿದ್ದಾರಂತೆ.
ಯಶ್ ನಟನೆಯ ಟಾಕ್ಸಿಕ್(Toxic) ಸಿನಿಮಾದ ಟೈಟಲ್ ಟೀಸರ್(Teaser) ರಿಲೀಸ್ ಆಗಿದೆ. ಇದನ್ನು ನೋಡಿದ ಬಾಲಿವುಡ್ ಮಂದಿ ಇನ್ಮುಂದೆ ಕನ್ನಡದಲ್ಲಿ ಇಂಟರ್‌ನ್ಯಾಷನಲ್ ಸಿನಿಮಾಗಳೇ ಬರುತ್ತವೆ ಎಂದು ಮಾತನಾಡುತ್ತಿದ್ದಾರಂತೆ. ಬಾಲಿವುಡ್ ನಿರ್ಮಾಪಕರು, ನಿರ್ದೇಶಕರು ನೋಡ್ರಿ ಕನ್ನಡದವರು ಎಂತಾ ಸಿನಿಮಾ ಮಾಡ್ತಿದ್ದಾರೆ ಎಂದು ಹೇಳುತ್ತಿದ್ದಾರಂತೆ. ಒಂದು ಕಡೆ ಯಶ್ ಮತ್ತೊಂದು ಕಡೆ ವೃಷಬ್ ಶೆಟ್ಟಿ ಇಬ್ಬರೂ ಸೂಪರ್ ಹಿಟ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇದೇ ಅಲ್ವಾ ನಮ್ಮ ಸ್ಯಾಂಡಲ್‌ವುಡ್ ಹೆಗ್ಗಳಿಕೆ ಎಂದು ಕನ್ನಡದ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ (KVN Productions) ಹಾಗೂ ಯಶ್ (Yash) ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ (Instagram) ಈ ಒಂದು ಟೀಸರ್ ಅಪ್ಲೋಡ್ ಮಾಡಿದ್ದಾರೆ. ಈ ಮೂಲಕ ತಮ್ಮ ಮುಂದಿನ ಸಿನಿಮಾ ಟೈಟಲ್ ಟಾಕ್ಸಿಕ್ ಎಂದು ನಟ ಯಶ್ ರಿವೀಲ್ ಮಾಡಿದ್ದಾರೆ.
ಇದನ್ನೂ ವೀಕ್ಷಿಸಿ: ಸೆನ್ಸಾರ್ ಸಮಸ್ಯೆಯಿಂದ ಕಂಗೆಟ್ಟ ಸ್ಯಾಂಡಲ್‌ವುಡ್..! ಡಿಸೆಂಬರ್‌ನಲ್ಲಿ ರಿಲೀಸ್ ಆಗಬೇಕಿದ್ದ ಚಿತ್ರಗಳಿಗೆ ಟೆನ್ಷನ್..!