Asianet Suvarna News Asianet Suvarna News

ಸೆನ್ಸಾರ್ ಸಮಸ್ಯೆಯಿಂದ ಕಂಗೆಟ್ಟ ಸ್ಯಾಂಡಲ್‌ವುಡ್..! ಡಿಸೆಂಬರ್‌ನಲ್ಲಿ ರಿಲೀಸ್ ಆಗಬೇಕಿದ್ದ ಚಿತ್ರಗಳಿಗೆ ಟೆನ್ಷನ್..!

ಕಾಲ ಕಾಲಕ್ಕೆ ಏನೇನ್ ಆಗ್ಬೇಕೋ ಅದು ಆಗ್ತಾ ಇದ್ರೆನೆ ಎಲ್ಲವೂ ನೆಟ್ಟಗಿರುತ್ತೆ. ಅದೇ ಒಂದ್ ಕೆಲಸ ನಿಂತ್ರೆ ಇಡೀ ವ್ಯವಸ್ಥೆಯೇ ತಲೆ ಕೆಳಗಾಗುತ್ತೆ. ತಲೆ ಕೆಟ್ಟೋಗುತ್ತೆ. ಈಗ ಅದೇ ಸ್ಥಿತಿ ಸ್ಯಾಂಡಲ್‌ವುಡ್‌ಗೆ ಬಂದೊದಗಿದೆ. ಅದಕ್ಕೆ ಕಾರಣ ಕನ್ನಡ ಸಿನಿಮಾಗಳಿಗೆ ಸೆನ್ಸಾರ್ ಮಂಡಳಿಯಾ ಶಾಕ್. ಸೆನ್ಸಾರ್ ಸಮಸ್ಯೆಯಿಂದ ಸ್ಯಾಂಡಲ್‌ವುಡ್‌ ಕಂಗೆಟ್ಟಿದೆ.

ಡಿಸೆಂಬರ್‌ನಲ್ಲಿ ಸ್ಯಾಂಡಲ್‌ವುಡ್‌ನಲಿ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗಬೇಕಿದೆ. ಆ ಎಲ್ಲಾ ಸಿನಿಮಾಗಳಿಗೆ ಸೆನ್ಸಾರ್(censore) ಉರುಳಾಗಿದೆ. ಯಾಕಂದ್ರೆ ಕನ್ನಡದ ಯಾವ್ದೇ ಸಿನಿಮಾಗಳಿಗೆ ಸೆನ್ಸಾರ್ ಸರ್ಟಿಫಿಕೆಟ್(Censore Certificate) ಸಿಗುತ್ತಿಲ್ಲ. ಕಾರಣ ಪ್ರಾದೇಶಿಕ ಸೆನ್ಸಾರ್ ಮಂಡಳಿ ಅಧಿಕಾರಿ ಪ್ರಶಾಂತ್ ಕುಮಾರ್ ಕನ್ನಡ ಸಿನಿಮಾಗಳಿಗೆ ಸೆನ್ಸಾರ್ ಸರ್ಟಿಫಿಕೆಟ್ ಕೊಡೋದಕ್ಕೆ ಲಂಚ ಪಡೆಯುತ್ತಿದ್ರು. ಹೀಗಾಗಿ ಸಿಬಿಐ ಪ್ರಶಾಂತ್ ಕುಮಾರ್ರನ್ನ ಬಂದಿಸಿದೆ. ಇದ್ರಿಂದ ಪ್ರಾದೇಶಿಕ ಸಿನಿಮಾಗಳಿಗೆ ಸೆನ್ಸಾರ್ ಮಾಡಲು ಸೆನ್ಸಾರ್ ಅಧಿಕಾರಿಯೇ ಇಲ್ಲದಂತಾಗಿದೆ. ಇದು ಡಿಸೆಂಬರ್ನಲ್ಲಿ ರಿಲೀಸ್ ಆಗೋ ಸಿನಿಮಾಗಳ ನಿರ್ಮಾಪರರಿಗೆ ದೊಡ್ಡ ತಲೆನೋವು ತಂದೆ. ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ(Karnataka Film Chamber Of Commerce) ಸುದ್ದಿಗೋಷ್ಟಿ ನಡೆಸಿ ಸಮಸ್ಯೆಯ ಬಗ್ಗೆ ಚರ್ಚಿಸಲಾಗಿದೆ. ಈ ವರ್ಷ ಸೆನ್ಸಾರ್‌ಗೆ ಅರ್ಜಿ ಸಲ್ಲಿಸಲು ನವೆಂಬರ್ 15 ಕೊನೆ ದಿನ ಆಗಿತ್ತು. ಹೀಗಾಗಿ ಸ್ಯಾಂಡಲ್ವುಡ್ನಲ್ಲಿ 132 ಸಿನಿಮಾಗಳು ಸೆನ್ಸರ್ಗೆ ಅರ್ಜಿ ಸಲ್ಲಿಸಿದ್ದು, ಈ ಸಿನಿಮಾಗಳನ್ನ ಪ್ರಾದೇಶಿಕ ಸೆನ್ಸಾರ್ ಅಧಿಕಾರಿ ನೋಡಿ ಸೆನ್ಸರ್ ಸರ್ಟಿಫಿಕೆಟ್ ಕೊಡಬೇಕು. ಆದ್ರೆ ಈಗ ಸೆನ್ಸರ್ಗೆ ಬ್ರೇಕ್ ಬಿದ್ದಿರೋದ್ರಿಂದ ಡಿಸೆಂಬರ್(december) ಹಾಗೂ ಜನವರಿಯಲ್ಲಿ ಬಿಡುಗಡೆ ಆಗಬೇಕಿರೋ ಸಿನಿಮಾಗಳಿಗೆ ಸೆನ್ಸರ್ ಆಗೋದು ಡೌಟ್ ಅಂತ ಹೇಳಲಾಗ್ತಿದೆ. ಕನ್ನಡ ಚಿತ್ರರಂಗದಲ್ಲಿ ವಾರಕ್ಕೆ ಮಿನಿಮನ್ ಅಂದ್ರು ಮೂರು ಸಿನಿಮಾಗಳು ರಿಲೀಸ್ ಆಗ್ತಾವೆ. ಆದ್ರೆ ಈಗ ಸೆನ್ಸರ್ ಸಮಸ್ಯೆ ತಲೆ ದೂರಿರೋದ್ರಿಂದ ದರ್ಶನ್ ನಟನೆಯ ಕಾಟೇರ ಸಿನಿಮಾದಿಂದ ಹೊಡಿದು ಹಲವು ಸಿನಿಮಾಗಳು ಬಡುಗಡೆ ದಿನಾಂಕವನ್ನ ಮುಂದೂಡೋ ಅನಿವಾರ್ಯತೆ ಬಂದಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸಿ ಆದಷ್ಟು ಬೇಗ ಪ್ರಾದೇಶಿಕ ಸೆನ್ಸರ್ ಅಧಿಕಾರಿಯನ್ನ ನೇಮಿಸಬೇಕಿದೆ. ಇಲ್ಲದಿದ್ರೆ ಸ್ಯಾಂಡಲ್ವುಡ್ ಚಿತ್ರರಂಗ ದೊಡ್ಡ ಸಮಸ್ಯೆಗೆ ತುತ್ತಾಗೋದ್ರಲ್ಲಿ ನೋ ಡೌಟ್. 

ಇದನ್ನೂ ವೀಕ್ಷಿಸಿ:  ತೆರೆ ಮೇಲೆ ಬಂತು ಬೆಂಗಳೂರು ಕರಗದಲ್ಲಾದ ರಕ್ತ ಚರಿತ್ರೆ! 80ರ ದಶಕದಲ್ಲಿ ನಡೆಯೋ ಸ್ಟೋರಿ ಈ ಸಿನಿಮಾ !