ಸಂಸಾರಿ ಆಗುತ್ತಿದ್ದಾರೆ ಹರ್ಷಿಕಾ-ಭುವನ್: ಆತ್ಮೀಯರಿಗೆ ಆಮಂತ್ರಣ ಕೊಟ್ಟ ಜೋಡಿ..!

ಹಸೆಮಣೆ ಏರುತ್ತಿದ್ದಾರೆ ಲವ್ ಬರ್ಡ್ಸ್..!
ಹರ್ಷಿಕಾ ಭುವನ್ ಮದುವೆ ಯಾವಾಗ..?
ಪ್ರೀತಿಸಿ ಮದುವೆ ಆಗುತ್ತಿರೋ ಕೂರ್ಗ್ ಜೋಡಿ!

Share this Video
  • FB
  • Linkdin
  • Whatsapp

ಇಷ್ಟು ದಿನ ಆಷಾಡ ಮಾಸ ಅಂತ ಮದುವೆ ಸುದ್ದಿಯೇ ಇರಲಿಲ್ಲ. ಆದ್ರೆ ಈಗ ಆಷಾಡ ಮುಗಿದಿದೆ. ಮತ್ತೆ ನವ ಜೋಡಿಗಳ ನವ ಕನಸುಗಳಿಗೆ ದಾಂಪತ್ಯ ಮುದ್ರೆ ಒತ್ತೋ ಟೈಂ ಬಂದಿದೆ. ಹೀಗಾಗಿ ಸ್ಯಾಂಡಲ್‌ವುಡ್‌ನ(Sandalwood)ಸೆಲೆಬ್ರಿಟಿ ಜೋಡಿ ಅಂತ ಕರೆಸಿಕೊಳ್ಳುತ್ತಿರೋ ಕೂರ್ಗ್ ಸುಂದರಿ ಹರ್ಷಿಕಾ ಪೂಣಚ್ಚ(Harshika Poonachcha) ಹಾಗೂ ಭುವನ್ ಪೊನ್ನಣ್ಣ(Bhuvan Ponnanna) ಸಂಸಾರಿಗಳಾಗುತ್ತಿದ್ದಾರೆ. ಇವರಿಬ್ಬರ ಮದುವೆಗೆ ಸೆಲೆಬ್ರೆಟಿಗಳು, ರಾಜಕೀಯ ಗಣ್ಯರಿಗೆ ಆಹ್ವಾನ ಹೋಗಿದೆ. ಸ್ಯಾಂಡಲ್‌ವುಡ್‌ ನಟಿ ಹರ್ಷಿಕಾ ಪೂಣಚ್ಚಗೆ ಕುಟುಂಬದವರೆಲ್ಲಾ ಸೇರಿ ಕಾಸಿನ ಸರ ತೊಡಿಸೋ ಟೈಂ ಬಂದಿದೆ. ಯಾಕಂದ್ರೆ ಹರ್ಷಿಕಾ ಪೂಣಚ್ಚ ಒಂಟಿ ಬಾಳಿಗೆ ಬ್ರೇಕ್ ಹಾಕಿ ಸಂಸಾರಿ ಆಗುತ್ತಿದ್ದಾರೆ. ಪ್ರೀತಿಸಿದ ಹುಡುಗ ಭುವನ್ ಪನ್ನಣ್ಣನ ಕೈ ಹಿಡಿಯುತ್ತಿದ್ದಾರೆ. ಹೌದು, ಸ್ಯಾಂಡಲ್‌ವುಡ್‌ನ ಮತ್ತೊಂದು ಸೆಲೆಬ್ರಿಟಿ ಜೋಡಿ ಭುವನ್ ಪೊನ್ನಣ್ಣ ಹಾಗೂ ಹರ್ಷಿಕಾ ಪೂಣಚ್ಚಗೆ ಇದೇ ಆಗಸ್ಟ್ 24ಕ್ಕೆ ಕೊಡಗು(Kodagu) ಜಿಲ್ಲೆಯಾ ವಿರಾಜಪೇಟೆಯಲ್ಲಿ ಅದ್ಧೂರಿ ಕಲ್ಯಾಣೋತ್ಸವ ನಡೆಯುತ್ತಿದೆ. ಹೀಗಾಗಿ ಇತ್ತೀಚೆಗೆ ಬ್ಯಾಚ್ಯೂಲರ್ ಪಾರ್ಟಿ ಮಾಡೋಕೆ ಫಾರಿನ್ ಟೂರ್ ಮಾಡಿದ್ದ ಹರ್ಷಿಕಾ ಪೂಣಚ್ಚ ಈಗ ತನ್ನ ಭಾವಿ ಹಸ್ಬೆಂಡ್ ಭುವನ್ ಜೊತೆ ಸೇರಿ ಇಡೀ ಸ್ಯಾಂಡಲ್‌ವುಡ್‌ಗೆ ತಮ್ಮ ಮದುವೆಯ ಆಮಂತ್ರಣ ಹಂಚಿದ್ದಾರೆ. ಈ ಬ್ಯೂಟಿಫುಲ್ ಪೇರ್ ಮದುವೆಗೆ ಕನ್ನಡದ ಸಿನಿ ತಾರೆಯರು ಮತ್ತು ರಾಜಕೀಯ ಗಣ್ಯರು ಬರೋ ನಿರೀಕ್ಷೆ ಇದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಬಾಲಿವುಡ್ ಫೈಯರ್ ‘ಜವಾನ್ ಸಾಂಗ್’ ರಿಲೀಸ್ ! ಲೇಡಿ ಸೂಪರ್ ಸ್ಟಾರ್ ಜತೆ ಕಿಂಗ್ ಖಾನ್ ರೊಮ್ಯಾನ್ಸ್ !

Related Video