ಭೀಮ ಸಿನಿಮಾದ ಹೊಸ ಹಾಡಿನ ಸೌಂಡ್! ಡೋಂಟ್ ವರಿ ಬೇಬಿ ಚಿನ್ನಮ್ಮ..ಸಾಂಗ್‌ಗೆ ತಮಟೆ ಏಟು!

ಸಲಗ ಸಿನಿಮಾದ ನಂತರ ಮತ್ತೊಮ್ಮೆ ನಿರ್ದೇಶನ ಕೈಗೆತ್ತಿಕೊಂಡಿರುವ ವಿಜಯ್ ಕುಮಾರ್ ಟೀಸರ್ ಮತ್ತು ಫಸ್ಟ್ ಲುಕ್ ಮೂಲಕ ಸದ್ದು ಮಾಡಿದ್ದರು. ಈಗ   ಡೋಂಟ್ ವರಿ ಬೇಬಿ ಚಿನ್ನಮ್ಮ ಹಾಡು ಫುಲ್ ಸೌಂಡ್ ಮಾಡುತ್ತಿದೆ.

First Published Jul 1, 2024, 10:37 AM IST | Last Updated Jul 1, 2024, 10:37 AM IST

ನಾಗಾರ್ಜುನ್ ಶರ್ಮಾ ಸಾಹಿತ್ಯ, ಗನ ಮುತ್ತು ಗಾಯನ, ಡೋಂಟ್ ವರಿ ಬೇಬಿ ಚಿನ್ನಮ್ಮ ಹಾಡು (Don't Worry Baby Chinnamma song) ಸಿಕ್ಕಪಟ್ಟೆ ರಾ ಆಗಿದೆ. ಮೇಕಿಂಗ್‌ನಿಂದಲೇ ಸದ್ಯ ಹಾಡನ್ನು ಕಟ್ಟಿಕೊಟ್ಟಿದ್ದಾರೆ. ಮಾಸ್ ಸ್ಟೆಪ್‌, ಮಸ್ತ್ ಆಗಿದೆ ಚರಣ್‌ ರಾಜ್ ಮ್ಯೂಸಿಕ್. ಸದ್ಯಕ್ಕೆ ಸ್ಯಾಂಡಲ್‌ವುಡ್‌ನ(Sandalwood) ಮತ್ತೊಂದು ಹಿಟ್ ಸಾಂಗ್‌ ತಮಟೆ ಏಟಿನ ಡೋಂಟ್ ವರಿ ಬೇಬಿ ಚಿನ್ನಮ್ಮಾ. ಇನ್ನು ದುನಿಯಾ ವಿಜಯ್ ನ್ಯಾಚುರಲ್ ರಾ ಶಾಟ್ಸ್ ಗೆ ಫೇಮಸ್. ಸಲಗದಲ್ಲೂ ಅದೆ ಪ್ರೇಕ್ಷಕನಿಗೆ ಇಷ್ಟವಾಗಿದ್ದು. ಈ ಬಾರಿಯೂ ಭೀಮ ಚಿತ್ರದಲ್ಲಿ ಸಿನಿ ಪ್ರೇಕ್ಷಕನ ರಂಜಿಸಲು ವಿಜಯ್‌ ಕುಮಾರ್ ಅದೇ ಫಾರ್ಮುಲ ಮುಂದುವರೆಸಿದ್ದಾರೆ. ಭೀಮ ಸಿನಿಮಾದ(Bheem movie)  ಮತ್ತೊಂದು ಹಾಡು ನ್ಯೂ ಇಯರ್ ಆರಂಭದಲ್ಲಿ ಮಾಸ್ ಅಭಿಮಾನಿಗಳಿಗೆ ಉಡುಗೊರೆಯಾಗಿ ಕೊಟ್ಟಿದ್ದರು. ‘ನೂರು ರೂಪಾಯಿ ಮಿಕ್ಸ್’ ಎಂಬ ಸುಕ್ಕಾ ಸಾಂಗ್ ರಿಲೀಸ್ ಆಗಿತ್ತು. ಆ ಹಾಡು ಕೂಡ ಭರ್ಜರಿಯಾಗಿ ಹಿಟ್ಟಾಗಿದೆ. ಡ್ರಗ್ ಮಾಫಿಯಾ ಕುರಿತಾದ ಸಿನಿಮಾ ಭೀಮ. ದುನಿಯಾ ವಿಜಯ್(Duniya Vijay) ತಮ್ಮ ಚಿತ್ರದ ಅಷ್ಟೂ ಪಾತ್ರಗಳನ್ನ ವಿಶೇಷವಾಗಿಯೇ ಡಿಸೈನ್ ಮಾಡಿದ್ದಾರೆ. ಆ ಪಾತ್ರಗಳು ಸಾಮಾನ್ಯ ಅಂತ ಅನಿಸೋದೇ ಇಲ್ಲ. ಹಾಗೆನೇ ಎಲ್ಲೂ ಆಯಾ ಪಾತ್ರಗಳಿಗೆ ಗ್ಲಾಮರ್ ಟಚ್ ಕೂಡ ಇಲ್ಲ ನಾಯಕಿ ಅಶ್ವಿನಿಯನ್ನು ಪೊರಕೆ ಡೆ ಸೆಲೆಬ್ರೇಟ್ ಮಾಡಿ ಪರಿಚಯಿಸಿದ್ದರು. ಇನ್ನು ರಾ ಸಿನಿಮಾ ಅಂತ ರೊಮ್ಯಾಂಟಿಕ್ ಟಚ್ ಇಲ್ವಾ ಅಂತ ಕೇಳಲೇ ಬೇಡಿ. ಈ ಚಿತ್ರದ ಯುವ ಹೃದಯಗಳ ಫೇವರಿಟ್ ಭೀಮ ಸಿನಿಮಾದ ಐ ಲವ್ ಯೂ ಕಣೆ.. ಹಾಡಾಗಿದೆ.

ಇದನ್ನೂ ವೀಕ್ಷಿಸಿ:  ಪರಶುರಾಮನಾಗಿ ಯಶ್..ವೈರಲ್ ಆಯ್ತು ಪೋಸ್ಟರ್: ಪ್ರಭಾಸ್ ಕಲ್ಕಿ ಪಾರ್ಟ್ 2ನಲ್ಲಿ ರಾಕಿಂಗ್‌ ಸ್ಟಾರ್‌ !