Asianet Suvarna News Asianet Suvarna News

ಪರಶುರಾಮನಾಗಿ ಯಶ್..ವೈರಲ್ ಆಯ್ತು ಪೋಸ್ಟರ್: ಪ್ರಭಾಸ್ ಕಲ್ಕಿ ಪಾರ್ಟ್ 2ನಲ್ಲಿ ರಾಕಿಂಗ್‌ ಸ್ಟಾರ್‌ !

ಕಲ್ಕಿ ಪಾರ್ಟ್ 2 ಕೂಡ  ಸಿದ್ದವಾಗುತ್ತಿದೆ. ಕಲ್ಕಿ ಪಾರ್ಟ್‌ನಲ್ಲಿ ಪರಶುರಾಮನ ಪಾತ್ರವಿದ್ದು,ಅದನ್ನು ಯಶ್ ಮಾಡುತ್ತಾರೆಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

 
ಪ್ರಭಾಸ್ ಅಭಿನಯದ ಕಲ್ಕಿ 2898 AD ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. ಕಲ್ಕಿ ಸಿನಿಮಾ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಸ್ಯಾಂಡಲ್‌ವುಡ್ ನಟ ಯಶ್ (Yash) ಕೂಡ ಕಲ್ಕಿ ಸಿನಿಮಾ ವೀಕ್ಷಿಸಿದ್ದಾರೆ. ಎಕ್ಸ್ ಹ್ಯಾಂಡಲ್‌ನಲ್ಲಿ ಕಲ್ಕಿ ಸಿನಿಮಾವನ್ನು ಕೊಂಡಾಡಿದ್ದರು. ‘ಅದ್ಭುತವಾದ ಚಮತ್ಕಾರವನ್ನು ಸೃಷ್ಟಿಸಿದ್ದಕ್ಕಾಗಿ ಕಲ್ಕಿ 2898 AD ತಂಡಕ್ಕೆ ಅಭಿನಂದನೆಗಳು. ಈ ಚಿತ್ರವು ಹೆಚ್ಚು ಕ್ರಿಯೇಟಿವ್ ಕಥೆ ಹೇಳುವಿಕೆಗೆ ದಾರಿ ಮಾಡಿಕೊಡುತ್ತದೆ. ನಾಗ್ ಅಶ್ವಿನ್ ಮತ್ತು ವೈಜಯಂತಿ ಚಲನಚಿತ್ರಗಳು, ಅನೇಕರನ್ನು ದೊಡ್ಡ ಹೆಜ್ಜೆಗಳನ್ನು ಇಡಲು ಪ್ರೇರೇಪಿಸುತ್ತದೆ" ಎಂದು ಯಶ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.

‘ಡಾರ್ಲಿಂಗ್ ಪ್ರಭಾಸ್, ಅಮಿತಾಬ್ ಬಚ್ಚನ್ ಸರ್, ಕಮಲ್ ಹಾಸನ್ ಸರ್ ಮತ್ತು ದೀಪಿಕಾ ಪಡುಕೋಣೆ ಮತ್ತು ಕೆಲವು ಆಶ್ಚರ್ಯಕರ ಅತಿಥಿ ಪಾತ್ರಗಳನ್ನು ಒಟ್ಟಿಗೆ ನೋಡುವುದು ಒಂದು ಅದ್ಭುತ ಅನುಭವ, ಈ ಚಿತ್ರವನ್ನು ಒಟ್ಟಿಗೆ ತರಲು ತೊಡಗಿರುವ ಎಲ್ಲರಿಗೂ ಅಭಿನಂದನೆಗಳು - ಇದು ನಿಜವಾಗಿಯೂ ಪರದೆಯನ್ನು ಬೆಳಗಿಸುತ್ತದೆ ಎಂದು ಯಶ್ ಬರೆದಿದ್ದರು. ಇದೀಗ ಕಲ್ಕಿ ಪಾರ್ಟ್ 2(Kalki Part 2) ಕೂಡ  ಸಿದ್ದವಾಗುತ್ತಿದೆ. ಕಲ್ಕಿ ಪಾರ್ಟ್‌ನಲ್ಲಿ ಪರಶುರಾಮನ ಪಾತ್ರವಿದ್ದು(Parashurama role),ಅದನ್ನು ಯಶ್ ಮಾಡುತ್ತಾರೆಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ. ಯಶ್‌ ಪರಶುರಾಮನ ಅವರತಾರದ ಪೋಸ್ಟರ್ ಕೂಡ ವೈರಲ್ ಆಗುತ್ತಿದೆ.

ಯಶ್‌ರನ್ನು ಪರಶುರಾಮನ ಅವತಾರದಲ್ಲಿ ನೋಡಿದ ಅವರ ಅಭಿಮಾನಿಗಳು ವಾವ್ ಎನ್ನುತ್ತಿದ್ದಾರೆ. ಇದೇನಾದರೂ ಸುದ್ದಿ ನಿಜವಾದರೆ ಎರಡು ಸಾವಿರ ಕೋಟಿ ಕಲೆಕ್ಷನ್ ಪಕ್ಕಾ ಎನ್ನುತ್ತಿದ್ದಾರೆ. ಫ್ಯಾನ್ಸ್ , ಒಂದು ಕಡೆ ಯಶ್ ರಾಮಾಯಣ ಚಿತ್ರದಲ್ಲಿ ರಾವಣ ಪಾತ್ರ ಮಾಡೋದು ನಿಕ್ಕಿಯಾಗಿದೆ. ಮತ್ತೊಂದು ಕಡೆ ಇದೀಗ ಪರಶುರಾಮನ  ಪೋಸ್ಟರ್‌ ವೈರಲ್ ಆಗುತ್ತಿದ್ದು, ಇದೇ ನಿಜವಾದರೆ ಫ್ಯಾನ್ಸ್‌ಗಂತೂ ಹಬ್ಬವೋ ಹಬ್ಬ. ಆದರೆ ಈ ಬಗ್ಗೆ ಕಲ್ಕಿ ನಿರ್ಮಾಪಕ ಅಶ್ವಿನಿದತ್, ನಿರ್ದೇಶಕ ನಾಗ್ ಅಶ್ವಿನ್  ಪ್ಲ್ಯಾನ್ ಮಾಡಬೇಕೆಂದು ಯಶ್ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ರಾಜಕೀಯ ಮೇಲಾಟದಲ್ಲಿ ಗೆದ್ದಿದ್ದ ರೇವಣ್ಣ ಕುಟುಂಬ! 2019ರಲ್ಲಿ ನಿಖಿಲ್‌ಗೆ ಸೋಲು..2024ರಲ್ಲಿ ಕುಮಾರಸ್ವಾಮಿಗೆ ಗೆಲುವು!

Video Top Stories