Asianet Suvarna News Asianet Suvarna News

ಕನ್ನಡದ ಸೋನು ಸೂದ್ ಆದ ಸೌರವ್ ಲೋಕಿ ಅಲಿಯಾಸ್ ಭಜರಂಗಿ ಲೋಕಿ

ಸ್ಯಾಂಡಲ್‌ವುಡ್‌ನ ಆಜಾನುಬಾಹು ನಟ ಭಜರಂಗಿ ಲೋಕಿ ರಾಧಿಕಾ ಕುಮಾರಸ್ವಾಮಿ ಅಭಿನಯದ ದಮಯಂತಿ ಚಿತ್ರದಲ್ಲಿ ವಿಲನ್‌ ಆಗಿ ನಟಿಸುವ ಮೂಲಕ ಕನ್ನಡದ ಸೋನು ಸೂದ್ ಎಂದೇ ಪ್ರಖ್ಯಾತರಾದವರು. 

'ಭಜರಂಗಿ' (Bhajarangi) ಚಿತ್ರದ ಹೆಸರನ್ನು ಕೇಳಿದರೆ ನೆನಪಿಗೆ ಬರುವುದು ಶಿವಣ್ಣ ಹಾಗೂ ಖಳನಾಯಕನಾಗಿ ಅಬ್ಬರಿಸಿದ ಭಜರಂಗಿ ಲೋಕಿ (Bhajarangi Loki). ಹೌದು! ಭಜರಂಗಿ ಲೋಕಿ ಸ್ಯಾಂಡಲ್‌ವುಡ್‌ನ ಆಜಾನುಬಾಹು ನಟನಾಗಿದ್ದು, ಭಜರಂಗಿ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟು, ಹಲವಾರು ಚಿತ್ರಗಳಲ್ಲಿ ನಟಿಸಿ ತಮ್ಮ ಅದ್ಭುತ ಪ್ರತಿಭೆಯನ್ನು ತೋರಿಸಿ ಸೈ ಎನಿಸಿಕೊಂಡವರು. ವಿಶೇಷವಾಗಿ ರಾಧಿಕಾ ಕುಮಾರಸ್ವಾಮಿ (Radhika Kumarswamy) ಅಭಿನಯದ 'ದಮಯಂತಿ' (Damayanti) ಚಿತ್ರದಲ್ಲಿ ವಿಲನ್‌ ಆಗಿ ನಟಿಸುವ ಮೂಲಕ ಕನ್ನಡದ ಸೋನು ಸೂದ್ ಎಂದೇ ಪ್ರಖ್ಯಾತರಾದವರು. ಭಜರಂಗಿ ಲೋಕಿಯ ಮೂಲ ಹೆಸರು ಸೌರವ್ ಲೋಕಿ (Sourav Loki) ಆದರೆ 'ಭಜರಂಗಿ' ಚಿತ್ರ ಇವರಿಗೆ ಬಹುದೊಡ್ಡ ಯಶಸನ್ನು ತಂದುಕೊಟ್ಟಿದ್ದರಿಂದ ಭಜರಂಗಿ ಲೋಕಿಯಾದರು.

ಆಚಾರ್ಯ ಚಿತ್ರದಲ್ಲಿ ಖಳನಾಯಕನಾಗಿ 6 ಅಡಿ ಎತ್ತರದ ಕನ್ನಡದ ಮಾಸ್‌ ಹುಡುಗ!

ಭಜರಂಗಿ ಲೋಕಿಗೆ ತೆಲುಗು ಹಾಗೂ ತಮಿಳು ಚಿತ್ರರಂಗದಿಂದ ಆಫರ್‌ಗಳು ಹುಡುಕಿಕೊಂಡು ಬರುತ್ತಿದ್ದು, ಸದ್ಯ ಮೆಗಾಸ್ಟಾರ್ ಚಿರಂಜೀವಿ (Chiranjeevi) ಅಭಿನಯದ ಆಚಾರ್ಯ (Acharya) ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮುಖ್ಯವಾಗಿ ಲೋಕಿಯ ಅಭಿನಯ, ಕಟ್ಟುಮಸ್ತಾದ ದೇಹ ನೋಡಿ ತೆಲುಗಿನ ಸ್ಟಾರ್ ಡೈರೆಕ್ಟರ್ ಕೊರಟಾಲ ಶಿವ (Koratala Siva) ಕೂಡಾ ಮೆಚ್ಚಿಕೊಂಡಿದ್ದಾರೆ. ಇನ್ನು ಲೋಕಿ 'ಭಜರಂಗಿ 2' (Bhajarangi 2) ಚಿತ್ರದಲ್ಲೂ ಸುಧೀಂದ್ರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ದೈಹಿಕವಾಗಿ ಹಾಗೂ ಮಾನಸಿಕವಾಗಿ ಪಾತ್ರಕ್ಕಾಗಿ ಬಹಳ ಕಷ್ಟಪಟ್ಟಿದ್ದೇನೆ ಎಂದು ತಿಳಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories