ಕೊನೆಗೂ ಈಡೇರಿತು ಹ್ಯಾಟ್ರಿಕ್ ಹೀರೋ ಫ್ಯಾನ್ಸ್ ಕನಸು: ಬೆಳ್ಳಿತೆರೆ ರಣ ಕಣದಲ್ಲಿ ಭೈರತಿ ರಣಗಲ್ ಶಿವಣ್ಣನ ಕಿಚ್ಚು !
6 ವರ್ಷಗಳ ಹಿಂದೆ ಬಂದಿದ್ದ 'ಮಫ್ತಿ' ಸಿನಿಮಾ ಪ್ರೀಕ್ವೆಲ್ ಸಿನಿಮಾ 'ಭೈರತಿ ರಣಗಲ್'. ಮಫ್ತಿ ಸಿನಿಮಾದಲ್ಲಿ ಭೈರತಿ ರಣಗಲ್ ಆರ್ಭಟ ನೋಡಿದ್ದ ನೀವೆಲ್ಲಾ ಈ ಸಿನಿಮಾದಲ್ಲಿ ಭೈರತಿ ರಣಗಲ್ ಹಿನ್ನೆಲೆ ಏನು ಅನ್ನೋ ಸ್ಟೋರಿಯನ್ನ ಹೇಳಲಾಗ್ತಿದೆ.
ಸ್ಯಾಂಡಲ್‌ವುಡ್ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಫ್ಯಾನ್ಸ್ ನನಸಾಗೋ ಟೈಂ ಬಂದಿದೆ. ಇಷ್ಟು ದಿನ ಶಿವಣ್ಣ ನರ್ತನ್ ಕಾಂಬಿನೇಷನ್‌ನಲ್ಲಿ ಮಫ್ತಿ ಪ್ರೀಕ್ವೆಲ್ ಅಥವ ಸೀಕ್ವೆಲ್ ಸಿನಿಮಾ ಬರಲಿ ದೊಡ್ಮೆನೆಯ ದೊಡ್ಡ ದೊರೆ ಫ್ಯಾನ್ಸ್ ಕಾಯ್ತಾ ಇದ್ರು. ಈಗ ಮಫ್ತಿ ಪ್ರೀಕ್ವೆಲ್ ಸ್ಟೋರಿ ಸಿದ್ಧವಾಗಿದೆ. ಬೆಳ್ಳಿತೆರೆ ರಣ ಕಣದಲ್ಲಿ ಭೈರತಿ ರಣಗಲ್ ಶಿವಣ್ಣನ ಕಿಚ್ಚು ಹೆಚ್ಚಾಗಿದೆ. ಭೈರತಿ ರಣಗಲ್ ಸಿನಿಮಾ ಸೆಟ್ಟೇರಿದೆ. ಶಿವಣ್ಣ ನಿರ್ದೇಶಕ ನರ್ತನ್ ಕಾಂಬಿನೇಷನ್ ಸಿನಿಮಾ ಭೈರತಿ ರಣಗಲ್ ಸಿದ್ಧವಾಗ್ತಿದೆ. ಅಂದಾಗ ಶಿವಣ್ಣನ ಫ್ಯಾನ್ಸ್‌ಗೆ ದೊಡ್ಡ ಸಂತಸದ ಜೊತೆಗೆ ಈ ಸಿನಿಮಾ ಯಾವಾಗ ಸೆಟ್ಟೇರುತ್ತೆ ಅನ್ನೋ ಕುತೂಹಲವೂ ಇತ್ತು. ಈಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಭೈರತಿಗೆ ಬೆಂಗಳೂರಿನ ಚಾಪರಾಜಪೇಟೆಯಲ್ಲಿರೋ ಬಂಡೇ ಮಹಾಕಾಳಿ ಆಶೀರ್ವಾದವೂ ಸಿಕ್ಕಿದೆ. ಬಂಡೆ ಮಹಾಕಾಳಿ ಸನ್ನಿಧಿಯಲ್ಲಿ ಸಿನಿಮಾದ ಮುಹೂರ್ತ ನಡೆದಿದೆ.
ಇದನ್ನೂ ವೀಕ್ಷಿಸಿ: ಇಂದು ನಿಮ್ಮ ದಿನ ಭವಿಷ್ಯ ಹೇಗಿದೆ? : ಕಷ್ಟ ಪರಿಹಾರಕ್ಕೆ ಅಮ್ಮನವರಿಗೆ ಶ್ವೇತ ವರ್ಣದ ಪುಷ್ಪದಿಂದ ಅರ್ಚನೆ ಮಾಡಿ..