Asianet Suvarna News Asianet Suvarna News

Darshan: ನಟ ದರ್ಶನ್ ಸಿನಿ ಜರ್ನಿಗೆ 25 ವರ್ಷ..! ಅದ್ಧೂರಿ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧ..!

ಒಬ್ಬ ಹೀರೋ ಸಿನಿ ರಂಗದಲ್ಲಿ ಸರ್ವೈವ್ ಆಗೋದು ತುಂಬಾ ಚಾಲೇಂಜ್. ಅದರಲ್ಲೂ ಬೆಳ್ಳಿ ಹಬ್ಬ ಮಾಡುವಷ್ಟು ವರ್ಷ ತಮ್ಮ ಚಾರ್ಮ್ ಸ್ಟಾರಿಸಂ ಕಾಪಾಡಿಕೊಳ್ಳೋದು ಒಂದು ಸಾಹಸವೇ ಸರಿ. ಇದೀಗ ನಟ ದರ್ಶನ್ ಚಿತ್ರರಂಗದಲ್ಲಿ ಬೆಳ್ಳಿ ಹಬ್ಬ ಆಚರಿಸಿಕೊಳ್ಳೋ ಟೈಂ ಬಂದಿದೆ.

ಹ್ಯಾಟ್ರಿಕ್ ಹೀರೋ ಶಿವಣ್ಣ ಚಿತ್ರರಂಗಕ್ಕೆ ಬಂದು 40 ವರ್ಷ ಆಗಿದೆ. ಬಾದ್ ಷಾ ಕಿಚ್ಚ ಸುದೀಪ್ ಬಣ್ಣದ ಜಗತ್ತಿಗೆ ಬಂದು 28 ವರ್ಷ ಆಗಿದೆ.  ನಟ ದರ್ಶನ್ ಸಿನಿ ಜರ್ನಿಗೆ 25 ವರ್ಷ ಆಗಿದ್ದು, ಅದ್ಧೂರಿ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗಿದೆ. ನಟ ದರ್ಶನ್‍(Darshan) ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ 25 ವರ್ಷಗಳಾಗಿವೆ. ಈ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸಲು ಅವರ ಅಭಿಮಾನಿಗಳೇ ಸಿದ್ಧತೆ ಮಾಡಿದ್ದಾರೆ. ದರ್ಶನ್‌ಗೆ ಫೆಬ್ರವರಿ 16ಕ್ಕೆ ಜನ್ಮದಿನ. ಹುಟ್ಟುಹಬ್ಬದ(Birthday) ಮರುದಿನ ಫೆಬ್ರವರಿ 17ರಂದು ಶನಿವಾರ ಶ್ರೀರಂಗಪಟ್ಟಣದ(Srirangapatna) ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ(Sri Ranganatha Swamy temple) ಮೈದಾನದಲ್ಲಿ ‘ಬೆಳ್ಳಿ ಪರ್ವ ದರ್ಶನ್ 25’ ಕಾರ್ಯಕ್ರಮ(Belli Parva Darshan 25)  ಆಯೋಜಿಸಲಾಗಿದೆ. ನಟ ದರ್ಶನ್ ಚಿತ್ರರಂಗಕ್ಕೆ ಬಂದು 25 ವರ್ಷ ಆಗಿದ್ದಕ್ಕೆ ತನ್ನ ಪತ್ನಿ ವಿಜಯಲಕ್ಷ್ಮಿ ದರ್ಶನ್ ಹಾಗು ಮಗ ವಿನೂಷ್ ಜೊತೆ ಟೆಪಲ್ ರನ್ ಮಾಡಿದ್ದಾರೆ. ಪತ್ನಿ ಮಗನ ಜೊತೆ ತಿರುಪತಿಗೆ ಭೇಟಿ ಕೊಟ್ಟಿರೋ ದರ್ಶನ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿವೆ. 

ಇದನ್ನೂ ವೀಕ್ಷಿಸಿ:  Today Horoscope: ಇಂದು ಮೌನ ಗೌರಿ ಆರಾಧನೆ ಏಕೆ ಮಾಡಬೇಕು ? ಇದರ ಮಹತ್ವವೇನು ?

Video Top Stories