Asianet Suvarna News Asianet Suvarna News

1000 ಕೋಟಿ ಕಲೆಕ್ಷನ್ ಮಾಡೋ ಸಿನಿಮಾಗಳ ಲಿಸ್ಟ್ ಕೊಟ್ಟ ಪ್ರೇಕ್ಷಕ: ಈ ವರ್ಷ ಇತಿಹಾಸ ಬರೆಯೋ ಚಿತ್ರಗಳು ಯಾವುವು ?

ಉತ್ತರದಲ್ಲೂ ಇವೆ 1000 ಕೋಟಿ ಕಲೆಕ್ಷನ್ ಸಿನಿಮಾ!
ದಕ್ಷಿಣದಲ್ಲಿ ಯಾರೆಲ್ಲಾ ಮಾಡ್ತಾರೆ 1000 ಕೋಟಿ ಗಳಿಕೆ?
ಅಲ್ಲು ಅರ್ಜುನ್ ಸಾವಿರ ಕೋಟಿ ಒಡೆಯ ಆಗ್ತಾರಾ..?

First Published Jun 30, 2023, 2:58 PM IST | Last Updated Jun 30, 2023, 2:58 PM IST

ಕೆಜಿಎಫ್2, ಪುಷ್ಪ, ಆರ್‌ಆರ್‌ಆರ್‌, ಕಾಂತಾರ ಸಿನಿಮಾಗಳು ಬಂದ ಮೇಲೆ ಭಾರತೀಯ ಚಿತ್ರರಂಗ ಮಂಕಾಗಿದೆ. ಇನ್ನೂರು ಮುನ್ನೂರಿ ಕೋಟಿ ಕಲೆಕ್ಷನ್ ಮಾಡೋ ಸಿನಿಮಾಗಳು ಆಗೊಂದು ಈಗೊಂದು ಬಂದು ಹೋಗ್ತಿವೆ ಬಿಟ್ರೆ, 1000 ಕೋಟಿ ಕಲೆಕ್ಷನ್ ರೀಚ್ ಮಾಡೋ ಮೂವಿಗಳಾವು ಕಾಣ್ತಿಲ್ಲ. ಡಾರ್ಲಿಂಗ್ ಪ್ರಭಾಸ್ರ ಆದಿಪುರುಷ್ ಸಿನಿಮಾ ಮೇಲೆ 1000 ಕೋಟಿ ಕಲೆಕ್ಷನ್ ಮಾಡುತ್ತೆ ಅನ್ನೋ ನಿರೀಕ್ಷೆ ಇತ್ತು. ಆದ್ರೆ ಆ ಎಕ್ಸ್ಪಟೇಷನ್ ಕೂಡ ಟುಸ್ ಆಗಿದೆ. ಹೀಗಾಗಿ ಸಿನಿ ಪ್ರೇಕ್ಷಕರು 1000 ಕೋಟಿ ಕಲೆಕ್ಷನ್ ಮಾಡೋ ಸಿನಿಮಾಗಳನ್ನ ಹುಡುಕಿ, ಲೀಸ್ಟ್ ಒಂದನ್ನ ಮಾಡಿದ್ದಾರೆ. 2023ರಲ್ಲಿ ಭಾರಿ ನಿರೀಕ್ಷೆ ಹುಟ್ಟು ಹಾಕಿರೋದು ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್, ಡಾರ್ಲಿಂಗ್ ಪ್ರಭಾಸ್, ಹಾಗು ಬಾಲಿವುಡ್ ಭಾಯ್ಜಾನ್ ಸಲ್ಮಾನ್ ಖಾನ್. ಹಾಗು ಶಾರುಖ್ ಖಾನ್. ಈ ಸೌತ್, ಮತ್ತು ನಾರ್ತ್ ಸ್ಟಾರ್ಸ್ರಿಂದ ಮಾತ್ರ ಈ ವರ್ಷ ಬಾಕ್ಸಾಫೀಸ್ನಲ್ಲಿ 1000 ಕೋಟಿ ಕಲೆಕ್ಷನ್ಗೆ ರೀಚ್ ಆಗೋ ತಾಖತ್ತಿದೆ ಅಂತ ಹೇಳಲಾಗ್ತಿದೆ.

ಇದನ್ನೂ ವೀಕ್ಷಿಸಿ: ರಾಜಮೌಳಿಯ ಡಬಲ್ ರೋಲ್ ಜಾಹೀರಾತು ರಿಲೀಸ್: ಸ್ಟಾರ್ ಡೈರೆಕ್ಟರ್ ಅಭಿನಯ ಹೇಗಿದೆ ಗೊತ್ತಾ..?

Video Top Stories