Asianet Suvarna News Asianet Suvarna News

ರಾಜಮೌಳಿಯ ಡಬಲ್ ರೋಲ್ ಜಾಹೀರಾತು ರಿಲೀಸ್: ಸ್ಟಾರ್ ಡೈರೆಕ್ಟರ್ ಅಭಿನಯ ಹೇಗಿದೆ ಗೊತ್ತಾ..?

ನಂ-01 ನಿರ್ದೇಶಕನಿಗೆ ಆಕ್ಷನ್ ಕಟ್ ಎಂದ ಜಾಹೀರಾತು ಲೋಕ !
ಪ್ರಚಾರದ ಪ್ರಪಂಚಕ್ಕೆ ಕಾಲಿಟ್ಟೇ ಬಿಟ್ರು ಆರ್.ಆರ್.ಆರ್ ಡೈರೆಕ್ಟರ್!
ಜಾಹೀರಾತಿಗೆ ರಾಜಮೌಳಿ ಚಾರ್ಜ್ ಎಷ್ಟು ಕೋಟಿ ಗೊತ್ತಾ..?

First Published Jun 30, 2023, 2:38 PM IST | Last Updated Jun 30, 2023, 2:38 PM IST

ಎಸ್.ಎಸ್ ರಾಜಮೌಳಿ ಇಂಡಿಯನ್ ಸಿನಿಮಾ ಜಗತ್ತಿನ ಟಾಪ್ ಬ್ರ್ಯಾಂಡ್. ಭಾರತದಲ್ಲಿರೋ ಸೂಪರ್ ಸ್ಟಾರ್ ನಟರ ಸಾಲಿನಲ್ಲಿ ನಿಲ್ಲೋ ಏಕೈಕ ನಿರ್ದೇಶಕ ರಾಜಮೌಳಿ. ಮೌಳಿ ತನ್ನ ಸೂಪರ್ ಹಿಟ್ ಸಿನಿಮಾಗಳಿಂದಲೇ ಸ್ಟಾರ್ ವ್ಯಾಲ್ಯೂವನ್ನ ತಂದುಕೊಂಡವ್ರು. ಬರೀ ಹೀರೋಗಳು ಮಾತ್ರ ಸ್ಟಾರ್ ಅಲ್ಲ ಒಬ್ಬ ನಿರ್ದೇಶಕ ಕೂಡ ಸೂಪರ್ ಸ್ಟಾರ್ ಆಗಬಹುದು ಅಂತ ಈಗಿನ ಜಮಾನಕ್ಕೆ ತೋರಿಸಿಕೊಟ್ಟವರು ರಾಜಮೌಳಿ. ಇಂತಹ ನಂಬರ್ ಇನ್ ಡೈರೆಕ್ಟರ್ ಈಗ ಜಾಹೀರಾತು ಲೋಕಕ್ಕೂ ಕಾಲಿಟ್ಟಿದ್ದಾರೆ. ಎಷ್ಟೋ ಸೂಪರ್ ಸ್ಟಾರ್‌ಗಳು ರಾಜಮೌಳಿಯಿಂದ ಆಕ್ಷನ್ ಕಟ್ ಹೇಳಿಸಿಕೊಳ್ಳಬೇಕು ಅಂತ ಕಾಯುತ್ತಿರುವಾಗ ಜಾಹೀರಾತು ಕಂಪೆನಿಯೊಂದು ಆಕ್ಷನ್ ಕಟ್ ಹೇಳಿದೆ.ರಾಜಮೌಳಿ ಈ ಜಾಹೀರಾತಿನಲ್ಲಿ ಡಬಲ್ ರೋಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಮರ್ಷಿಯಲ್ ಆ್ಯಡ್ನಲ್ಲಿ ಜಕ್ಕಣ್ಣನ ಅಭಿನಯ ಹೇಗಿದೆ ಅಂದ್ರೆ ಅದನ್ನ ಹೊಸದಾಗೇನು ಹೇಳ್ಬೇಕಿಲ್ಲ. ಮೌಳಿಗೆ ಈ ಜಾಹೀರಾತಿನಲ್ಲಿ ನಟಿಸೋಕೆ ಬರೋಬ್ಬರಿ ಮೂರು ಕೋಟಿ ರೂಪಾಯಿ ಸಂಭಾವನೆ ಕೊಡಲಾಗಿದೆಯಂತೆ.

ಇದನ್ನೂ ವೀಕ್ಷಿಸಿ: ರಂಜಿಸೋಕೆ ಬರ್ತಿದ್ದಾರೆ ಸ್ಯಾಂಡಲ್‌ವುಡ್‌ ಬಿಗ್ ಡ್ಯಾಡಿ: ಶಿವಣ್ಣ ಹುಟ್ಟು ಹಬ್ಬಕ್ಕೆ 'ಘೋಸ್ಟ್' ಟೀಸರ್ ಕೊಡುಗೆ..!

Video Top Stories