Asianet Suvarna News Asianet Suvarna News

ಆಶಾಡ ಮಾಸದಲ್ಲಿ ಆಶಿಕಾಗೆ ಮದುವೆ ಆಸೆ: ನಟಿಗೆ ಗಂಡನಾಗೋ ಹುಡುಗ ಆ ನಟನಂತಿರಬೇಕೆಂತೆ !

ಆಶಿಕಾ ರಂಗನಾಥ್‌ಗೆ ವರ ಬೇಕಾಗಿದ್ದಾನೆ..!
ಮದುವೆ ಆಗೋ ಹುಡುಗ ಹೇಗಿರಬೇಕು ಗೊತ್ತಾ.?
ಚುಟು ಚುಟು ಹುಡುಗಿ ಮದುವೆಯ ಸದ್ದು ಜೋರು.!

First Published Jun 20, 2023, 9:22 AM IST | Last Updated Jun 20, 2023, 9:22 AM IST

ಈಗ ಮದುವೆ ಸೀಸನ್ ಮುಗಿದಿದೆ. ಆಶಾಡ ಮಾಸ ಬಂದಾಗಿದೆ. ಮದುವೆ ಆದ ಹೆಣ್ಣು ಮಕ್ಕಳು ಆಶಾಡದಲ್ಲಿ ಅತ್ತೆ ಮುಖ ನೋಡಬಾರ್ದು ಅಂತ ತವರು ಮನೆಗೆ ಬಂದಿದ್ದಾರೆ. ಆದ್ರೆ ನಮ್ ಸ್ಯಾಂಡಲ್‌ವುಡ್‌ನ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್‌ ಮನದಲ್ಲಿ ಮಾತ್ರ ಮದುವೆ ಆಸೆ ಹುಟ್ಟಿದೆ. ಅಷ್ಟೆ ಅಲ್ಲ ತಾನು ಮದುವೆ ಆಗೋ ವರ ಹೇಗಿರಬೇಕು ಅಂತಲೂ ಮನ ಬಿಚ್ಚಿ ಹೇಳ್ಬಿಟ್ಟಿದ್ದಾರೆ. ಆಶಿಕಾ ರಂಗನಾಥ್. ಸ್ಯಾಂಡಲ್‌ವುಡ್‌ನಲ್ಲಿ ಪಟಾಕಿ ಪೋರಿ ಅಂತಲೇ ಫೇಮಸ್. ಪಡ್ಡೆ ಹೈಕ್ಳ ಎದೆಯಲ್ಲಿ ಚುಟು ಚುಟು ಸದ್ದು ಮಾಡೋ ಆಶಿಕಾ 2016ರಲ್ಲಿ ಜಾಲಿ ಬಾಯ್ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ್ರು. ಕಳೆದ ಏಳು ವರ್ಷದಿಂದ ಸ್ಯಾಂಡಲ್‌ವುಡ್‌ನ ಟಾಪ್ ಹೀರೋಯಿನ್ ಲೀಸ್ಟ್‌ನಲ್ಲಿರೋ ಈ ಪಟಾಕಿ ಪೋರಿ ಈಗ ಮದುವೆ ಬಗ್ಗೆ ಸೊಲ್ಲೊಡೆದಿದ್ದಾರೆ. ಆಶಿಕಾ ಮದುವೆ ಆಗೋ ಹುಡುಗ ಥೇಟ್ ಸಿನಿಮಾ ಹೀರೋ ತರ ಇರಬೇಕಂತೆ.

ಇದನ್ನೂ ವೀಕ್ಷಿಸಿ: ಹೆಚ್ಚು ಭಾರಿ 200 ಕೋಟಿ ಕ್ಲಬ್ ಸೇರಿದ ಹೀರೋ ಯಾರು?: ಡಾರ್ಲಿಂಗ್ ಪ್ರಭಾಸ್‌ಗೆ ಸಿಗಲಿಲ್ಲ ಆ ಪಟ್ಟ!

Video Top Stories