ಹೆಚ್ಚು ಭಾರಿ 200 ಕೋಟಿ ಕ್ಲಬ್ ಸೇರಿದ ಹೀರೋ ಯಾರು?: ಡಾರ್ಲಿಂಗ್ ಪ್ರಭಾಸ್‌ಗೆ ಸಿಗಲಿಲ್ಲ ಆ ಪಟ್ಟ!

200 ಕೋಟಿ ಕ್ಲಬ್‌ಗೆ ಆದಿಪುರುಷ್ ಎಂಟ್ರಿ!
ಡಾರ್ಲಿಂಗ್ ಪ್ರಭಾಸ್‌ಗೆ ಸಿಗಲಿಲ್ಲ ಆ ಪಟ್ಟ!
ಈ ಪಟ್ಟಿಯಲ್ಲಿ ರಾಕಿಗೆ ಎಷ್ಟನೇ ಸ್ಥಾನ ?

First Published Jun 20, 2023, 9:08 AM IST | Last Updated Jun 20, 2023, 9:08 AM IST

ಡಾರ್ಲಿಂಗ್ ಪ್ರಭಾಸ್‌ ಆದಿಪುರುಷ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ 200 ಕೋಟಿ ಕಬ್ಲ್ ಸೇರಿದೆ. ಬಾಹುಲಿಯಿಂದ ಶುರುವಾದ 200 ಕೋಟಿ ಬೇಟೆ ಆದಿಪುರುಷ್ ಸಿನಿಮಾದಲ್ಲೂ ಕಂಟಿನ್ಯೂ ಆಗಿದೆ. ಆದ್ರೆ ಇದುವರೆಗೂ ಅತಿ ಹೆಚ್ಚು ಭಾರಿ ತನ್ನ ಸಿನಿಮಾಗಳನ್ನ 200 ಕೋಟಿ ಕ್ಲಬ್‌ಗೆ ಸೇರಿಸಿದ ಕೀರ್ತಿ ಮಾತ್ರ ಡಾರ್ಲಿಂಗ್ ಪ್ರಭಾಸ್ ಕೈ ತಪ್ಪಿದೆ. ಇದೀಗ ಸೌತ್‌ನಲ್ಲಿ ಅತಿ ಹೆಚ್ಚು ಭಾರಿ 200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ ಹೀರೋಗಳ ಪಟ್ಟಿಯೊಂದು ರಿಲೀಸ್ ಆಗಿದೆ. ಆ ಪಟ್ಟಿಯಲ್ಲಿ ಪ್ರಭಾಸ್ 3ನೇ ಸ್ಥಾನಕ್ಕೆ ಬಂದಿದ್ದಾರೆ.
ಸೌತ್‌ನಲ್ಲಿ ಸದ್ಯ ಟ್ರೆಂಡ್ ಆಗ್ತಿರೋದು ಅತಿ ಹೆಚ್ಚು ಭಾರಿ 200 ಕೋಟಿ ಕ್ಲಬ್ ಸೇರಿದ್ದು ಯಾವ ಹೀರೋಗಳ ಸಿನಿಮಾಗಳು ಅನ್ನೋ ಲೆಕ್ಕಾಚಾರ. ಈ ಲೆಕ್ಕಾಚಾರದಲ್ಲಿ ಡಾರ್ಲಿಂಗ್ ಪ್ರಭಾಸ್ ಮೂರನೇ ಸ್ಥಾನದಲ್ಲಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಎರಡನೇ ಸ್ಥಾನ ಪಡೆದಿದ್ದಾರೆ. ಹಾಗಾದ್ರೆ ಫಸ್ಟ್ ಪ್ಲೇಸ್ ಯಾರ ಪಾಲಾಗಿದೆ ಅಂತ ನೋಡಿದ್ರೆ, ಕಾಲಿವುಡ್ ಸೂಪರ್ ಸ್ಟಾರ್ ದಳಪತಿ ವಿಜಯ್. ದಳಪತಿ ವಿಜಯ್‌ ಒಟ್ಟು 6 ಸಿನಿಮಾಗಳು 200 ಕೋಟಿ ಕ್ಲಬ್ ಸೇರಿವೆ. 

ಇದನ್ನೂ ವೀಕ್ಷಿಸಿ: Panchanga: ಇಂದಿನ ರಾಶಿ ಭವಿಷ್ಯ..ಈ ದಿನ ಸುಬ್ರಹ್ಮಣ್ಯ ಸ್ವಾಮಿ ಆರಾಧನೆ ಮಾಡಿ