ಹರಿಪ್ರಿಯಾ-ವಸಿಷ್ಠ ನಡುವಿನ ವಯಸ್ಸಿನ ಅಂತರ ಎಷ್ಟು? ಇಬ್ಬರಲ್ಲಿ ಯಾರು ದೊಡ್ಡವರು?
ನಟಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಮೈಸೂರಿನಲ್ಲಿ ದಾಂಪತ್ಯಕ್ಕೆ ಕಾಲಿಟ್ಟರು. ಇಬ್ಬರು ಮದುವೆಯಾದ ಬೆನ್ನಲ್ಲೇ ವಯಸ್ಸಿನ ಅಂತರ ಸುದ್ದಿಯಾಗುತ್ತಿದೆ.
ಸ್ಯಾಂಡಲ್ ವುಡ್ ನಟ ವಸಿಷ್ಠ ಸಿಂಹ ನಟಿ ಹರಿಪ್ರಿಯಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮೈಸೂರಿನ ಸಚ್ಚಿದಾನಂದ ಆಶ್ರಮದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ವಸಿಷ್ಠ ಸಿಂಹ ನಟಿ ಹರಿಪ್ರಿಯಾ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಿದರು. ಸ್ಟಾರ್ ಜೋಡಿಗೆ ಅನೇಕ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ. ಇವರು ಮದುವೆಯಾದ ಬೆನ್ನಲ್ಲೇ ವಯಸ್ಸಿನ ಅಂತರ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ವಸಿಷ್ಠ ಸಿಂಹ ಶಾಲೆಗೆ ಹೋಗುತ್ತಿದ್ದಾಗಲೇ ಹರಿಪ್ರಿಯಾ ನಾಯಕಿಯಾಗಿದ್ದರೂ ಎಂದು ವಸಿಷ್ಠ ಹೇಳಿದ್ದರು. ಇದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಈ ಬಗ್ಗೆ ವಸಿಷ್ಠ ಸ್ಪಷ್ಟನೆ ಕೂಡ ನೀಡಿದ್ದಾರೆ.