ಪಠಾಣ್, KGF-2 ನಂತರದ ಸ್ಥಾನ ಪಡೆದ ಆದಿಪುರುಷ್: ಮೊದಲ ದಿನದ ಕಲೆಕ್ಷನ್ ಎಷ್ಟು ?

ವಿವಾದ, ಟೀಕೆಯನ್ನ ಮೆಟ್ಟಿ ನಿಂತ ಟಿಟೌನ್ ಡಾರ್ಲಿಂಗ್!
ಬಾಕ್ಸಾಫೀಸ್ನಲ್ಲಿ 'ಆದಿಪುರುಷ್' ಭರ್ಜರಿ ದರ್ಬಾರ್..!
ಮತ್ತೆ ಸಕ್ಸಸ್ ಟ್ರ್ಯಾಕ್ಗೆ ಬರುತ್ತಿದ್ದಾರೆ ಡಾರ್ಲಿಂಗ್ ಪ್ರಭಾಸ್!

First Published Jun 19, 2023, 2:49 PM IST | Last Updated Jun 19, 2023, 2:49 PM IST

ಆದಿಪುರುಷ್ ಈ ಸಿನಿಮಾ ಶುರುವಾದಾಗಿನಿಂದ ವಿವಾದಗಳು ಟೀಕೆ ಟಿಪ್ಪಣಿಗಳು ಸುತ್ತುವರೆದಿದ್ವು. ಬಾಹುಬಲಿಯಂತಹ ದೊಡ್ಡ ಸಿನಿಮಾ ಮಾಡಿ ಗೆದ್ದಿರೋ ನಟ ಪ್ರಭಾಸ್ ಆ ಸಿನಿಮಾ ನಂತರ ಬಂದ ಚಿತ್ರಗಳಲ್ಲಿ ಭಾರಿ ಸೋಲು ಕಂಡಿದ್ರು. ಹೀಗಾಗಿ ಆದಿಪುರುಷ್ ಟೀಸರ್ ಕ್ವಾಲಿಟಿ ನೋಡಿ ಪ್ರಭಾಸ್‌ಗೆ ತಲೆ ಕೆಟ್ಟಿದೆಯಾ. ಸರಿಯಾದ ಸಿನಿಮಾ ಆಯ್ಕೆ ಮಾಡಿಕೊಳ್ಳೋಕೆ ಯಾಕ್ ಆಗ್ತಿಲ್ಲ. ಬೇರೆ ಸಿನಿಮಾಗಳಂತೆ ಆದಿಪುರುಷ್ ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸುತ್ತೆ ಅಂತೆಲ್ಲಾ ಭವಿಷ್ಯ ನುಡಿದಿದ್ರು. ಈಗ ಆದಿಪುರುಷ್ ರಿಲೀಸ್ ಆಗಿ ಎರಡು ದಿನ ಕಳೆದಿದಿದೆ. ಈ ಸಿನಿಮಾ ಸೃಷ್ಟಿಸಿದ್ದ ವಿವಾದ ಟೀಕೆಗಳೆಲ್ಲಾ ಈಗ ಮಂಗ ಮಾಯವಾಗಿದೆ. ಯಾಕಂದ್ರೆ ಆದಿಪುರುಷ್ ಬಾಕ್ಸಾಫೀಸ್‌ನಲ್ಲಿ ದರ್ಬಾರ್ ಮಾಡುತ್ತಿದ್ದಾನೆ.ಈ ಸಿನಿಮಾ ಮೊದಲ ದಿನ ಹಿಂದಿಯಲ್ಲಿ ಬರೋಬ್ಬರಿ 38 ಕೋಟಿ ಗಳಿಸಿದೆ. ಇನ್ನುಳಿದಂತೆ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಿಂದಿ ಸೇರಿ ಒಟ್ಟು 90 ಕೋಟಿ ದುಡ್ಡನ್ನ ಭಾರತದಲ್ಲಿ ಗಳಿಸಿದೆಯಂತೆ.ಎರಡೇ ದಿನಕ್ಕೆ ಈ ಸಿನಿಮಾ ವರ್ಲ್ಡ್ ವೈಡ್ ಕಲೆಕ್ಷನ್ 150 ಕೋಟಿ ದಾಟಿದೆ ಅಂತ ವರದಿ ಆಗಿದೆ.

ಇದನ್ನೂ ವೀಕ್ಷಿಸಿ: ರಜನಿಕಾಂತ್ 171ನೇ ಸಿನಿಮಾದಲ್ಲಿ ರಾಕಿಂಗ್ ರಂಗು.?: ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಹೇಗಿರುತ್ತೆ ಯಶ್ ರೋಲ್.?