ರಜನಿಕಾಂತ್ 171ನೇ ಸಿನಿಮಾದಲ್ಲಿ ರಾಕಿಂಗ್ ರಂಗು.?: ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಹೇಗಿರುತ್ತೆ ಯಶ್ ರೋಲ್.?
ತಮಿಳು ಸೂಪರ್ ಸ್ಟಾರ್ ಚಿತ್ರದಲ್ಲಿ ಕನ್ನಡ ಸೂಪರ್ ಸ್ಟಾರ್!
ತಲೈವಾ ಜತೆ ತೆರೆ ಹಂಚಿಕೊಳ್ತಾರಂತೆ ರಾಕಿಂಗ್ ಸ್ಟಾರ್?
ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಬರೋ ಸಿನಿಮಾ!
ಸೌತ್ ಸಿನಿಮಾ ಜಗತ್ತಲ್ಲಿ ಈಗ ಹಾಟ್ ಟಾಪಿಕ್ ಅಂದ್ರೆ ತಲೈವಾ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ರಾಕಿಂಗ್ ಸ್ಟಾರ್ ಯಶ್. ಅದಕ್ಕೆ ಕಾರಣ ತಮಿಳು ಸೂಪರ್ ಸ್ಟಾರ್ ಸಿನಿಮಾದಲ್ಲಿ ಕನ್ನಡ ಸೂಪರ್ ಸ್ಟಾರ್ ಯಶ್ ನಟಿಸುತ್ತಾರೆ ಅನ್ನೋ ಸುದ್ದಿ. ಹೌದು, ಒಂದೇ ಸಿನಿಮಾದಲ್ಲಿ ಯಶ್ ಹಾಗೂ ರಜನಿಕಾಂತ್ ಸ್ಕ್ರೀನ್ ಶೇರ್ ಮಾಡುತ್ತಿದ್ದಾರಂತೆ. ರಜನಿಕಾಂತ್‌ಗಾಗಿ ಯಶ್ ಗೆಸ್ಟ್ ಅಪೀರಿಯನ್ಸ್ ಗೆ ಒಕೆ ಅಂದಿದ್ದಾರಂತೆ. ಸೂಪರ್ ಸ್ಟಾರ್ ರಜನಿಕಾಂತ್ ಈಗ ಜೈಲರ್‌ನಲ್ಲಿ ಲಾಕ್ ಆಗಿದ್ದಾರೆ. ಈ ಜೈಲರ್ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಡಾಕ್ಟರ್ ಶಿವರಾಜ್ ಕುಮಾರ್ ನಟಿಸುತ್ತಿರೋದು ನಿಮ್ಗೆ ಗೊತ್ತೇ ಇದೆ. ಇದರ ಜೊತೆ ತಲೈವಾ 171ನೇ ಸಿನಿಮಾ ಬಗ್ಗೆ ಭಾರಿ ಟಾಕ್ ಶುರುವಾಗಿದೆ. ಈ ಸಿನಿಮಾವನ್ನ ಲೋಕೇಶ್ ಕನಕರಾಜ್ ನಿರ್ದೇಶನ ಮಾಡುತ್ತಿದ್ದಾರೆ. ಇಬ್ಬರು ಕೂತು ಸ್ಕ್ರಿಪ್ಟ್ ಒಕೆ ಮಾಡಿಕೊಂಡಿದ್ದು, ಈ ಕಥೆಗೆ ರಾಕಿಂಗ್ ಸ್ಟಾರ್ ಯಶ್‌ಗೆ ಗೆಸ್ಟ್ ಅಪೀರಿನ್ಸ್ ಮಾಡುವಂತೆ ಅಪ್ರೋಚ್ ಮಾಡಲಾಗಿದೆಯಂತೆ.
ಇದನ್ನೂ ವೀಕ್ಷಿಸಿ: ಸಿಲಿಕಾನ್ ಸಿಟಿ ಈಗ ಸೇಫ್ ಸಿಟಿ: ಜನರ ರಕ್ಷಣೆಗೆ ಬಂತು ಎಮರ್ಜೆನ್ಸಿ ಸೇವೆ, ಹೇಗೆ ಕಾರ್ಯನಿರ್ವಹಿಸುತ್ತೆ ?