
Baana Dariyalli; ಚಿತ್ರಕ್ಕಾಗಿ ಸರ್ಫಿಂಗ್ ಕಲಿತೆ, ಅದ್ಭುತವಾಗಿತ್ತು; ರುಕ್ಮಿಣಿ ವಸಂತ್
ನಟಿ ರುಕ್ಮಿಣಿ ವಸಂತ್ ಬಾನದಾರಿಯಲ್ಲಿ ಸಿನಿಮಾಗಾಗಿ ಸರ್ಫಿಂಗ್ ಕಲಿತಿರುವುದಾಗಿ ಹೇಳಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಬಾನ ದಾರಿಯಲ್ಲಿ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಈಗಾಗಲೇ ಹಾಡಿನ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಬಾನದಾರಿಯಲ್ಲಿ ಇದೀಗ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದೆ. ಇತ್ತೀಚಿಗಷ್ಟೆ ಸಿನಿಮಾತಂಡ ಪ್ರೆಸ್ ಮೀಟ್ ಮಾಡಿದ್ದು ಒಂದಿಷ್ಟು ವಿಚಾರಗಳನ್ನು ಶೇರ್ ಮಾಡಿದೆ. ಈ ಸಿನಿಮಾದ ಬಗ್ಗೆ ನಾಯಕಿ ರುಕ್ಮಿಣಿ ವಸಂತ ಮಾತನಾಡಿ ಪ್ರತಿದಿನ ನಾನು ಈ ಸೆಟ್ ನಲ್ಲಿ ಕಲಿಯುತ್ತಿದ್ದೆ. ಸರ್ಫಿಂಗ್ ಕಲಿಯಬೇಕು ಎಂದು ನಿರ್ದೇಶಕರು ಹೇಳಿದ್ರು. ಅದನ್ನು ಕಲಿಯೋಕೆ ಅವಕಾಶ ಸಿಕ್ಕಿದೆ. 5 ದಿನಗಳಲ್ಲಿ ಸರ್ಫಿಂಗ್ ಕಲಿತೆ ಎಂದು ಹೇಳಿದ್ದಾರೆ.