Asianet Suvarna News Asianet Suvarna News

ಹುಡುಗಿಯರ ಹಾರ್ಟ್ ಫೇವರೇಟ್‌ ಮೊಟ್ಟೆ ಸ್ಟಾರ್: ಇನ್ಫೋಸಿಸ್ ಹೆಣ್ಮಕ್ಕಳ ಜೊತೆ ರಾಜ್ ಬಿ ಶೆಟ್ಟಿ ಮಸ್ತ್ ಡಾನ್ಸ್ !

ರಾಜ್ ಬಿ ಶೆಟ್ಟಿ ಜೊತೆ ಹಣ್ಣು ಮಕ್ಕಳ ಮಸ್ತ್ ಡಾನ್ಸ್!
ಇನ್ಫೋಸಿಸ್ ಹುಲಿಗಳ ಜೊತೆ ಶೆಟ್ರ ಹುಲಿ ಕುಣಿತಾ.!
'ಟೋಬಿ'ಗಾಗಿ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಶೆಟ್ರು!

ರಾಜ್ ಬಿ ಶೆಟ್ಟಿ ಈಗ ಸ್ಯಾಂಡಲ್ವುಡ್‌ನ ಹೊಸ ಟ್ರೆಂಡ್‌. ಹೀರೋ ಅಂದ್ರೆ ಹ್ಯಾಂಡ್ಸಮ್ ಆಗಿರಬೇಕು ಅನ್ನೋರಿಗೆ ತನ್ನ ನಟನಾ ಟ್ಯಾಲೆಂಟ್‌ನಿಂದಲೇ ಟಕ್ಕರ್ ಕೊಟ್ಟ ಸ್ಟಾರ್ ಈ ಕರಾವಳಿ ಕುವರಾ. ಬೋಳು ತಲೆಯ ಈ ಹೀರೋ ತನ್ನ ಮೊದಲ ಸಿನಿಮಾದಲ್ಲೇ ಮೊಟ್ಟೆ ಸ್ಟಾರ್ ಅಂತ ಫೇಮಸ್ ಆದ್ರು. ಅಷ್ಟೆ ಅಲ್ಲ ಒಂದು ಮೊಟ್ಟೆಯ ಕಥೆ ಸಿನಿಮಾದಲ್ಲಿ ತಲೆಯಲ್ಲಿ ಕೂದಲಿಲ್ಲದವರಿಗೆ ಹೆಣ್ಣು ಸಿಗೋಲ್ಲಾ ಅಂತ ಹೇಳಿದ್ದ ಶೆಟ್ರು ಈಗ ಬ್ಯೂಟಿಫುಲ್ ಹುಡುಗಿಯರ ಮಧ್ಯೆ ಲಕ ಲಕ ಅಂತ ಹೊಳೆಯುತ್ತಿದ್ದಾರೆ. ರಾಜ್ ಬಿ ಶೆಟ್ಟಿ(Raj B Shetty) ಅಂದ್ರೆ ಇದ್ದ ಬದ್ದ ಹುಡುಗಿಯರೆಲ್ಲಾ ಮುಗಿ ಬೀಳುತ್ತಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಈ ವೀಡಿಯೋ. ವಾವ್ಹ್ ಈ ಅದೃಷ್ಟ ಯಾರಿಗೆ ಸಿಗುತ್ತೆ ಹೇಳಿ. ದೊಡ್ಡ ಹುಡುಗಿರ ಗುಂಪಿನ ಜೊತೆ ಫುಲ್ ಎನರ್ಜಿಟಿಕ್ ಆಗಿ ಕುಣಿಯೋದು ಅಂದ್ರೆ ಸುನ್ಮೇನಾ. ಈ ಅದೃಷ್ಟ ನಮ್ ಮೊಟ್ಟೆ ಸ್ಟಾರ್ ರಾಜ್ ಬಿ ಶೆಟ್ಟಿ ಪಾಲಾಗಿದೆ. ಹೆಣ್ಮಕ್ಕಳ ಲೋಕದಲ್ಲಿ ರಾಜ್ ಬಿ ಶೆಟ್ಟಿ ಮೈ ಚಳಿ ಬಿಟ್ಟು ಮಸ್ತ್ ಡಾನ್ಸ್(Dance) ಮಾಡಿದ್ದಾರೆ. ಬೆಂಗಳೂರಿನ ಇನ್ಫೋಸಿಸ್‌ನ ಕ್ಯಾಂಪಸ್‌ನಲ್ಲಿ ನಡೆದ ಟೋಬಿ ಸಿನಿಮಾದ(Tobi cinema) ಪ್ರಚಾರ ಕಾರ್ಯಕ್ರಮದಲ್ಲಿ. ತನ್ನ ಟೋಬಿ ಸಿನಿಮಾ ಪ್ರಚಾರಕ್ಕೆ ಇನ್‌ಫೋಸಿಸ್ ಕ್ಯಾಂಪಸ್‌ ಗೆ(Infosys campus) ಹೋಗಿದ್ದ ರಾಜ್ ಬಿ ಶೆಟ್ಟಿಗೆ ಅಲ್ಲಿನ ಲೇಡಿ ಉದ್ಯೋಗಿಗಳು ಗ್ರ್ಯಾಂಡ್ ವೆಲ್ ಕಮ್ ಕೊಟ್ಟಿದ್ದಾರೆ. ಇದರ ಜೊತೆಗೆ ಅಲ್ಲಿದ ಲೇಡಿ ಹುಲಿಗಳ ಜೊತೆ ರಾಜ್ ಬಿ ಶೆಟ್ಟಿ ಹುಲಿ ಹೆಜ್ಜೆ ಹಾಕಿ ಮಸ್ತ್ ಎಂಜಾಯ್ ಮಾಡಿದ್ದಾರೆ. ಈ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. 

ಇದನ್ನೂ ವೀಕ್ಷಿಸಿ:  ಮತ್ತೆ ಕನ್ನಡಕ್ಕೆ ಬರುತ್ತಾರಾ ಟಾಲಿವುಡ್ ಮಿಲ್ಕಿ ಬ್ಯೂಟಿ: 'ಸಂಜು ವೆಡ್ಸ್ ಗೀತಾ 2' ಚಿತ್ರದಲ್ಲಿ ತಮನ್ನಾ ಭಾಟಿಯಾ ?

Video Top Stories