Asianet Suvarna News Asianet Suvarna News

ಅಂಬಿ ಪುತ್ರನ ಮದುವೆ ಸಂಭ್ರಮ: ಅರಿಶಿಣ ಶಾಸ್ತ್ರದ ವಿಡಿಯೋ ಇಲ್ಲಿದೆ

ಅಂಬರೀಷ್ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಅಂಬಿ ಪುತ್ರ ಅಭಿಷೇಕ್ ಹಳದಿ ಶಾಸ್ತ್ರದ ವಿಡಿಯೋ ವೈರಲ್ ಆಗಿದೆ.  

ರೆಬೆಲ್ ಸ್ಟಾರ್ ಅಂಬರೀಷ್ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಅಂಬಿ ಪುತ್ರನ ಮಗನ ಮದುವೆಗೆ ಕೌಂಟ್‌ಡೌನ್ ಶುರುವಾಗಿದ್ದು ಈಗಾಗಲೇ ಶಾಸ್ತ್ರಗಳು ನಡೆಯುತ್ತಿವೆ. ಅಭಿಷೇಕ್ ಅರಿಶಿಣ ಶಾಸ್ತ್ರ ಜೋರಾಗಿದ್ದು ವಿಡಿಯೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಬಿಳಿ ಶರ್ಟ್ ಮತ್ತು ಪಂಚೆಯಲ್ಲಿ ಅಭಿಷೇಕ್ ಕಂಗೊಳಿಸುತ್ತಿದ್ದಾರೆ. ಅಭಿಷೇಕ್ ಅಂಬರೀಶ್  ಮತ್ತು ಅವಿವ ಬಿಡಪ ಜೂನ್ 5ರಂದು (ಸೋಮವಾರ) ಅದ್ದೂರಿಯಾಗಿ ಮದುವೆಯಾಗುತ್ತಿದ್ದಾರೆ. ಜೂನ್ 7ರಂದು ಭರ್ಜರಿಯಾಗಿ ಆರತಕ್ಷತೆ ಸಮಾರಂಭ ನಡೆಯಲಿದೆ.