Asianet Suvarna News Asianet Suvarna News

ಗೋಲ್ಡನ್ ಜುಬಿಲಿ ಸಂಭ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಅಪ್ಪ ಅಮ್ಮ, ಮಗನಿಂದ ವಿಶೇಷ ಉಡುಗೊರೆ

ತಮ್ಮ ತಂದೆ ತಾಯಿಯ 50ನೇ ವರ್ಷದ ವಿವಾಹ ವಾರ್ಷಿಕೋತ್ಸವ ಚಕ್ರವರ್ತಿ ಸೂಲಿಬೆಲೆ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ. ಪೋಷಕರ ಪ್ರೀತಿಯ ಜೀವನವನ್ನು ತೋರುವ ವಿಡಿಯೋವೊಂದನ್ನು ಅವರು ನಿರ್ದೇಶಿಸಿದ್ದಾರೆ.

ಇಳಿವಯಸ್ಸಲ್ಲೂ ಪತ್ನಿಗೆ ಹೂ ತಂದು ಕೊಡುವ ಪತಿ, ಮಲ್ಲಿಗೆ ಕಟ್ಟು ಕಟ್ಟುವ ಪತ್ನಿಗೆ ಹೂವೆತ್ತಿಕೊಡುವ ಪ್ರೀತಿ, ಜಾಲರಿಯನ್ನು ಒರೆಸುತ್ತಾ ಕೂತ ಗಂಡನಿಗೆ ಬಾವಿಯಲ್ಲಿ ಸೇದಿ ತಂದ ನೀರನ್ನು ಚಿಮುಕಿಸಿ ತುಂಟಾಟ ಮೆರೆವ ಹೆಂಡತಿ, ಹೆಂಡತಿಯನ್ನು ಕಂಡೊಡನೆ ಕೈಲಿದ್ದ ಸಿಗರೇಟ್ ಎಸೆವ ಪತಿ, ಹಾಯಾಗಿ ಕುಳಿತಿರು ನೀನು ಮಹಾರಾಣಿಯ ಹಾಗೆ ಎನ್ನುತ್ತಾ ಮನದಿನ್ನೆಯ ತಲೆನೋವಿಗೆ ಒತ್ತುತ್ತಾ ಮದ್ದರೆವ ಮಹಾಪ್ರೇಮಿ.. ಒಟ್ಟಿಗೇ ಕುಳಿತು ಮಂಡಕ್ಕಿ ತಿನ್ನುತ್ತಾ ಪಗಡೆಯಾಡುವುದು, ಒಂದೇ ಬಾಳೆಲೆಯಲ್ಲಿ ಊಟ ಮಾಡುವುದು, ಕವಳ ತಿನ್ನಿಸುವುದು.. ಆಹಾ! ಈ ಮುದ್ದಾದ ಇಳಿ ವಯಸ್ಸಿನ ಜೋಡಿಯ ಪ್ರೀತಿ ನೋಡುತ್ತಿದ್ದರೆ, ವೈವಾಹಿಕ ಜೀವನ ಎಂಥ ವರದಾನ ಎಂದೆನಿಸದಿರದು. 

ಅಮ್ಮನ ತಬ್ಬಿ ಹಿಡಿದ ಆಗಷ್ಟೇ ಜನಿಸಿದ ಮಗು... ವಿಡಿಯೋ ವೈರಲ್‌

ಈ ವಿಡಿಯೋದಲ್ಲಿರುವ ದೇವಿದಾಸ್ ಮತ್ತು ಮಂಗಳಾ ದಂಪತಿ ತಮ್ಮ ವಿವಾಹದ 50ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ. ಚೆಂದದ ಜೋಡಿಯ ಚೆಲುವಾದ ವಿಡಿಯೋ ಹೊರತಂದಿದ್ದಾರೆ ಪುತ್ರನೂ ಆದ, ಈ ವಿಡಿಯೋ ನಿರ್ದೇಶಕರೂ ಆದ ಚಕ್ರವರ್ತಿ ಸೂಲಿಬೆಲೆ. ತಮ್ಮ ತಂದೆ ತಾಯಿಯ ವೈವಾಹಿಕ ಜೀವನದ ಗೋಲ್ಡನ್ ಜುಬಿಲಿಗೆ ಈ ಉಡುಗೊರೆ ಕೊಟ್ಟಿದ್ದಾರೆ. 'ಇನ್ನೂ ಐವತ್ತಾದದಷ್ಟೇ, ಅವ್ರು ನೂರ್ಕಾಲ ಚೆನ್ನಾಗಿರ್ಲಿ' ಎಂಬ ಹಾರೈಕೆಯೊಂದಿಗೆ ಸೂಲಿಬೆಲೆ ತಮ್ಮ ಮುದ್ದಾದ ಕುಟುಂಬದ ಪರಿಚಯ ಮಾಡಿಸಿದ್ದಾರೆ. 

Video Top Stories