Asianet Suvarna News Asianet Suvarna News

ಅಮ್ಮನ ತಬ್ಬಿ ಹಿಡಿದ ಆಗಷ್ಟೇ ಜನಿಸಿದ ಮಗು... ವಿಡಿಯೋ ವೈರಲ್‌

ಆಗಷ್ಟೇ ಜನಿಸಿದ ಮಗುವೊಂದು ತಾಯಿಯ ಮುಖದ ಬಳಿ ತಂದ ಕೊಡಲೇ ಮಗು ಅಮ್ಮನ ಒಂದು ಕೈಯಲ್ಲಿ ತಬ್ಬಿಕೊಂಡು ಮೊದಲ ಬಾರಿ ಅಳುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

just born baby hugged its mother tightly video goes viral akb
Author
First Published Mar 27, 2023, 3:22 PM IST

ತಾಯಿ ಹಾಗೂ ಮಗುವಿನ ನಡುವೆ ಅವಿನಾಭಾವ ಸಂಬಂಧವಿರುತ್ತದೆ.  ಅರಿವಿರದಿದ್ದರೂ ತಾಯಿ ಬಿಟ್ಟು  ಹೋದ ತಕ್ಷಣ ಮಗು ಅಳಲು ಶುರು ಮಾಡುತ್ತದೆ. ಅಚ್ಚರಿ ಎನಿಸಿದರೂ ತಾಯಿ ಮಗುವಿನ ಒಡನಾಟ ಅಂತಹದ್ದು,  ಅದೇ ರೀತಿ ಈಗ, ಆಗ ತಾನೆ ಜನಿಸಿದ ಮಗುವೊಂದನ್ನು ತಾಯಿಯ ಮುಖದ ಬಳಿ ತಂದ ಕೊಡಲೇ ಮಗು ಅಮ್ಮನ ಒಂದು ಕೈಯಲ್ಲಿ ತಬ್ಬಿಕೊಂಡು ಮೊದಲ ಬಾರಿ ಅಳುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ @TheFigen_ ಎಂಬ ಖಾತೆಯಿಂದ ಪೋಸ್ಟ್ ಮಾಡಲಾಗಿದ್ದು,  22 ಸೆಕೆಂಡ್‌ಗಳ ವಿಡಿಯೋದಲ್ಲಿ  ಆಗಷ್ಟೇ ಜನಿಸಿದ ಮಗವವನ್ನು ಮಗುವಿನ ಮುಖದ ಬಳಿ ವೈದ್ಯರು/ದಾದಿಯರು ಹಿಡಿಯುತ್ತಿದ್ದು, ಈ ವೇಳೆ ಮಗು ಕೈ ಚಾಚಿ ಅಮ್ಮನ ಮುಖವನ್ನು ತಬ್ಬಿ ಹಿಡಿದುಕೊಂಡು ಕೆನ್ನೆಯ ಮೇಲೆಲ್ಲಾ ಮುತ್ತಿಡುತ್ತದೆ. ಆ ಕ್ಷಣ ಆ ತಾಯಿಯೂ ಭಾವುಕಳಾಗಿದ್ದು, ಆಕೆಯ ಕಣ್ಣಲ್ಲಿ ನೀರು ಕೆಳಗಿಳಿಯುತ್ತದೆ.  ಈಗ ತಾನೇ ಜನಿಸಿದ ಈ ಮಗು ಅಮ್ಮನನ್ನು ಬಿಡಲು ಒಪ್ಪುತ್ತಿಲ್ಲ ಎಂದು ಬರೆದುಕೊಂಡು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು,  6 ಲಕ್ಷಕ್ಕೂ ಅಧಿಕ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 

Newborn Screening Test : ಜನನದ ನಂತರ ತಕ್ಷಣ ಮಗುವಿಗೆ ಈ ಟೆಸ್ಟ್ ಮಾಡಿಸಿ

ಈ ವಿಡಿಯೋಗೆ ಅನೇಕರು ಕಾಮೆಂಟ್ ಮಾಡಿದ್ದು, ದಿನ ಆರಂಭಿಸಲು ಇದಕ್ಕಿಂತ ಸುಂದರ ವಿಡಿಯೋ ಇನ್ನೊಂದಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.  ಇದು ನಿಜವಾದ ಪ್ರೀತಿ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೆ ಕೆಲವರು ಈ ವಿಡಿಯೋವನ್ನು ಇರಿಸಿಕೊಂಡು ಅಮೆರಿಕಾದಲ್ಲಿ ಗರ್ಭಪಾತಕ್ಕೆ ಅವಕಾಶ ನೀಡುವ ಕಾಯ್ದೆ ಜಾರಿಗೆ ಒತ್ತಾಯಿಸುತ್ತಿರುವವರಿಗೆ ಟಾಂಗ್ ನೀಡಿದ್ದಾರೆ. ಈ ವಿಡಿಯೋ ಒಂದು ಅದ್ಭುತ ಆದರೆ ಹೆಚ್ಚಿನ ಡೆಮೋಕ್ರಾಟ್( ಅಮೆರಿಕಾದ ಡೆಮೊಕ್ರಟಿಕ್ ಪಕ್ಷ) ಗಳು, ಗರ್ಭಪಾತದ ಹಕ್ಕು ಎಂಬ ನೆಪದಲ್ಲಿ  ಪೂರ್ಣಾವಧಿಗೂ ಮೊದಲೇ ಮಗುವನ್ನು ಸಾಯಿಸುವ ಕಾನೂನನ್ನು ಒತ್ತಾಯಿಸುತ್ತಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.  ಒಟ್ಟಿನಲ್ಲಿ ಈ ವಿಡಿಯೋ ತಾಯಿ ಹಾಗೂ ಮಗುವಿನ ನಡುವಿನ ಅವಿನಾಭಾವ ಸಂಬಂಧ ಪದಗಳಲ್ಲಿ ವರ್ಣಿಸಲಾಗದಷ್ಟು ಆಗಾಧ ಎಂಬುದನ್ನು ತೋರಿಸುತ್ತಿದೆ.  9 ತಿಂಗಳು ಮಗುವನ್ನು ಒಡಲಿನಲ್ಲಿ ಹೊತ್ತು ಹೆತ್ತ ತಾಯಿಗೂ ಈ ಕ್ಷಣ ಬದುಕಿಗೊಂದು ಸಾರ್ಥಕ್ಯ ಭಾವವನ್ನು ನೀಡುತ್ತದೆ. 

ಮಗುವನ್ನು ನಗಿಸಲು ಕಚಗುಳಿ ಇಡ್ತೀರಾ? 

ನಿಮ್ಮ ಸುತ್ತಮುತ್ತಲಿನ ಅಥವಾ ನಿಮ್ಮ ಮನೆಯ ಜನರು ಚಿಕ್ಕ ಮಕ್ಕಳೊಂದಿಗೆ(Small children) ಆಟವಾಡೋನ್ನು ನೀವು ಆಗಾಗ್ಗೆ ನೋಡಿರಬಹುದು. ವಿಶೇಷ ಏನೂ ಇಲ್ಲದಿದ್ದರೂ, ಹೆಚ್ಚಿನ ಕುಟುಂಬಗಳಲ್ಲಿ, ಜನರು ಸಂಜೆ ಕೆಲಸದಿಂದ ಮನೆಗೆ ಮರಳಿದ ನಂತರ ತಮ್ಮ ಮಕ್ಕಳೊಂದಿಗೆ ಆಟವಾಡುತ್ತಾರೆ. ಮಗುವಿನ ಮುಖದ ಮೇಲಿನ ನಗು ದಿನವಿಡೀ ಪೋಷಕರ ಒತ್ತಡವನ್ನು ಕ್ಷಣಾರ್ಧದಲ್ಲಿ ತೆಗೆದುಹಾಕುತ್ತೆ. ಆದರೆ ನಿಮ್ಮ ಮಗುವನ್ನು ನಗಿಸಲು ಕಚಗುಳಿ ಇಡೋ ಪೋಷಕರಲ್ಲಿ ನೀವೂ ಒಬ್ಬರಾಗಿದ್ದರೆ, ತಕ್ಷಣ ನಿಮ್ಮ ಅಭ್ಯಾಸವನ್ನು ಬದಲಾಯಿಸಿ. ಹಾಗೆ ಮಾಡೋದರಿಂದ ನಿಮ್ಮ ಮಗುವಿಗೆ ಸಮಸ್ಯೆಗಳು ಉಂಟಾಗಬಹುದು. 

ನವಜಾತ ಶಿಶುವಿಗೆ ನೀರು ಕೊಡೋ ಅಗತ್ಯ ಇದೆಯಾ?

ಸಾಮಾನ್ಯವಾಗಿ ಎರಡು ರೀತಿಯ ಕಚಗುಳಿಗಳಿವೆ(Tickle). ಮೊದಲನೆಯದು ನಿಸ್ಮೆಸಿಸ್, ಅದು ಮಗುಗೆ ಖುಷಿ ನೀಡುತ್ತೆ ಮತ್ತು ಎರಡನೆಯದು ಗಾರ್ಗಲ್ಸಿಸ್, ಮಗುಗೆ ಇಷ್ಟವಾಗದಂತದ್ದು, ವೇಗವಾಗಿ ಕಚಗುಳಿ ಮಾಡುತ್ತಲೇ ಇರೋದು. ಸರಿಯಾಗಿ ಮಾತನಾಡಲು ಸಾಧ್ಯವಾಗದ ನವಜಾತ ಶಿಶು ಕಚಗುಳಿಯನ್ನು ಇಷ್ಟಪಡುತ್ತೋ ಅಥವಾ ಇಲ್ಲವೋ ಎಂದು ಹೇಳಲು ಸಾಧ್ಯವಿಲ್ಲ.

ನೋವಿನ(Pain) ಭಾವನೆ: ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಒಂದು ಸ್ಟಡಿ ಪ್ರಕಾರ ಮಗುವಿಗೆ ಕಚಗುಳಿ ಇಡೋದ್ರಿಂದ ನೋವಿಗೆ ಕಾರಣವಾಗಬಹುದು ಎಂದು ಹೇಳುತ್ತೆ. ಹಿಂದಿನ ಕಾಲದಲ್ಲಿ ಇಂತಹ ಅನೇಕ ಘಟನೆಗಳು ನಡೆದಿವೆ, ಕಚಗುಳಿಯಿಂದಾಗಿ ಅನೇಕ ಜನರು ಸಾವನ್ನಪ್ಪಿದ್ದಾರೆ.  ಮೆಲ್ಲನೆ, ಸ್ವಲ್ಪ ಹೊತ್ತು ಕಚಗುಳಿ ಇಡೋದ್ರಿಂದ ಯಾವುದೇ ಹಾನಿಯಾಗೋದಿಲ್ಲ, ಮಗು ಕೂಡ ಖುಷಿಯಿಂದ ಆಟವಾಡುತ್ತೇ, ಆದರೆ ದೀರ್ಘಕಾಲದವರೆಗೆ ಕಚಗುಳಿ ಮಾಡಿದಾಗ, ಅದು ಮಗುವಿಗೆ ನೋವನ್ನು ಉಂಟುಮಾಡಬಹುದು.ಇದರಿಂದ ಮಗುವಿನ ಆರೋಗ್ಯಕ್ಕೆ(Health) ತೊಂದರೆ ಆಗಬಹುದು.   

Follow Us:
Download App:
  • android
  • ios