ಕಾಂಗ್ರೆಸ್ ಮಣಿಸಲು ‘ಕಮಲ-ದಳ’ ಮೈತ್ರಿ ಯುದ್ಧ: ಗಣೇಶನ ಹಬ್ಬದ ಬಳಿಕ ಆಗುತ್ತಾ ಅಧಿಕೃತ ಘೋಷಣೆ ?

ಬಿಜೆಪಿ ಜೆಡಿಎಸ್ ಮೈತ್ರಿ ಬಳಿಕ ಮೊದಲ ಬಾರಿಗೆ ದೆಹಲಿಗೆ ಬಿಎಸ್‌ವೈ
ಬಿಎಸ್‌ವೈ ವಿಶ್ವಾಸಕ್ಕೆ ಪಡೆಯದೆ ಮುನ್ನಡೆಯುವ ಸಾಧ್ಯತೆ ಕಡಿಮೆ
ವಿಶ್ವಾಸಕ್ಕೆ ಪಡೆದ್ರೆ ಕೇಂದ್ರ ನಾಯಕರು ನಿರ್ಧಾರ ಮಾಡುವ ಸಾಧ್ಯತೆ
 

First Published Sep 13, 2023, 12:00 PM IST | Last Updated Sep 13, 2023, 12:00 PM IST

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಮಣಿಸಲು ಬಿಜೆಪಿ(BJP) ಮತ್ತು ಜೆಡಿಎಸ್‌(JDS) ಮೈತ್ರಿ ಮಾಡಿಕೊಂಡಿದ್ದು, ಇಂದು ದೆಹಲಿಗೆ  ಬಿ ಎಸ್ ಯಡಿಯೂರಪ್ಪ(B S Yediyurappa) ತೆರಳಲಿದ್ದಾರೆ. ಬಿಜೆಪಿ ಜೆಡಿಎಸ್ ಮೈತ್ರಿ ಬಳಿಕ ಮೊದಲ ಬಾರಿಗೆ ದೆಹಲಿಗೆ ಬಿಎಸ್‌ ಯಡಿಯೂರಪ್ಪ ತೆರಳಲಿದ್ದಾರೆ. ಸಂಸದೀಯ ಮಂಡಳಿ ಸಭೆ ಹಿನ್ನೆಲೆಯಲ್ಲಿ ದೆಹಲಿಗೆ ಹೋಗುತ್ತಿದ್ದು, ಇದೇ ವೇಳೆ ಮೈತ್ರಿ ಮಾತುಕತೆ ಕೂಡ ನಡೆಸುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಬಳಿಕ ಬಿಎಸ್‌ವೈ ಅಮಿತ್ ಶಾರನ್ನು ಭೇಟಿ ಮಾಡಿರಲಿಲ್ಲ. ಕೇಂದ್ರ ನಾಯಕರು ಸಹ ಮೈತ್ರಿ ಬಗ್ಗೆ ರಾಜ್ಯ ನಾಯಕರ ಸಲಹೆ ಕೇಳಿರಲಿಲ್ಲ. ತಮ್ಮನ್ನು ಕೇಳಿಲ್ಲ ಎನ್ನುವ ಚಿಕ್ಕ ಬೇಸರ ಕೆಲ ರಾಜ್ಯ ನಾಯಕರಲ್ಲಿ ಇತ್ತು. ಯಡಿಯೂರಪ್ಪ ಜೊತೆ ಕೇಂದ್ರ ನಾಯಕರು ಮೈತ್ರಿ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಜೆಡಿಎಸ್ ವರಿಷ್ಠ ದೇವೆಗೌಡರ ಜೊತೆ ಆದ ಚರ್ಚೆ ಬಗ್ಗೆ ಮಾತುಕತೆ ನಡೆಸಬಹುದು. ಅಮಿತ್ ಶಾ-ಯಡಿಯೂರಪ್ಪ ಮಹತ್ವದ ಮಾತುಕತೆ ನಡೆಸುವ ಸಾಧ್ಯತೆ ಇದೆ. 

ಇದನ್ನೂ ವೀಕ್ಷಿಸಿ:  ಸಾರ್ವಜನಿಕ ಸ್ವತ್ತಿನ ಮೇಲೆ ಭೂಮಾಫಿಯಾ ಕಣ್ಣು: ಬಿಬಿಎಂಪಿ ಪಾರ್ಕ್‌ಗೆ ಬೀಗ ಜಡಿದ ಭೂಗಳ್ಳರು..?