Asianet Suvarna News Asianet Suvarna News

ಸಾರ್ವಜನಿಕ ಸ್ವತ್ತಿನ ಮೇಲೆ ಭೂಮಾಫಿಯಾ ಕಣ್ಣು: ಬಿಬಿಎಂಪಿ ಪಾರ್ಕ್‌ಗೆ ಬೀಗ ಜಡಿದ ಭೂಗಳ್ಳರು..?

ದಿನದಿಂದ ದಿನಕ್ಕೆ ಸಿಲಿಕಾನ್ ಸಿಟಿ ಬೆಂಗಳೂರು ದೊಡ್ಡ ನಗರವಾಗಿ ಬೆಳೆಯುತ್ತಲೇ ಇದೆ. ಒಂದಿಂಚೂ ಜಾಗಕ್ಕೂ ರಕ್ತಪಾತವೇ ನಡೆದು ಹೋಗುತ್ತೆ. ಇನ್ನೂ ಭೂಗಳ್ಳರಂತೂ ಇಂಚು ಜಾಗ ಸಿಕ್ಕರೂ ನುಂಗಿಬಿಡುತ್ತಾರೆ. ಇದರ ಮಧ್ಯೆ ಇಲ್ಲೊಬ್ಬ ಸಾರ್ವಜನಿಕ ಸ್ವತ್ತಿಗೆ ಬೇಲಿ ಹಾಕಿಬಿಟ್ಟಿದ್ದ. ಯಾರ ಅವನು...ಏನಿದು ಸ್ಟೋರಿ ನೋಡಿಕೊಂಡು ಬರೋಣ ಬನ್ನಿ.
 

ಅಲ್ಲಿ ಸುಮಾರು 7 ಎಕರೆ ಪ್ರದೆಶದಲ್ಲಿ ಸಾರ್ವಜನಿಕ ಕೆರೆ ಪಾರ್ಕ್ ಇದೆ. ಅದು ಹಿರಿಯ ನಾಗರಿಕರ ವಾಯುವಿಹಾರದ ಹಾಟ್ಸ್ಪಾಟ್ ಹಾಗೂ ಮಕ್ಕಳ ಆಟದ ನೆಚ್ಚಿನ ತಾಣವೇ ಆಗಿತ್ತು. ಆ ಪಾರ್ಕ್‌ನ್ನು ಬಿಬಿಎಂಪಿ(BBMP) ಕೂಡ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅಭಿವೃದ್ಧಿಪಡಿಸಿತ್ತು. ವಾಕಿಂಗ್(Walking)  ಮಾಡಲು ಅನಕೂಲ ಆಗಲಿ ಅಂತ ಕಳೆದ 6 ತಿಂಗಳ ಹಿಂದಷ್ಟೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ವಾಕಿಂಗ್ ಪಾತ್ ನಿರ್ಮಾಣ ಮಾಡಿದ್ರು. ಆದ್ರೆ ಸಾರ್ವಜನಿಕ ಸ್ವತ್ತಿನ ಮೇಲೆ ಭೂ ಮಾಫಿಯಾ(land mafia) ಕಣ್ಣು ಬಿದ್ದಿದೆ, ಪಾರ್ಕ್ ಗೇಟ್ ಮುಂದೆ ಖಾಸಗಿ ಸ್ವತ್ತು ಅಂತ ಬೋರ್ಡ್ ಹಾಕಿ ಪಾರ್ಕ್ ಗೇಟ್ಗೆ ಬೀಗ ಹಾಕಲಾಗಿದೆ. ಇದೀಗ ಪಾರ್ಕ್ ಸುತ್ತ ಅನುಮಾನದ ಹುತ್ತವೇ ಎದ್ದುಬಿಟ್ಟಿದೆ. 

ಇದರ ಮಧ್ಯೆ ಬಿಬಿಎಂಪಿ ಅಧಿಕಾರಿಗಳು ಭೂ ಮಾಫಿಯಾಗೆ ಕೈ ಜೋಡಿಸಿದ್ರಾ? ಅನ್ನೋ ಪ್ರಶ್ನೆ ಉದ್ಭವ ಆಗಿದೆ. ಬಿಬಿಎಂಪಿ ದಕ್ಷಿಣ ವಲಯ ವ್ಯಾಪ್ತಿಯ ಉತ್ತರಹಳ್ಳಿ ವಾರ್ಡ್ ಸಂಖ್ಯೆ 184ರ ಸರ್ವೇ ನಂಬರ್ 77ರಲ್ಲಿ ಸುಮಾರು 7 ಎಕರೆ ಪ್ರದೇಶದಲ್ಲಿ ಸಾರ್ವಜನಿಕ ಪಾರ್ಕ್ ಇದೆ. ಈ ಪಾರ್ಕ್ ಮೇಲೆ ಭೂ ಮಾಫಿಯಾದವರ ಕಣ್ಣು ಬಿದ್ದಿರುವ ಆರೋಪ ಕೇಳಿ ಬಂದಿದೆ. ಇದೀಗ ಪ್ರೈವೇಟ್ ಪ್ರಾಪರ್ಟಿ ಅಂತ ಬೋರ್ಡ್ ಹಾಕಿ ಪಾರ್ಕ್‌ಗೆ ಬೀಗ ಹಾಕಲಾಗಿದೆ. ಹೀಗಾಗಿ ವಾಯುವಿಹಾರಕ್ಕೆ ತೊಂದರೆ ಆಗುತ್ತಿದೆ ಅಂತ ಹಿರಿಯ ನಾಗರಿಕರೊಬ್ಬರು ಆಕ್ರೋಶ ಹೊರ ಹಾಕುತ್ತಿದ್ದಾರೆ.

ಇನ್ನೂ ಖಾಸಗಿ ಸಂಸ್ಥೆಯ ಮಾಲೀಕನಾದ ಶುಭಾಂಗಿಯವರು. ಈ ಸ್ವತ್ತು ತಮ್ಮದೇ ಎಂದು ಪಟ್ಟು ಹಿಡಿದು ಬೀಗ ಜಡಿದಿದ್ದಾರೆ. ಬಿಬಿಎಂಪಿಗೆ ಸರ್ವೇ  ಮಾಡಲು ಮನವಿ ಮಾಡಿದ್ದೇನೆ. ಒಂದೂವರೆ ಎಕರೆ ನನ್ನದು ಬಿಟ್ಟು ಕೊಡಿ ಅಂತಿದ್ದಾರೆ. ಇನ್ನೂ ಲಕ್ಷಾಂತರ ರೂ.ಖರ್ಚು ಮಾಡಿ ಪಾರ್ಕ್ ಅಭಿವೃದ್ಧಿ ಮಾಡಿದ ಬಿಬಿಎಂಪಿಯೇ ಕಣ್ಮುಚ್ಚಿ ಕುಳಿತಿದೆ. ಬಿಬಿಎಂಪಿ ಅಧಿಕಾರಿಗಳೇ ಭೂ ಮಾಫಿಯಾದವರೊಂದಿಗೆ ಶಾಮೀಲಾಗಿದ್ದಾರಾ ಅನ್ನೋ ಅನುಮಾನ ಶುರುವಾಗಿದೆ. ಕೂಡಲೇ ಸಂಬಂಧಪಟ್ಟವರು ಎಚ್ಚೆತ್ತುಕೊಂಡು, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಿದೆ.

ಇದನ್ನೂ ವೀಕ್ಷಿಸಿ:  ರಾಜ್ಯ ಹಿಂದೂ ಜಾತ್ರಾ ವ್ಯಾಪಾರಿಗಳ ಸಂಘ ಉದ್ಘಾಟನೆ: ಅಂಗಡಿಗಳ ಮೇಲೆ ಭಗವಾಧ್ವಜ ಹಾಕಲು ಕರೆ

Video Top Stories