Asianet Suvarna News Asianet Suvarna News

ಪಡಿತರ ಕಾರ್ಡ್‌ಗೆ ಆಧಾರ್ ಲಿಂಕ್ ವದಂತಿ: ಸೈಬರ್ ಸೆಂಟರ್‌ಗಳ ಮುಂದೆ ಮಹಿಳೆಯರ ಕ್ಯೂ !

ಗೃಹಲಕ್ಷ್ಮೀ ಯೋಜನೆಯ ಸದುಪಯೋಗ ಪಡೆಯಲು ಪಡಿತರ ಕಾರ್ಡ್‌ಗೆ ಆಧಾರ್‌ ಲಿಂಕ್‌ ಮಾಡಬೇಕು ಎಂಬ ವದಂತಿ ಹಬ್ಬಿದ ಹಿನ್ನೆಲೆ ಮಹಿಳೆಯರು ಸೈಬರ್‌ ಸೆಂಟರ್‌ಗಳ ಮುಂದೆ ಕ್ಯೂ ನಿಂತಿದ್ದಾರೆ.
 

ಕೋಲಾರ: ಗೃಹಲಕ್ಷ್ಮೀ ಯೋಜನೆಗಾಗಿ ಪಡಿತರ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡಬೇಕು ಎಂಬ ವದಂತಿ ಹಬ್ಬಿದೆ. ಈ ಹಿನ್ನೆಲೆ ಸೈಬರ್ ಸೆಂಟರ್‌ಗಳ ಎದುರು ಆಧಾರ್ ಲಿಂಕ್ ಮಾಡಲು ಮಹಿಳೆಯರು ಕ್ಯೂನಲ್ಲಿ ನಿಂತಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಅಷ್ಟೇ ಅಲ್ಲದೇ ಆಧಾರ್ ಲಿಂಕ್ ಮಾಡಲು ಸೈಬರ್‌ ಸಿಬ್ಬಂದಿ 250 ರೂ. ವಸೂಲಿ ಮಾಡುತ್ತಿರುವ ಆರೋಪ ಸಹ ಕೇಳಿಬಂದಿದೆ. ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಸೈಬರ್ ಸೆಂಟರ್ ಗಳಲ್ಲಿ ಮಹಿಳೆಯರು ಕ್ಯೂ ನಿಂತಿದ್ದಾರೆ. ಸೈಬರ್ ಸೆಂಟರ್‌ಗಳ‌ ಮೇಲೆ‌ ತಹಶೀಲ್ದಾರ್, ಪೊಲೀಸರು ದಾಳಿ ನಡೆಸಿ, ಪರಿಶೀಲನೆ ಮಾಡಿದ್ದಾರೆ. ವದಂತಿಗೆ ಕಿವಿಕೊಡದಂತೆ ಮಹಿಳೆಯರಿಗೆ ತಹಶೀಲ್ದಾರ್‌ ಎಚ್ಚರಿಕೆಯನ್ನೂ ನೀಡಿದ್ದಾರೆ. ಸೈಬರ್ ಸೆಂಟರ್‌ ಮಾಲೀಕರಿಗೂ ಸಹ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ವೀಕ್ಷಿಸಿ: ಸರ್ಕಾರಿ ಶಾಲೆ ಬಾಗಿಲಲ್ಲೇ ಬಿತ್ತು ಹೆಣ: 18 ವರ್ಷದ ಹಿಂದೆ ತಂದೆ.. ಈಗ ಮಗ..!