Siddaramaiah Campaign: ನಾನು ಇರಬೇಕಾ, ಬೇಡ್ವಾ ? ಇರಬೇಕು ಅಂದ್ರೆ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ: ಸಿಎಂ ಸಿದ್ದರಾಮಯ್ಯ

ಚಾಮುಂಡೇಶ್ವರಿ, ಚಾಮರಾಜ ವಿಧಾನಸಭಾ ಕ್ಷೇತ್ರದ ಮುಖಂಡರ ಸಭೆ
ಒಕ್ಕಲಿಗ ಮತಗಳ ಸೆಳೆಯುವ ನಿಟ್ಟಿನಲ್ಲಿ ಮುಖಂಡರ ಸೆಳೆಯಲು ಯತ್ನ
ಸಭೆಯಲ್ಲಿ ಕಾಂಗ್ರೆಸ್ ಗೆಲುವಿನ ಲೆಕ್ಕಾಚಾರ ಬಿಚ್ಚಿಟ್ಟ ಸಿದ್ದರಾಮಯ್ಯ

Share this Video
  • FB
  • Linkdin
  • Whatsapp

ಮೈಸೂರು,ಚಾಮರಾಜನಗರ ಗೆಲುವಿಗೆ ಸಿದ್ದರಾಮಯ್ಯ(Siddaramaiah) ಪಣ ತೊಟ್ಟಿದ್ದಾರೆ. 3 ದಿನ ಪ್ರವಾಸ ಕೈಗೊಂಡಿರುವ ಸಿಎಂ ಬೂತ್ ನಾಯಕರ ಸಭೆ ಸೇರಿದಂತೆ ಹಲವು ರಣತಂತ್ರ ಹೆಣೆಯುತ್ತಿದ್ದಾರೆ. ಇದರ ಜೊತೆ ತವರಿನಲ್ಲೇ ಮತದಾರರ ಮುಂದೆ ಭಾವನಾತ್ಮಕ ಅಸ್ತ್ರ ಪ್ರಯೋಗಿಸಿದ್ದಾರೆ. ವರುಣದಲ್ಲಿ 60 ಸಾವಿರ ಲೀಡ್ ಕೊಟ್ರೆ ನನ್ನ ಯಾರು ಮುಟ್ಟಕಾಗಲ್ಲ ಅಂದ್ರೆ. ಇತ್ತ ಯತೀಂದ್ರ(Yathindra Siddaramaiah) ಕೂಡ ವಿರೋಧಿಗಳ ಟೀಕೆ ತಪ್ಪಿಸಲು ನಮ್ಮನ್ನು ಗೆಲ್ಲಿಸಿ ಅಂತಾ ಮನವಿ ಮಾಡಿದ್ದಾರೆ. ಭಾವನೆ ಬೆರೆಸಿ ಅಪ್ಪ-ಮಗ ಭಾಷಣ ಮಾಡಿದ್ದಾರೆ. ನಾನು ಇರಬೇಕಾ, ಬೇಡ್ವಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಇರಬೇಕು ಅಂದ್ರೆ ಕಾಂಗ್ರೆಸ್(Congress) ಅಭ್ಯರ್ಥಿ ಗೆಲ್ಲಿಸಿ ಎಂದು ವರುಣಾ ಕ್ಷೇತ್ರದ(Varuna Constituency) ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಶತಾಯಗತಾಯ ಎರಡೂ ಕ್ಷೇತ್ರ ಗೆಲ್ಲಲು ಸಿದ್ದರಾಮಯ್ಯ ಪಣ ತೊಟ್ಟಿದ್ದು, ಮೂರು ದಿನ ಮೈಸೂರಿನಲ್ಲೇ ಬೀಡು ಬಿಟ್ಟಿದ್ದಾರೆ.

ಇದನ್ನೂ ವೀಕ್ಷಿಸಿ: ಬಿಜೆಪಿಯೊಳಗಿನ ಬಂಡಾಯ ಶಮನಕ್ಕೆ ಅಮಿತ್‌ ಶಾ ಎಂಟ್ರಿ: ಇಂದು ನಾಲ್ಕು ಕ್ಷೇತ್ರಗಳ ಕೋರ್ ಕಮಿಟಿ ಸಭೆ

Related Video