Asianet Suvarna News Asianet Suvarna News

ಬಿಜೆಪಿಯೊಳಗಿನ ಬಂಡಾಯ ಶಮನಕ್ಕೆ ಅಮಿತ್‌ ಶಾ ಎಂಟ್ರಿ: ಇಂದು ನಾಲ್ಕು ಕ್ಷೇತ್ರಗಳ ಕೋರ್ ಕಮಿಟಿ ಸಭೆ

ಗೊಂದಲ ಪರಿಹಾರಕ್ಕೆ 4 ಕ್ಷೇತ್ರಗಳ ಕೋರ್ ಕಮಿಟಿ ಸಭೆ
ಟಿಕೆಟ್ ಘೋಷಣೆ ಬಳಿಕ ಗೊಂದಲ ಪರಿಹಾರಕ್ಕೆ ಸೂತ್ರ
ಗೊಂದಲ ಇರುವ ನಾಲ್ಕು ಕ್ಷೇತ್ರಗಳ ಸಂಬಂಧ ಸಭೆ 

ಇಂದು ಅಮಿತ್ ಶಾ ಮಹತ್ವದ ಸಭೆ ನಡೆಸಲಿದ್ದು, ನಿರ್ಣಾಯಕ ಕ್ಷೇತ್ರಗಳ ಬಗ್ಗೆ ಮಹತ್ವದ ಚರ್ಚೆಯಾಗಲಿದೆ. ಗೊಂದಲ ಪರಿಹಾರಕ್ಕೆ 4 ಕ್ಷೇತ್ರಗಳ ಕೋರ್ ಕಮಿಟಿ ಸಭೆ(Core committee meeting) ನಡೆಯಲಿದೆ. ಟಿಕೆಟ್(Ticket) ಘೋಷಣೆ ಬಳಿಕ ಪಕ್ಷದ ಗೊಂದಲ ಪರಿಹಾರಕ್ಕೆ ಸೂತ್ರ ರಚಿಸಲಾಗಿದೆ. ಕೆಲ ಕ್ಷೇತ್ರದಲ್ಲಿ ಒಳ ಏಟು ಬೀಳುವ ಆಂತಕ ಎದುರಾಗಿದೆ. ಹಾಗಾಗಿ ಸ್ವತಃ ಅಮಿತ್ ಶಾ(Amit Shah) ಸಭೆ ನಡೆಸಿ ಚರ್ಚೆ ನಡೆಸಲಿದ್ದಾರೆ. ಮಧ್ಯಾಹ್ನ ಮೂರು ಗಂಟೆಗೆ ಮಹತ್ವದ ಸಭೆ ನಡೆಯಲಿದ್ದು, ತಾಜ್ ವೆಸ್ಟ್ ಎಂಡ್ ಹೊಟೇಲ್‌ನಲ್ಲಿ ಸಭೆ ನಿಗದಿ ಮಾಡಲಾಗಿದೆ. ಗೊಂದಲ ಇರುವ ನಾಲ್ಕು ಕ್ಷೇತ್ರಗಳ ಸಂಬಂಧ ಸಭೆ ನಡೆಸಲಾಗುವುದು. ಚಿತ್ರದುರ್ಗ, ದಾವಣಗೆರೆ, ತುಮಕೂರು, ಚಿಕ್ಕಬಳ್ಳಾಪುರ ಕ್ಷೇತ್ರಗಳ ಗೊಂದಲ ಪರಿಹಾರದ ಬಗ್ಗೆ ಚರ್ಚೆ ನಡೆಯಲಿದೆ. 

ಇದನ್ನೂ ವೀಕ್ಷಿಸಿ:  Amit Shah: ಬೆಂಗಳೂರು ಗ್ರಾಮಾಂತರದಲ್ಲಿ ಅಮಿತ್‌ ಶಾ ರೋಡ್ ಶೋ: ಬಿಜೆಪಿ-ಜೆಡಿಎಸ್ ನಾಯಕರ ಜತೆ ಬ್ರೇಕ್‌ ಫಾಸ್ಟ್ ಮೀಟಿಂಗ್!

Video Top Stories