ಟಿ.ಬಿ. ಜಯಚಂದ್ರಗೆ ಸಿಗದ ಸಚಿವ ಸ್ಥಾನ: ಮೊಮ್ಮಗಳಾದ ಆರನಾ ಸಂದೀಪ್‌ರಿಂದ ರಾಹುಲ್‌ ಗಾಂಧಿಗೆ ಪತ್ರ !

ಟಿ.ಬಿ.ಜಯಚಂದ್ರ ಪುತ್ರ ಸಂದೀಪ್ ಅವರ ಪುತ್ರಿ ಆರನಾ ರಾಹುಲ್‌ ಗಾಂಧಿಗೆ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾಳೆ.

Share this Video
  • FB
  • Linkdin
  • Whatsapp

ತುಮಕೂರು: ಶಿರಾ ಶಾಸಕ ಟಿ.ಬಿ. ಜಯಚಂದ್ರಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ ಬೇಸರಗೊಂಡ ಮೊಮ್ಮಗಳು ರಾಹುಲ್‌ ಗಾಂಧಿಗೆ ಪತ್ರ ಬರೆದಿದ್ದಾರೆ.
ತಾತನಿಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೇಸರಗೊಂಡ ಮೊಮ್ಮಗಳಾದ ಆರನಾ ಸಂದೀಪ್ ರಾಹುಲ್‌ಗೆ ಪತ್ರ ಬರೆದಿದ್ದಾರೆ. ವಿಡಿಯೋದಲ್ಲಿ ಮಾತನಾಡಿರುವ ಆರನಾ, ನನ್ನ ತಾತ ಮಿನಿಸ್ಟರ್ ಆಗದಿದ್ದಕ್ಕೆ ನನಗೆ ಬೇಜಾರಾಗಿದೆ. ಅವರು ಹಾರ್ಡ್ ವರ್ಕ್ ಮಾಡುತ್ತಾರೆ. ಅವರಿಗೆ ಸಚಿವ ಸ್ಥಾನ ನೀಡಿ. ಜನರಿಗೆ ತುಂಬಾ ಪ್ರೀತಿ‌ ಕೊಟ್ಟು,ಸಹಾಯ ಮಾಡ್ತಾರೆ ಎಂದು ಟಿ.ಬಿ. ಜಯಚಂದ್ರ ಮೊಮ್ಮಗಳಾದ ಆರನಾಳಿಂದ ಭಾವನಾತ್ಮಕ ವಿಡಿಯೋ ರವಾನೆ ಮಾಡಲಾಗಿದೆ. ರಾಹುಲ್ ಗಾಂಧಿಗೆ ವಿಡಿಯೋ ಹಾಗೂ ಪತ್ರದ ಮುಖೇನ ಭಾವನಾತ್ಮಕ ಮನವಿ ಮಾಡಲಾಗಿದೆ.

ಇದನ್ನೂ ವೀಕ್ಷಿಸಿ: ಆರ್‌ಜೆಡಿ ವಿವಾದಾತ್ಮಕ ಟ್ವೀಟ್‌: ಶವ ಪೆಟ್ಟಿಗೆಗೆ ನೂತನ ಸಂಸತ್‌ ಭವನ ಹೋಲಿಕೆ !

Related Video