Asianet Suvarna News Asianet Suvarna News

ಆರ್‌ಜೆಡಿ ವಿವಾದಾತ್ಮಕ ಟ್ವೀಟ್‌: ಶವ ಪೆಟ್ಟಿಗೆಗೆ ನೂತನ ಸಂಸತ್‌ ಭವನ ಹೋಲಿಕೆ !

ಭಾನುವಾರ ದೇಶದ ನೂತನ ಸಂಸತ್ ಭವನವನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ. ಇನ್ನೂ ಈ ಸಂಸತ್‌ನನ್ನು ಆರ್‌ಜೆಡಿ ಶವ ಪೆಟ್ಟಿಗೆಗೆ ಹೋಲಿಸಿದೆ.

ನೂತನ ಸಂಸತ್‌ ಭವನವನ್ನು ಆರ್‌ಜೆಡಿ ಶವ ಪೆಟ್ಟಿಗೆಗೆ ಹೋಲಿಸಿದೆ. ಇದು ಏನು ಎಂದು ಬರೆದು ಆರ್‌ಜೆಡಿ ಟ್ವೀಟ್ ಮಾಡಿದೆ. ನೂತನ ಸಂಸತ್ ಕಟ್ಟಡದ ಉದ್ಘಾಟನೆ ವಿಚಾರದಲ್ಲಿ ಈಗಾಗಲೇ ವಿರೋಧ ಪಕ್ಷಗಳ ವಿರೋಧವನ್ನ ವ್ಯಕ್ತಪಡಿಸಿವೆ. ಇದರ ಬೆನ್ನಲೇ ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಲೋಕ ದಳ (ಆರ್‌ಜೆಡಿ) ಪಕ್ಷ ಹೊಸ ಸಂಸತ್ ಭವನವನ್ನು ಶವಪೆಟ್ಟಿಗೆಯ ವಿನ್ಯಾಸಕ್ಕೆ ಹೋಲಿಕೆ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೂ ಇದಕ್ಕೆ ಬಿಜೆಪಿ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ, ಹೊಸ ಸಂಸತ್ತನ್ನು ಶವ ಪೆಟ್ಟಿಗೆಗೆ ಹೋಲಿಕೆ ಮಾಡಿರುವ ವ್ಯಕ್ತಿಗಳ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಹೇಳಿದೆ.

ಇದನ್ನೂ ವೀಕ್ಷಿಸಿ: 2021ರ ಲೇಖನ, ಸೆಂಗೋಲ್ ಬೆನ್ನು ಬಿದ್ದ ಮೋದಿ ಸರ್ಕಾರ: ಇದು ಭಾರತದ ಆಸ್ತಿಯೋ ? ನೆಹರೂ ಸ್ವತ್ತೋ ?