ಮಾತನಾಡುವ ಭರದಲ್ಲಿ ಹಳ್ಳಿಭಾಷೆ ಬಳಸಿದ್ದೇನೆ: ಶಾಸಕ ಟಿ.ಡಿ ರಾಜೇಗೌಡ ವಿಷಾದ
ದತ್ತಪೀಠ ಹಾಗೂ ಅಯೋಧ್ಯೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಶಾಸಕ ಟಿ.ಡಿ ರಾಜೇಗೌಡ ಕ್ಷಮೆಯಾಚಿಸಿದ್ದಾರೆ.
ದತ್ತಪೀಠ ಹಾಗೂ ಅಯೋಧ್ಯೆ ಬಗ್ಗೆ ಹಗುರವಾಗಿ ಮಾತನಾಡಿದ್ದ ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ, ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಮಣಿದು ಕ್ಷಮೆ ಕೇಳಿದ್ದಾರೆ. ಯುವಕರನ್ನು ಸ್ವಾರ್ಥ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಆಡಿಯೋದಲ್ಲಿ ಅವಾಚ್ಯ ಶಬ್ದಗಳನ್ನು ಬಳಸಬಾರದಿತ್ತು ಎಂದು ಅವರು ತಿಳಿಸಿದ್ದಾರೆ. ಮಾತನಾಡುವ ಭರದಲ್ಲಿ ಹಳ್ಳಿ ಭಾಷೆ ಬಳಸಿದ್ದೇನೆ. ಅಭಿವೃದ್ಧಿ ಕೆಲಸಕ್ಕೆ ಅಡ್ಡಗಾಲು ಹಾಕ್ತಿರೋದು ಜನರಿಗೆ ಗೊತ್ತಿದೆ. ನಿರಂತರ ಕಿರುಕುಳದಿಂದ ಆಕ್ರೋಶಗೊಂಡು ಮಾತನಾಡಿದೆ. ನನ್ನ ಹೇಳಿಕೆಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.