ಬಿಗ್-3 ವರದಿಗೂ ಮುನ್ನವೇ ಉರ್ದು ಶಾಲೆಗೆ ಬಂತು ಸೌಲಭ್ಯ: 50 ವರ್ಷದ ಸಮಸ್ಯೆಗೆ ಶಾಶ್ವತ ಪರಿಹಾರ

BIG-3 ಕ್ಯಾಮೆರಾ ಕಂಡ್ರೆ ಸಾಕು ಏನೆಲ್ಲಾ ಆಗುತ್ತೆ ಅನ್ನೋದಕ್ಕೆ ಈ ಸ್ಟೋರಿ ಉತ್ತಮ ಉದಾಹರಣೆಯಾಗಿದ್ದು, 50 ವರ್ಷದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿದೆ.
 

First Published Jan 25, 2023, 4:01 PM IST | Last Updated Jan 25, 2023, 4:01 PM IST

ಶಿವಮೊಗ್ಗ ನಗರದ ನ್ಯೂ ಮಂಡ್ಲಿಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳು ಶಿಥಿಲಾವಸ್ಥೆ ತಲುಪಿದ್ದು, ಶೈಕ್ಷಣಿಕ ವಾತಾವರಣ ಎಂಬುದು ಅದ್ವಾನ ಎದ್ದು ಹೋಗಿತ್ತು.ಈ ಸರ್ಕಾರಿ ಉರ್ದು ಶಾಲೆಯಲ್ಲಿ 1 ರಿಂದ 7 ನೇ ತರಗತಿಯವರೆಗೆ 95 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದರು. ಗುಣಮಟ್ಟದ ವಿದ್ಯಾಭ್ಯಾಸಕ್ಕಾಗಿ ಸೂಕ್ತ ಸೌಕರ್ಯಗಳನ್ನು ಒದಗಿಸಿ ಕೊಡಿ ಎಂದು ಶಿಕ್ಷಣ ಇಲಾಖೆಗೆ ಅದೆಷ್ಟೇ ಬಾರಿ ಮನವಿ ಮಾಡಿದ್ರು ಯಾರೂ ಕೂಡ ಕ್ಯಾರೇ ಅಂದಿರಲಿಲ್ಲ.  ಕೂಡಲೇ ಆ ಶಾಲೆಗೆ ಬಿಗ್-3 ಎಂಟ್ರಿ ಕೊಡ್ತು. ಅಲ್ಲಿನ ದುಸ್ಥಿಯ ಬಗ್ಗೆ ಶೂಟ್ ಮಾಡಿಕೊಂಡು ಬಂದ್ವಿ ಅಷ್ಟೇ ನೋಡಿ ಮುಂದೆ ಆಗಿದ್ದೆಲ್ಲಾ ಪವಾಡ. ಕೂಡಲೇ ಶಿಕ್ಷಣ ಇಲಾಖೆ ಎಚ್ಚೆತ್ತು ಕೊಳ್ತು.  ಶಾಲಾ ಅಭಿವೃದ್ಧಿ ಸಮಿತಿ ಪೋಷಕರು ಮತ್ತು ವಿದ್ಯಾರ್ಥಿಗಳು ಕಚೇರಿ ಎದುರು ಅದೆಷ್ಟೇ ಪ್ರತಿಭಟನೆ ನಡೆಸಿದ್ದರು ಬಗೆ ಹರಿಯದ ಸಮಸ್ಯೆಗೆ ಬಿಗ್-3 ಕೇವಲ ಎಂಟ್ರಿ ಕೊಟ್ಟಿದ್ದಷ್ಟೇ ಎಲ್ಲವೂ ಫಟಾ ಫಟ್ ಅಂತಾ ಬಗೆಹರಿಯಿತು. ಇದೀಗ ಸರ್ಕಾರಿ ಉರ್ದು ಶಾಲೆಯ ಶಿಥಿಲಾವಸ್ಥೆ ತಲುಪಿದ ಮೂರು ಕೊಠಡಿಗಳು ಕೂಡ ಸುಣ್ಣ ಬಣ್ಣ ಬಳಿದುಕೊಂಡು ಹಂಚಿನ ಚಾವಣಿಯನ್ನು ದುರಸ್ತಿಗೊಳಿಸಿ ಕೊಠಡಿಯ ನೆಲಹಾಸು ಸೇರಿದಂತೆ ಎಲ್ಲವೂ ಸಿದ್ದಗೊಳ್ಳುತ್ತಿದೆ.  ಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರೆಲ್ಲಾ ಫುಲ್ ಖುಷ್ ಆಗಿದ್ದಾರೆ. ಇಲ್ಲಿದೆ ಸಂಪೂರ್ಣ ಡಿಟೇಲ್ಸ್.

Video Top Stories