Asianet Suvarna News Asianet Suvarna News

'ಸಚಿವ ಸ್ಥಾನಕ್ಕೆ ಲಾಬಿ ಮಾಡಲ್ಲ, ಹೈಕಮಾಂಡ್ ಜವಾಬ್ದಾರಿ ಕೊಟ್ರೆ ನಿರ್ವಹಿಸ್ತೀನಿ'

Jan 10, 2021, 1:51 PM IST

ಬೆಂಗಳೂರು (ಜ. 10): ಒಂದು ಕಡೆ ಸಂಪುಟ ವಿಸ್ತರಣೆ ಕಸರತ್ತಿಗೆ ಸರ್ಕಸ್ ಶುರುವಾಗಿದೆ. ಸಿಎಂ ಬಿಎಸ್‌ವೈ ದೆಹಲಿಗೆ ದೌಡಾಯಿಸಿದ್ದಾರೆ. ಹೈಕಮಾಂಡ್ ಅಸ್ತು ಹೇಳೋದೊಂದೇ ಬಾಕಿ. ಇನ್ನೊಂದು ಕಡೆ ರಾಜ್ಯದಲ್ಲಿ ಸಚಿವಾಕಾಂಕ್ಷಿಗಳ ಭರಾಟೆ ಜೋರಾಗಿದೆ. 

ಸಂಕ್ರಾಂತಿ ಬಳಿಕ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆ, ಕಿಡಿ ಹೊತ್ತಿಸಿದೆ ಯತ್ನಾಳ್ ಹೇಳಿಕೆ

ಸಚಿವ ಸ್ಥಾನಕ್ಕೆ ನಾನು ಲಾಬಿ ಮಾಡಲ್ಲ. ನಮ್ಮ ಹೈಕಮಾಂಡ್, ಇವರು ಕೆಲಸ ಮಾಡುತ್ತಾರೆ ಅಂತ ಜವಾಬ್ದಾರಿ ಕೊಟ್ಟರೆ ಖಂಡಿತಾ ನಿರ್ವಹಿಸುತ್ತೇನೆ. ಜೊತೆಗೆ ಆಂಜನೇಯನ ಅನುಗ್ರಹ ಇದ್ದರೆ ಖಂಡಿತಾ  ಮಂತ್ರಿಯಾಗ್ತೀನಿ ಅಂತ ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡಿದ್ದಾರೆ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ..!