Asianet Suvarna News Asianet Suvarna News

ಸಿದ್ದರಾಮಯ್ಯ ಕ್ಷೇತ್ರ ಯಾವುದಯ್ಯಾ? ಇನ್ನೂ ನಿಂತಿಲ್ವಾ ಸಿದ್ದು ಕ್ಷೇತ್ರಾನ್ವೇಷಣೆ?

ಯಾವ ಕ್ಷೇತ್ರದಿಂದ ಚುನಾವಣೆಗೆ ನಿಲ್ಲಬೇಕು ಎನ್ನುವುದು ಸಿದ್ಧರಾಮಯ್ಯಗೆ ಇನ್ನೂ ಗೊಂದಲದಲ್ಲಿರುವಂತೆ ಕಾಣುತ್ತಿದೆ. ಕೋಲಾರದಲ್ಲಿ ಚುನಾವಣೆಗೆ ನಿಲ್ಲೋದು ಫಿಕ್ಸ್‌ ಎಂದು ಸಿದ್ಧರಾಮಯ್ಯ ಹೇಳುತ್ತಿದ್ದರೆ, ಇನ್ನೊಂದೆಡೆ ಅವರ ಪುತ್ರ ಯತೀಂದ್ರ ಸಿದ್ಧರಾಮಯ್ಯ ಬೇರೆಯದೇ ಹೇಳಿಕೆ ನೀಡುತ್ತಿದ್ದಾರೆ.
 

ಬೆಂಗಳೂರು (ಜ.27): ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆಂದು ಈಗಾಗಲೇ  ರಾಜ್ಯಕಾರಣದಲ್ಲಿ ಸಂಚಲನ ಶುರುವಾಗಿದೆ. ಆದರೆ, ವಿಪಕ್ಷ ನಾಯಕ ನಿರ್ಧಾರ ಬದಲಿಸ್ತಾರಾ ಎನ್ನುವ ಅನುಮಾನ ಕಾಡಿದೆ. ಇದರ ನಡುವೆ ಸಿದ್ಧರಾಮಯ್ಯ ಅವರ ಕ್ಷೇತ್ರಾನ್ವೇಷಣೆ ಇನ್ನೂ ನಿಂತಿಲ್ವಾ ಎನ್ನುವ ಅನುಮಾನವೂ ಶುರುವಾಗಿದೆ.

ಅದಕ್ಕೆ ಕಾರಣವಾಗಿರುವುದು ಯತೀಂದ್ರ ಸಿದ್ಧರಾಮಯ್ಯ ಅವರ ಹೇಳಿಕೆ. 'ಈಗಲೂ ಸಿದ್ದರಾಮಯ್ಯನವರಿಗೆ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಒಪನ್ ಅವಕಾಶವಿದೆ. ಇದು ಅವರ ಕೊನೆಯ ಚುನಾವಣೆ. ಹೀಗಾಗಿ ಯಾವ ಕ್ಷೇತ್ರದಲ್ಲಿ ನಿಲ್ಲಬೇಕೆಂಬ ಗೊಂದಲವಿದೆ' ಎಂದು ಅವರು ಹೇಳಿದ್ದಾರೆ.

ರಾಜ್ಯ ರಾಜಕೀಯದಲ್ಲಿ ಹಾಲಿ, ಮಾಜಿ ಸಿಎಂಗಳ ಭ್ರಷ್ಟಾಚಾರ ಬಡಿದಾಟ!

ಇದರ ಬೆನ್ನಲ್ಲಿಯೇ ಸಿದ್ಧರಾಮಯ್ಯ ಅವರ ಕ್ಷೇತ್ರ ಕೋಲಾರವೋ, ವರುಣವೋ ಎನ್ನುವ ಚರ್ಚೆ ಮತ್ತೆ ಶುರುವಾಗಿದೆ. ಸಿದ್ದರಾಮಯ್ಯನವರು ಈ ರಾಜ್ಯ ಕಂಡ ಅಪರೂಪದ ಜನಪರ ರಾಜಕಾರಣಿ. ಅವರದ್ದು ಇದು ಕೊನೆಯ ಚುನಾವಣೆ, ಸಿದ್ದರಾಮಯ್ಯ ಅವರಿಗೆ ಕ್ಷೇತ್ರವಿಲ್ಲ ಎಂಬ ಪ್ರಚಾರ ಪ್ರತಿಪಕ್ಷದ ತಂತ್ರವಾಗಿದೆ. ಸಿದ್ದರಾಮಯ್ಯ ನವರಿಗೆ ಬೇರೆ ಬೇರೆ ಕ್ಷೇತ್ರದಿಂದ ನಿಲ್ಲಿ ಎಂದು ಆಹ್ವಾನ ಬರುತ್ತಿದೆ. ಅವರದು ಈಗಲೇ ಕ್ಷೇತ್ರದ ಬಗ್ಗೆ ಫೈನಲ್ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.