Asianet Suvarna News Asianet Suvarna News

ರಾಜ್ಯ ರಾಜಕೀಯದಲ್ಲಿ ಹಾಲಿ, ಮಾಜಿ ಸಿಎಂಗಳ ಭ್ರಷ್ಟಾಚಾರ ಬಡಿದಾಟ!

ರಾಜ್ಯ ರಾಜಕೀಯದಲ್ಲಿ ಬಿಜೆಪಿ ಭ್ರಷ್ಟಾಚಾರ ಹಾಗೂ ಕಾಂಗ್ರೆಸ್‌ ಭ್ರಷ್ಟಾಚಾರದ ಕೆಸರೆರಚಾಟ ಆರಂಭವಾಗಿದೆ. ಭ್ರಷ್ಟಾಚಾರದ ವಿಚಾರದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬಿಜೆಪಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರೆ, ಕಾಂಗ್ರೆಸ್‌ ಕೂಡ ಭರ್ಜರಿಯಾಗಿ ತಿರುಗೇಟು ನೀಡಿದೆ.

ಬೆಂಗಳೂರು (ಜ.24): ರಾಜ್ಯ ರಾಜಕೀಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಭ್ರಷ್ಟಾಚಾರದ ಟಾಕ್‌ವಾರ್‌ ಆರಂಭವಾಗಿದೆ. ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ಅಂದು ಲೋಕಾಯುಕ್ತ ಸಂಸ್ಥೆಯನ್ನೇ ಮುಚ್ಚಿದ ಪುಣ್ಯಾತ್ಮರು. ತಮ್ಮ ಕರ್ಮಕಾಂಡ ಮುಚ್ಚಿಕೊಳ್ಳಲು ಲೋಕಾಯುಕ್ತ ಮುಚ್ಚಿ ಹಾಕಿದರು. ಅವರ ಮೇಲೆ 59 ಕೇಸ್ ಇತ್ತು, ಅದಕ್ಕೆ ಸಂಸ್ಥೆಯನ್ನೇ ಬಂದ್‌ ಮಾಡಿದರು ಎಂದು ಆರೋಪಿಸಿದ್ದಾರೆ.

ಬೆಂಗಳೂರನ್ನು ಹಾಳು ಮಾಡಿದವರೇ ಕಾಂಗ್ರೆಸ್ ನಾಯಕರು. ಕಾಂಗ್ರೆಸ್ ನಾಯಕರು ಭ್ರಷ್ಟಾಚಾರದಲ್ಲಿ ಪಿಎಚ್‌ಡಿ ಪಡೆದಿದ್ದಾರೆ. ಹತ್ತು ಹದಿನೈದು ಜನ ಸೇರಿಕೊಂಡು ಪ್ರತಿಭಟನೆ ಮಾಡ್ತಿದ್ದಾರೆ. ನಮ್ಮ ವಿರುದ್ಧ ಆರೋಪಕ್ಕೆ ದಾಖಲೆ ಇದ್ರೆ ಕಾಂಗ್ರೆಸ್‌ ಕೊಡಲಿ. ಲೋಕಾಯುಕ್ತಕ್ಕೆ ದಾಖಲೆ ಕೊಡಲಿ, ತನಿಖೆಯೂ ಆಗಲಿ. ತಮ್ಮ ಕೈಗೆ ಮಸಿ ಅಂಟಿದೆ, ಅದನ್ನು ಅವರು ನೋಡಿಕೊಳ್ಳಲಿ. ಕಾಂಗ್ರೆಸ್ ತಟ್ಟೆಯಲ್ಲಿ ಕತ್ತೆ ಬಿದ್ದಿದೆ ಅದನ್ನು ನೋಡಿಕೊಳ್ಳಲಿ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್‌ನಿಂದ ಬೆಂಗ್ಳೂರು ಹಾಳು: ಸಿಎಂ ಬೊಮ್ಮಾಯಿ

ಇನ್ನೊಂದೆಡೆ ಸಿದ್ಧರಾಮಯ್ಯ ಧಮ್ ಇದ್ದರೆ ಸುಪ್ರೀಂ ಜಡ್ಜ್ ನೇತೃತ್ವದಲ್ಲಿ ತನಿಖೆ ಮಾಡ್ಸಿ. ನಮ್ಮದನ್ನೂ ಕೊಡಿ,ನಿಮ್ಮ 40% ಬಗ್ಗೆಯೂ ತನಿಖೆ ಕೊಡಿ. ಅದಕ್ಕೆ ನಿಮ್ಮತ್ರ ಧಮ್ ಇಲ್ಲ ಎಂದು ಕಿಡಿಕಾರಿದ್ದಾರೆ. ಸುಮ್ನೆ ಹೇಳಿದ್ರೆ ಏನು ಪ್ರಯೋಜನ.. ಸಿಬಿಐಗೂ ಕೊಡಿ. ಹಿಂದೆ ನೀವು ವಿರೋಧ ಪಕ್ಷದಲ್ಲಿ ಇದ್ರಲ್ಲಾ.. ಸುಮ್ಮನಿದ್ದೀರಿ. ತನಿಖೆ ಮಾಡಿಸೋಕೆ ಧಮ್ ಇಲ್ಲ ಎಂದು ಹೇಳಿದ್ದಾರೆ.

Video Top Stories