ಮನವಿ ಪತ್ರ ಕಸದ ಪಾಲು! ಸಿಎಂ ಸ್ವೀಕರಿಸಿದ್ದ ಅಹವಾಲು ಕಸದ ರಾಶಿಯಲ್ಲಿ ಪತ್ತೆ !

ಚಾಮರಾಜನಗರಕ್ಕೆ ಜು.10 ರಂದು ಸಿಎಂ ಭೇಟಿ ನೀಡಿದ್ದರು. ಈ ವೇಳೆ ಸಾರ್ವಜನಿಕರು ಕೊಟ್ಟ ಮನವಿ ಪತ್ರಗಳು ಕಸದ ರಾಶಿಯಲ್ಲಿ  ಬಿದ್ದಿವೆ.
 

First Published Jul 13, 2024, 1:11 PM IST | Last Updated Jul 13, 2024, 1:15 PM IST

ಚಾಮರಾಜನಗರ: ಮುಖ್ಯಮಂತ್ರಿಗೆ ಕೊಟ್ಟ ಮನವಿ ಪತ್ರಗಳು ಕಸದ ರಾಶಿಗೆ ಸೇರಿದ್ದು, ಮುಖ್ಯಮಂತ್ರಿಗಳನ್ನೇ  ಭೇಟಿ ಮಾಡಿ ಮನವಿ ಸಲ್ಲಿಸಿದ್ರೆ ಸಮಸ್ಯೆ ಪರಿಹಾರ ಆಗುತ್ತೆ ಅನ್ನೋದು ಜನರ ಭರವಸೆಯಾಗಿತ್ತು. ಆದ್ರೆ ಈಗ ಮುಖ್ಯಮಂತ್ರಿ (Siddaramaiah) ಸ್ವೀಕರಿಸಿದ್ದ ಮನವಿ ಪತ್ರಗಳು ಕಸದ ರಾಶಿಯಲ್ಲಿ ‌ಪತ್ತೆಯಾಗಿವೆ. ಚಾಮರಾಜನಗರಕ್ಕೆ(Chamarajanagar) ಜು.10 ರಂದು ಸಿಎಂ ಭೇಟಿ ನೀಡಿದ್ದರು. ಕಾಂಗ್ರೆಸ್ (Congress)ಕೃತಜ್ಞತಾ ಸಮಾವೇಶದಲ್ಲಿ ಸಿಎಂ ಪಾಲ್ಗೊಂಡಿದ್ದರು. ಈ ವೇಳೆ ಮುಗಿಬಿದ್ದು ಮುಖ್ಯಮಂತ್ರಿಗೆ ಮನವಿ ಪತ್ರಗಳನ್ನು(Appeal letters) ಸಾರ್ವಜನಿಕರು ಹಾಗೂ ರೈತ ಸಂಘಟನೆಗಳು ಸಲ್ಲಿಸಿದ್ದರು. ವಿವಿಧ ಬೇಡಿಕೆ ಈಡೇರಿಸುವಂತೆ, ಸಮಸ್ಯೆ ಪರಿಹರಿಸುವಂತೆ  ಮುಖ್ಯಮಂತ್ರಿಗೆ ಖುದ್ದಾಗಿ ಮನವಿ ಸಲ್ಲಿಕೆ. ನಗರದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಕಸದ ರಾಶಿಯಲ್ಲಿ ಬಿದ್ದಿರುವ ಮನವಿಪತ್ರಗಳು. ಬಿಸಿಲನ್ನು ಲೆಕ್ಕಿಸದೆ ಗಂಟೆಗಟ್ಟಲೆ ಕಾದು ಸಾರ್ವಜನಿಕರು ಹಾಗೂ ರೈತ ಸಂಘಟನೆಗಳು ಮನವಿ ಸಲ್ಲಿಸಿದ್ದರು. ಇದು ದುರಹಂಕಾರದ ಪರಮಾವಧಿ ಎಂದು ರೈತ ಸಂಘಟನೆಗಳ ಆಕ್ರೋಶ ವ್ಯಕ್ತಪಡಿಸಿವೆ. ಸ್ವತಃ ಮುಖ್ಯಮಂತ್ರಿಯನ್ನೇ ಭೇಟಿ ಮಾಡಿ ಸಲ್ಲಿಸಿದ್ದ ಮನವಿ ಪತ್ರಗಳಿಗೆ ಈ ಗತಿಯಾದರೆ ಅಧಿಕಾರಿಗಳಿ ಸಲ್ಲಿಸುವ ಮನವಿಗಳ ಕಥೆ ಏನು? ಎಂದು ಆಕ್ರೋಶವಾಗಿದೆ. ಮುಖ್ಯಮಂತ್ರಿಗೆ ಕೊಟ್ಟ ಮನವಿ ಪತ್ರಗಳು ಕಸದ ರಾಶಿಗೆ ಸೇರಿದ್ದು, ಮುಖ್ಯಮಂತ್ರಿಗಳನ್ನೇ  ಭೇಟಿ ಮಾಡಿ ಮನವಿ ಸಲ್ಲಿಸಿದ್ರೆ ಸಮಸ್ಯೆ ಪರಿಹಾರ ಆಗುತ್ತೆ ಅನ್ನೋದು ಜನರ ಭರವಸೆಯಾಗಿತ್ತು. ಆದ್ರೆ ಈಗ ಮುಖ್ಯಮಂತ್ರಿ (Siddaramaiah) ಸ್ವೀಕರಿಸಿದ್ದ ಮನವಿ ಪತ್ರಗಳು ಕಸದ ರಾಶಿಯಲ್ಲಿ ‌ಪತ್ತೆಯಾಗಿವೆ. ಚಾಮರಾಜನಗರಕ್ಕೆ(Chamarajanagar) ಜು.10 ರಂದು ಸಿಎಂ ಭೇಟಿ ನೀಡಿದ್ದರು. ಕಾಂಗ್ರೆಸ್ (Congress)ಕೃತಜ್ಞತಾ ಸಮಾವೇಶದಲ್ಲಿ ಸಿಎಂ ಪಾಲ್ಗೊಂಡಿದ್ದರು. ಈ ವೇಳೆ ಮುಗಿಬಿದ್ದು ಮುಖ್ಯಮಂತ್ರಿಗೆ ಮನವಿ ಪತ್ರಗಳನ್ನು(Appeal letters) ಸಾರ್ವಜನಿಕರು ಹಾಗೂ ರೈತ ಸಂಘಟನೆಗಳು ಸಲ್ಲಿಸಿದ್ದರು. ವಿವಿಧ ಬೇಡಿಕೆ ಈಡೇರಿಸುವಂತೆ, ಸಮಸ್ಯೆ ಪರಿಹರಿಸುವಂತೆ  ಮುಖ್ಯಮಂತ್ರಿಗೆ ಖುದ್ದಾಗಿ ಮನವಿ ಸಲ್ಲಿಕೆ. ನಗರದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಕಸದ ರಾಶಿಯಲ್ಲಿ ಬಿದ್ದಿರುವ ಮನವಿಪತ್ರಗಳು. ಬಿಸಿಲನ್ನು ಲೆಕ್ಕಿಸದೆ ಗಂಟೆಗಟ್ಟಲೆ ಕಾದು ಸಾರ್ವಜನಿಕರು ಹಾಗೂ ರೈತ ಸಂಘಟನೆಗಳು ಮನವಿ ಸಲ್ಲಿಸಿದ್ದರು. ಇದು ದುರಹಂಕಾರದ ಪರಮಾವಧಿ ಎಂದು ರೈತ ಸಂಘಟನೆಗಳ ಆಕ್ರೋಶ ವ್ಯಕ್ತಪಡಿಸಿವೆ. ಸ್ವತಃ ಮುಖ್ಯಮಂತ್ರಿಯನ್ನೇ ಭೇಟಿ ಮಾಡಿ ಸಲ್ಲಿಸಿದ್ದ ಮನವಿ ಪತ್ರಗಳಿಗೆ ಈ ಗತಿಯಾದರೆ ಅಧಿಕಾರಿಗಳಿ ಸಲ್ಲಿಸುವ ಮನವಿಗಳ ಕಥೆ ಏನು? ಎಂದು ಆಕ್ರೋಶವಾಗಿದೆ.

ಇದನ್ನೂ ವೀಕ್ಷಿಸಿ:  ಎಐಸಿಸಿ ಸತ್ಯಶೋಧನಾ ಸಮಿತಿ ಸಭೆ: ಸೋಲಿನ ಹೊಣೆ ಇತರರ ಮೇಲೆ ಹೊರಿಸಲು ಮುಂದಾದವರಿಗೆ ಚಾಟಿ

Video Top Stories