ಎಐಸಿಸಿ ಸತ್ಯಶೋಧನಾ ಸಮಿತಿ ಸಭೆ: ಸೋಲಿನ ಹೊಣೆ ಇತರರ ಮೇಲೆ ಹೊರಿಸಲು ಮುಂದಾದವರಿಗೆ ಚಾಟಿ

ಚುನಾವಣಾ ಸೋಲಿನ ಪರಾಮರ್ಶೆ ಮಾಡಿದ ಎಐಸಿಸಿ ಸತ್ಯಶೋಧನಾ ಸಮಿತಿ
ಸತ್ಯಶೋಧನಾ ಸಮಿತಿ ಸಭೆಯ ವೇಳೆ ದೂರು-ದುಮ್ಮಾನಕ್ಕೆ ಹೆಚ್ಚಿನ ಆದ್ಯತೆ
ಸೋಲಿನ ಕಾರಣವನ್ನು ಇತರರ ಹೆಗಲಿಗೆ ಹಾಕಲು ಮುಂದಾದ ನಾಯಕರು
 

Share this Video
  • FB
  • Linkdin
  • Whatsapp

ಲೋಕಸಭಾ ಚುನಾವಣೆ (Lok Sabha election) ಸೋಲಿನ ಬಗ್ಗೆ ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದು, ಸೋಲಿನ ಬಗ್ಗೆ ಎಐಸಿಸಿ ಸತ್ಯಶೋಧನಾ ಸಮಿತಿ ಸಭೆ (AICC fact finding committee) ನಡೆಸಿದೆ. ಅಲ್ಲದೇ ಚುನಾವಣಾ ಸೋಲಿಗೆ ಇತರರ ಕಡೆಗೆ ಬೊಟ್ಟು ಮಾಡೋದು ಬಿಡಿ, ಸೋಲಿಗೆ ನಿಮ್ಮ ಪಾಲೆಷ್ಟು ಅನ್ನೋದನ್ನು ವಿಮರ್ಶೆ ಮಾಡಿಕೊಳ್ಳಿ ಎಂದಿದೆ. ಸೋಲಿನ ಹೊಣೆ ಇತರರ ಮೇಲೆ ಹೊರಿಸಲು ಮುಂದಾದವರಿಗೆ ಚಾಟಿ ಬೀಸಿದ್ದು, ಕಾಂಗ್ರೆಸ್ (Congress)ಸತ್ಯಶೋಧನಾ ಸಮಿತಿಯಿಂದ ಪಕ್ಷ ವಿರೋಧಿಗಳಿಗೆ ತಿರುಗೇಟು ನೀಡಲಾಗಿದೆ. ಇನ್ನೂ ಶಿವಮೊಗ್ಗದಲ್ಲಿ ಸೋಲಲು ಕಾರಣ ಕೊಟ್ಟ ಸಚಿವ ಮಧು ಬಂಗಾರಪ್ಪ, ಭದ್ರಾವತಿ ಲೀಡ್ ಕಡಿಮೆಯಾಗಿದ್ದೇ ಕಾರಣ ಎಂದಿದ್ದಾರೆ. ಭದ್ರಾವತಿ ಶಾಸಕರ ಮೇಲೆ ಗೂಬೆ ಕೂರಿಸುವ ಪ್ರಯತ್ನವನ್ನು ಮಧು ಬಂಗಾರಪ್ಪ(Madhu Bangarappa) ಮಾಡಿದ್ದಾರೆ. ಮಧು ಬಂಗಾರಪ್ಪ ವಿವರಣೆಗೆ ಮಧುಸೂಧನ್ ಮಿಸ್ತ್ರಿ ಅಸಮಾಧಾನ ಹೊರಹಾಕಿದ್ದಾರೆ. ಚುನಾವಣಾ ಹಿನ್ನಡೆಗೆ ನಿಮ್ಮ ಪಾತ್ರ ಎಷ್ಟು ಅಂತ ಸಮಿತಿ ಪ್ರಶ್ನಿಸಿದೆ. ಸಮಿತಿ ಸದಸ್ಯರ ವಿವರಗಳಿಂದ ಸಚಿವ ಮಧು ಬಂಗಾರಪ್ಪ ಕಂಗಾಲಾಗಿದ್ದಾರೆ. ಬೆಳಗಾವಿ ಕ್ಷೇತ್ರದ ಸೋಲಿನ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ರಿಂದ(Lakshmi Hebbalkar) ವಿವರಣೆ ಪಡೆಯಲಾಗಿದೆ. ಕೋಲಾರ ಕ್ಷೇತ್ರದ ಸೋಲಿನ ಕುರಿತು 100 ಪುಟಗಳ ವರದಿಯನ್ನು ನಾಯಕರು ಸಲ್ಲಿಸಿದ್ದಾರೆ.

ಇದನ್ನೂ ವೀಕ್ಷಿಸಿ: ನನ್ನದೇನು ತಪ್ಪಿಲ್ಲ, ನನಗೆ 24 ಗಂಟೆಗೊಮ್ಮೆ ಮೆಡಿಕಲ್ ಚೆಕಪ್ ಅಗತ್ಯವಿದೆ: ಜಡ್ಜ್‌ ಮುಂದೆ ನಾಗೇಂದ್ರ ಮನವಿ

Related Video