Asianet Suvarna News Asianet Suvarna News

5 ಗ್ಯಾರಂಟಿಗಳ ಸುತ್ತ 52 ಸಾವಿರ ಕೋಟಿಗಳ ಲೆಕ್ಕ: ಸಿದ್ದರಾಮಯ್ಯ ಮುಂದೆ ಅರ್ಧ ಲಕ್ಷ ಕೋಟಿಯ ಚಾಲೆಂಜ್..!

ಐದು ಗ್ಯಾರಂಟಿ.. ಅರ್ಧಲಕ್ಷ ಕೋಟಿಯ ಲೆಕ್ಕ.. ಸಿದ್ದು ಲೆಕ್ಕಾಚಾರ..!
½ ಲಕ್ಷ ಕೋಟಿಗಳ ಗ್ಯಾರಂಟಿ ಲೆಕ್ಕದ ಅಸಲಿ ಗುಟ್ಟೇನು..?
ಸಿದ್ದು ಟ್ರ್ಯಾಕ್ ರೆಕಾರ್ಡ್ ಈ ಬಾರಿಯೂ ಕೆಲಸ ಮಾಡುತ್ತಾ..?

ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದಾಯ್ತು. ಐದೂ ಗ್ಯಾರಂಟಿಗಳು ಇದೇ ತಿಂಗಳಿಂದ ಒಂದೊಂದಾಗಿ ಜಾರಿಗೆ ಬರಲಿವೆ ಅಂತ ಗ್ಯಾರಂಟಿರಾಮಯ್ಯ ಹೇಳಿದ್ದೂ ಆಯ್ತು. ಈಗ ಉಳಿದಿರೋ ಕುತೂಹಲ ಗ್ಯಾರಂಟಿ ಲೆಕ್ಕ. ಇದು ಅರ್ಧ ಲಕ್ಷ ಕೋಟಿಯ ಗ್ಯಾರಂಟಿ ಲೆಕ್ಕ. ಕೈ ಸರ್ಕಾರ ಪಂಚ ಗ್ಯಾರಂಟಿಗಳು ಬಿಚ್ಚಿಟ್ಟಿರೋ ಪಕ್ಕಾ ಲೆಕ್ಕ.ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ ಐದು ಗ್ಯಾರಂಟಿಗಳು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರಚಂಡ ಜಯಭೇರಿಯೊಂದಿಗೆ ಅಧಿಕಾರಕ್ಕೇರಿಸಿದೆ.2013ರಿಂದ 20178ರವರೆಗೆ ಮುಖ್ಯಮಂತ್ರಿಯಾಗಿದ್ದಾಗ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳಲ್ಲಿ 158ನ್ನು ಈಡೇರಿಸಿದ ಹೆಗ್ಗಳಿಕೆ ಸಿದ್ದರಾಮಯ್ಯನವರಿಗಿದೆ. ಅನ್ನಭಾಗ್ಯದಿಂದ ಹಿಡಿದು ಶಾದಿಭಾಗ್ಯದವರೆಗೆ ಸಿದ್ದರಾಮಯ್ಯ ಏನ್ ಹೇಳಿದ್ರೋ ಅದನ್ನು ಮಾಡಿ ತೋರಿಸಿದ್ರು.ಕಾಂಗ್ರೆಸ್ ಸರ್ಕಾರ ಘೋಷಿಸಿರೋ ಐದು ಗ್ಯಾರಂಟಿ ಯೋಜನೆಗಳಿಗೆ ವರ್ಷಕ್ಕೆ ಬೇಕಿರೋ ಅಂದಾಜು ಮೊತ್ತ 52 ಸಾವಿರ ಕೋಟಿ ರೂಪಾಯಿ. ಇದು ಬರೋಬ್ಬರಿ 52 ಸಾವಿರ ಕೋಟಿಗಳ ಲೆಕ್ಕ ಅನ್ನೋದು ಹಣಕಾಸು ಇಲಾಖೆಯ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲಿಸಿರುವ ಪ್ರಾಥಮಿಕ ಅಂದಾಜು ಪಟ್ಟಿಯಲ್ಲಿ ಬಹಿರಂಗಗೊಂಡಿದೆ.

ಇದನ್ನೂ ವೀಕ್ಷಿಸಿ: ಪಂಚ ಗ್ಯಾರಂಟಿಗಳಿಗೆ ಮುಹೂರ್ತ ಫಿಕ್ಸ್ : ಎಲ್ಲಾ ಯೋಜನೆಗಳಿಗೆ ಒಂದೇ ಕಡೆ ಅರ್ಜಿ ಸಲ್ಲಿಸಬಹುದಾ..?