ಪಂಚ ಗ್ಯಾರಂಟಿಗಳಿಗೆ ಮುಹೂರ್ತ ಫಿಕ್ಸ್ : ಎಲ್ಲಾ ಯೋಜನೆಗಳಿಗೆ ಒಂದೇ ಕಡೆ ಅರ್ಜಿ ಸಲ್ಲಿಸಬಹುದಾ..?
ಭಾಗ್ಯಗಳಿಗಾಗಿ ಅರ್ಜಿಯನ್ನ ಸಲ್ಲಿಸೋದು ಎಲ್ಲಿ..?
ರೇಷನ್ ಕಾರ್ಡ್ ಇಲ್ದೇ ಇರೋರಿಗೆ ಹಣ ಬರುತ್ತಾ..?
ಓಡಾಟಕ್ಕೆ ಪಾಸ್ ಬೇಕೋ..ಬಸ್ ಹತ್ತಿದ್ರೆ ಸಾಕೋ..?
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಚುನಾವಣೆಗೂ ಮುನ್ನ ಘೋಷಿಸಿದ್ದ ಉಚಿತ ಭರವಸೆಗಳಿಗೆ ಮುಹೂರ್ತವನ್ನ ಫಿಕ್ಸ್ ಮಾಡಿದೆ. ಇನ್ನೊಂದೇ ತಿಂಗಳಲ್ಲಿ ಬಹುತೇಕ ಎಲ್ಲಾ ಭಾಗ್ಯಗಳು ಕೂಡ ಅರ್ಹರಿಗೆ ಸಿಗಲಿದೆ. ಆದ್ರೆ ಈ ಯೋಜನೆಗಳ ಬಗ್ಗೆ ಜನರಿಗೆ ಒಂದಿಷ್ಟು ಗೊಂದಲಗಳು ಮೂಡಿವೆ. ಅನ್ನ ಭಾಗ್ಯಕ್ಕೆ ಏನೆಲ್ಲಾ ದಾಖಲಾತಿಗಳು ಬೇಕು..? ಉಚಿತ ಕರೆಂಟ್ ಲೆಕ್ಕಾಚಾರವೇನು..? ಬಸ್ ಓಡಾಟಕ್ಕೆ ಪಾಸ್ ಇರುತ್ತಾ ಹೀಗೆ ಹತ್ತಾರು ಪ್ರಶ್ನೆಗಳು ಜನರಲ್ಲಿ ಮೂಡಿವೆ.ರೇಷನ್ ಕಾರ್ಡ್ ಇಲ್ಲದೇ ಇರೋರಿಗೆ 2000 ಸಿಗುತ್ತಾ ಇಲ್ವಾ ಅನ್ನೋ ಕ್ಲಾರಿಟಿ ಜನರಿಗೆ ಇಲ್ಲ. ಸರ್ಕಾರ ಸದ್ಯಕ್ಕೆ ಬ್ಯಾಂಕ್ ಅಕೌಂಟ್ ಡಿಟೇಲ್ಸ್ ಹಾಗೂ ಆಧಾರ್ ಕಾರ್ಡ್ ಇದ್ರೆ ಸಾಕು, ಮನೆಯೊಡತಿಗೆ 2000 ರೂಪಾಯಿ ಆಗಷ್ಟ್ 15 ರಿಂದ ಸಿಗಲಿದೆ ಅಂದಿದೆ. ರೇಷನ್ ಕಾರ್ಡ್ ಬಗ್ಗೆ ಎಲ್ಲೂ ಹೇಳದೇ ಇರೋದಕ್ಕೆ ಪ್ರಶ್ನೆಗಳು ಮೂಡೋದು ಸಹಜವಾಗಿದೆ.
ಇದನ್ನೂ ವೀಕ್ಷಿಸಿ: ಒಡಿಶಾ ರೈಲು ದುರಂತದ ಹಿಂದಿರೋ ಅಸಲಿ ಸತ್ಯ ಏನು?: ಭಯಾನಕ ಅನುಭವ ಎಳೆಎಳೆಯಾಗಿ ಬಿಚ್ಚಿಟ್ಟ ಪ್ರಯಾಣಿಕ..!